ಸೇವೆಗೆ ಮತ್ತೊಂದು ಹೆಸರು ರೋಟರಿ ಸಂಸ್ಥೆ: ಸ್ಮಿತಾ ಸುರೇಶ್

| Published : Oct 19 2025, 01:00 AM IST

ಸಾರಾಂಶ

ಬಾಳೆಹೊನ್ನೂರು, ಸಾಮಾಜಿಕ ಚಟುವಟಿಕೆ ಹಾಗೂ ಸೇವೆಗೆ ಮತ್ತೊಂದು ಹೆಸರು ರೋಟರಿ ಸಂಸ್ಥೆ ಎಂದು ರೋಟರಿ ಜೋನಲ್ ಕೋ-ಆರ್ಡಿನೇಟರ್ ಸ್ಮಿತಾ ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಾಮಾಜಿಕ ಚಟುವಟಿಕೆ ಹಾಗೂ ಸೇವೆಗೆ ಮತ್ತೊಂದು ಹೆಸರು ರೋಟರಿ ಸಂಸ್ಥೆ ಎಂದು ರೋಟರಿ ಜೋನಲ್ ಕೋ-ಆರ್ಡಿನೇಟರ್ ಸ್ಮಿತಾ ಸುರೇಶ್ ಹೇಳಿದರು.ಪಟ್ಟಣದ ರೋಟರಿ ಕ್ಲಬ್ ನಿಂದ ಆದರ್ಶನಗರ ಇಟ್ಟಿಗೆ ಸೀಗೋಡಿನಲ್ಲಿ ಆಯೋಜಿಸಿದ್ದ ರೋಟರಿ ಸಮುದಾಯ ದಳದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆ ಸಮಾಜದಲ್ಲಿ ಹತ್ತಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದು, ಶಿಕ್ಷಣ, ಆರೋಗ್ಯಕ್ಕೆ ಸಾಕಷ್ಟು ಒತ್ತು ನೀಡುತ್ತಿದೆ. ಈ ಎರಡು ವಿಭಾಗದಲ್ಲಿ ಸಾವಿರಾರು ಕಾರ್ಯಕ್ರಮವನ್ನು ವರ್ಷವಿಡೀ ಸಂಸ್ಥೆ ವಿವಿಧ ಭಾಗಗಳಲ್ಲಿ ನಡೆಸುತ್ತಿದೆ.

ಆದರ್ಶನಗರ ಗ್ರಾಮದ ಜನರು ರೋಟರಿ ಸಮುದಾಯ ದಳವನ್ನು ಆರಂಭಿಸಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಸೇವಾ ಕಾರ್ಯಗಳ ಮೂಲಕ ಗಮನಸೆಳೆಯುತ್ತಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಹೆಚ್ಚಿನ ಕಾರ್ಯಕ್ರಮ ನಡೆಸಬೇಕು ಎಂದು ಸಲಹೆ ನೀಡಿದರು.ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಕೆ.ಟಿ.ವೆಂಕಟೇಶ್ ಮಾತನಾಡಿ, ರೋಟರಿ ಸಂಸ್ಥೆ 220 ದೇಶಗಳಲ್ಲಿ ಕಾರ್ಯನಿ ರ್ವಹಿಸುತ್ತಿದ್ದು, 120 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ವಿಶ್ವದಲ್ಲಿ ಪೊಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸ್ಥೆ ಇದಾಗಿದೆ.ನಿಸ್ವಾರ್ಥ ಸೇವೆ ಮೂಲಕ ರೋಟರಿ ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೇಗೆ ಬದುಕಬೇಕು ಎಂಬುದಕ್ಕೆ ರೋಟರಿ ಸಂಸ್ಥೆ ಮಾರ್ಗದರ್ಶನ ನೀಡುತ್ತಿದೆ. ಸಮಾಜದಲ್ಲಿ ಕೇವಲ ಕೆಲಸವನ್ನು ಹೇಗೆ ಮಾಡ ಬೇಕು ಎಂಬುದಕ್ಕಿಂತ ಜನರ ಜೊತೆ ಹೇಗೆ ಬದುಕಬೇಕು ಎಂಬುದು ಮುಖ್ಯ. ಆದರ್ಶನಗರದಲ್ಲಿ ಕಳೆದ 2 ವರ್ಷಗಳಿಂದ ರೋಟರಿ ಸಮುದಾಯ ದಳವು ಹತ್ತಾರು ಕಾರ್ಯಕ್ರಮ ನಿರ್ವಹಿಸಿದ್ದು, ಗ್ರಾಮೀಣ ಭಾಗದಲ್ಲಿ ರೋಟರಿಯ ಕಾರ್ಯಗಳು ಜನರನ್ನು ತಲುಪುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.ರೋಟರಿ ಸಮುದಾಯ ದಳದ ನೂತನ ಅಧ್ಯಕ್ಷರಾಗಿ ಕಾರ್ತಿಕ್ ಕಾರ್‌ಗದ್ದೆ, ಕಾರ್ಯದರ್ಶಿಯಾಗಿ ಎಂ.ಎನ್.ಜಗದೀಶ್ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಕೃಷಿಕ ಎಸ್.ಕೆ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.ರೋಟರಿ ಅಧ್ಯಕ್ಷ ಎಂ.ವಿ.ತಿಮ್ಮಯ್ಯಗೌಡ, ಕಾರ್ಯದರ್ಶಿ ಸೈಯ್ಯದ್ ಫಾಜಿಲ್ ಹುಸೇನ್, ರೋಟರಿ ಆರ್‌ಸಿಸಿ ವಿಭಾಗದ ಛರ‍್ಮನ್ ಬಿ.ಎಸ್.ಸಾಗರ್, ಲಕ್ಷ್ಮೀಶ್, ಪ್ರೀತಿ ಮತ್ತಿತರರು ಹಾಜರಿದ್ದರು.೧೭ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಆದರ್ಶನಗರ ಇಟ್ಟಿಗೆ ಸೀಗೋಡಿನಲ್ಲಿ ನಡೆದ ರೋಟರಿ ಸಮುದಾಯ ದಳದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ರೋಟರಿ ಜೋನಲ್ ಕೋ-ಆರ್ಡಿನೇಟರ್ ಸ್ಮಿತಾ ಸುರೇಶ್ ಉದ್ಘಾಟಿಸಿದರು. ಕೆ.ಟಿ. ವೆಂಕಟೇಶ್, ಎಂ.ವಿ.ತಿಮ್ಮಯ್ಯ, ಸೈಯ್ಯದ್ ಫಾಜಿಲ್, ಕಾರ್ತಿಕ್ ಕಾರ್‌ಗದ್ದೆ, ಎಂ.ಎನ್.ಜಗದೀಶ್ ಇದ್ದರು.