ನೆಲಮಂಗಲ: ರೋಟರಿ ಸಂಸ್ಥೆ ನೂರರು ಉಚಿತ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮಾನಸದಲ್ಲಿ ಉಳಿದಿದೆ ಎಂದು ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು ಹೇಳಿದರು
ನೆಲಮಂಗಲ: ರೋಟರಿ ಸಂಸ್ಥೆ ನೂರರು ಉಚಿತ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮಾನಸದಲ್ಲಿ ಉಳಿದಿದೆ ಎಂದು ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು ಹೇಳಿದರು.
ನಗರದಲ್ಲಿ ನೆಲಮಂಗಲ ರೋಟರಿ ಸಂಸ್ಥೆಯ 19ನೇ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಪ್ರಾರಂಭದಿಂದಲೂ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಪಶು ವೈದ್ಯಕೀಯ ಚಿಕಿತ್ಸೆ, ಸ್ವಯಂ ರಕ್ತದಾನ ಶಿಬಿರ, ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೇವೆ, ಬಡವರಿಗೆ ಉಚಿತ ಹಸು ಕರುಗಳ ವಿತರಣೆ, ಉಚಿತ ಹೃದಯ ಶಸ್ತ್ರಚಿಕಿತ್ಸೆ, ಶಾಲೆಗಳಿಗೆ ಉಚಿತ, ಡೆಸ್ಕ್, ಸ್ಮಾರ್ಟ್ ಬೋರ್ಡ್ ಗಳ ವಿತರಣೆ, ಕಲಿಕಾ ಸಾಮಗ್ರಿ,ಳು ಬ್ಯಾಗುಗಳ ವಿತರಣೆ, ಹ್ಯಾಪಿ ಸ್ಕೂಲ್ ಅಂಗನವಾಡಿಗಳ ಮರು ನವೀಕರಣ, ಕುಡಿಯುವ ನೀರಿನ ಘಟಕಗಳು, ಮಳೆ ನೀರು ಕೊಯ್ಲು ಅಳವಡಿಸುವಿಕೆ, ಉತ್ತಮ ಶಿಕ್ಷಕರಿಗೆ ರಾಷ್ಟ್ರ ನಿರ್ಮಾತೃ ಪ್ರಶಸ್ತಿ ನೀಡಿ ಗೌರವಿಸುವುದೂ ಸೇರಿದಂತೆ ಅನೇಕ ಸೇವಾಕಾರ್ಯಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ ಎಂದು ಹೇಳಿದರು.ರೋಟರಿ ಸಂಸ್ಥಾಪಕ ಅಧ್ಯಕ್ಷ ರೊ.ಹೆಚ್. ಜಿ ರಾಜು ಮಾತನಾಡಿ, ರೋಟರಿ ಸಂಸ್ಥೆ ವಿಶ್ವಾದ್ಯಂತ 220ಕ್ಕೂ ಹೆಚ್ಚು ದೇಶಗಳಲ್ಲಿ 122 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಸಮುದಾಯಗಳ ಸೇವೆಯೊಂದಿಗೆ ಪ್ರಾರಂಭವಾಗಿ ವಿಶ್ವಾದ್ಯಂತ ತನ್ನ ಉಚಿತ ಸೇವಾ ಕಾರ್ಯಯೋಜನೆಗಳನ್ನು ವಿಸ್ತಿರಿಸಿದೆ ಎ೦ದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆರ್.ರವಿಕುಮಾರ್, ಜಂಟಿ ಕಾರ್ಯದರ್ಶಿ ರೊ.ಸೋಮಶೇಖರ್, ಟ್ರಸ್ಟ್ ಅಧ್ಯಕ್ಷರಾದ ರೊ.ಎಂ.ಎನ್.ಹರೀಶ್ ಕುಮಾರ್, ವಲಯ ರಾಯಭಾರಿ ರೊ.ಮಂಜುನಾಥ್ ಪಾಟೀಲ್, ಮಂಜುನಾಥ್ ಎನ್.ಜಿ,ನಾಗರಾಜು ಸಿ.ಜಿ.ಮಂಜುನಾಥ್ ಗೌಡ ವನರಾಜು ಬಾವಿ ಅಧ್ಯಕ್ಷರಾದ ಕೆ.ಎಸ್.ಲೋಕೇಶ್, ಎನ್. ಜಿ ಚಂದ್ರ ಕುಮಾರ್, ನಿರ್ದೇಶಕರಾದ ಶಿವಶಂಕರ್, ನಾಗರಾಜು, ಬಸವರಾಜು, ಕೆಂಪೇಗೌಡ, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.ಪೊಟೊ-10ಕೆಎನ್ಎಲ್ಎಮ್ 1-
ನೆಲಮಂಗಲದಲ್ಲಿ ನೆಲಮಂಗಲ ರೋಟರಿ ಸಂಸ್ಥೆಯ 19ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರೊ.ಜಿ.ಆರ್.ನಾಗರಾಜು, ಸಂಸ್ಥಾಪಕ ಅಧ್ಯಕ್ಷ ರೊ.ಹೆಚ್. ಜಿ ರಾಜು, ಕಾರ್ಯದರ್ಶಿ ಆರ್. ರವಿಕುಮಾರ್ ಮತ್ತಿತರರು ಪಾಲ್ಗಂಡಿದ್ದರು.