ಸಾರಾಂಶ
ಸಾಗರ ಪಟ್ಟಣದ ರೋಟರಿ ಭವನದಲ್ಲಿ ನಡೆದ ೨೦೨೪-೨೫ನೇ ಸಾಲಿನ ರೋಟರಿ ಪದ ಸ್ವೀಕಾರ ಸಮಾರಂಭ ನಡಯಿತು.
ಕನ್ನಡಪ್ರಭ ವಾರ್ತೆ ಸಾಗರ
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆ ಆರಂಭ ಮಾಡಿದ ರಕ್ತನಿಧಿ ಕೇಂದ್ರದಿಂದ ಸಂಸ್ಥೆಯ ಹೆಸರು ಶಾಶ್ವತವಾಗಿದೆ. ಈ ಕೊಡುಗೆಯನ್ನು ಜನರು ಯಾವತ್ತೂ ಮರೆಯುವುದಿಲ್ಲ ಎಂದು ಜಿಲ್ಲಾ ರೋಟರಿ ಫೌಂಡೇಷನ್ ಅಧ್ಯಕ್ಷ ಡಾ.ಪಿ.ನಾರಾಯಣ ಶ್ಲಾಘಿಸಿದರು.ಪಟ್ಟಣದ ರೋಟರಿ ಭವನದಲ್ಲಿ ನಡೆದ ೨೦೨೪-೨೫ನೇ ಸಾಲಿನ ರೋಟರಿ ಪದ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಸುಮಾರು ೩೦ ಸಾವಿರ ಜನರ ಜೀವ ಉಳಿದಿದೆ. ಈ ಕೇಂದ್ರವಿಲ್ಲದಿದ್ದರೆ ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಪರಿತಪಿಸುವ ಸಂದರ್ಭವಿತ್ತು ಎಂದರು.
ವಿಶ್ವದಲ್ಲಿ ೩೬ ರೋಟರಿ ಕ್ಲಬ್ ಚಾಲ್ತಿಯಲ್ಲಿದೆ. ೧೨ ಲಕ್ಷ ಸದಸ್ಯರು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ೩ ಲಕ್ಷ ಹೊಸ ಪದಾಧಿಕಾರಿಗಳು ಪ್ರತಿ ವರ್ಷ ಬದಲಾ ಗುತ್ತಾರೆ. ಇದು ರೋಟರಿ ಸಂಸ್ಥೆಯ ವಿಶೇಷತೆ. ರೋಟರಿ ಸಂಸ್ಥೆಯಿಂದ ಯಾವುದೇ ಲಾಭವಿಲ್ಲ. ಯಾರೂ ಅದನ್ನು ನಿರೀಕ್ಷಿಸಬಾರದು. ಆದರೆ ಕಣ್ಣಿಗೆ ಕಾಣದ ರೀತಿಯ ಲಾಭವಿದೆ ಎಂದು ವಿವರಿಸಿದರು.ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಮಾತನಾಡಿದರು.
ಡಾ.ಪಿ.ನಾರಾಯಣ ಅವರು ನೂತನ ಅಧ್ಯಕ್ಷ ಡಾ.ನಿರಂಜನ ಹೆಗಡೆ ಹೊಸಬಾಳೆ, ಕಾರ್ಯದರ್ಶಿ ಸಂದೇಶ ಕುಮಾರ ಶೆಟ್ಟಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಎಚ್.ಎಸ್.ಜೀವನ್, ಯಶವಂತ ಹಾಗೂ ಶ್ರೀಕಾಂತ್ ಅವರು ನೂತನವಾಗಿ ರೋಟರಿ ಸಂಸ್ಥೆಗೆ ಸೇರ್ಪಡೆಗೊಂಡರು.ನೂತನ ಅಧ್ಯಕ್ಷ ಡಾ.ನಿರಂಜನ ಹೆಗಡೆ ಹೊಸಬಾಳೆ, ಸಂಸ್ಥೆ ವಲಯ ಸಹಾಯಕ ರಾಜ್ಯಪಾಲ ಪ್ರೊ.ಸುರೇಶ್ ಎಚ್.ಎಂ. ಹಾಗೂ ಝೋನಲ್ ಲೆಫ್ಟಿನೆಂಟ್ ಸಂತೋಷ್ ಟಿ.ಆರ್. ಮಾತನಾಡಿದರು. ಪ್ರಭಾಕರ ರಾವ್ ಹೊಸಬಾಳೆ, ಶಾಂತಾ ಪ್ರಭಾಕರ, ವಿನುತ, ಎಚ್.ಎಸ್.ಮಂಜಪ್ಪ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))