ರೋಟರಿಸಂಸ್ಥೆ, ಪುರಸಭೆ ಕಾರ್ಯ ಉತ್ತಮ: ಶಾಸಕ ಕೆ.ಎಸ್. ಆನಂದ್

| Published : Apr 22 2025, 01:45 AM IST

ಸಾರಾಂಶ

ಕಡೂರು, ರೋಟರಿ ಸಂಸ್ಥೆ ಪುರಸಭೆ ಜೊತೆಗೂಡಿ ಸಾರ್ವಜನಿಕರಿಂದ ₹1 ಕೋಟಿಗೂ ಹೆಚ್ಚಿನ ಹಣ ಸಂಗ್ರಹಿಸಿ ಪಟ್ಟಣಕ್ಕೆ ಅಗತ್ಯವಿದ್ದ ಅನಿಲ ಚಿತಾಗಾರ ಘಟಕ ಸ್ಥಾಪಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಸ್ಮಶಾನದಲ್ಲಿ ನಿರ್ಮಿಸಿರುವ ನೂತನ ಅನಿಲ ಚಿತಾಗಾರ ಘಟಕ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಕಡೂರು

ರೋಟರಿ ಸಂಸ್ಥೆ ಪುರಸಭೆ ಜೊತೆಗೂಡಿ ಸಾರ್ವಜನಿಕರಿಂದ ₹1 ಕೋಟಿಗೂ ಹೆಚ್ಚಿನ ಹಣ ಸಂಗ್ರಹಿಸಿ ಪಟ್ಟಣಕ್ಕೆ ಅಗತ್ಯವಿದ್ದ ಅನಿಲ ಚಿತಾಗಾರ ಘಟಕ ಸ್ಥಾಪಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಸೋಮವಾರ ಕಡೂರಿನ ರೋಟರಿ ಕ್ಲಬ್ ಮತ್ತು ಪುರಸಭೆ ಸಂಯುಕ್ತ ಆಶ್ರಯದಲ್ಲಿ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಸ್ಮಶಾನದಲ್ಲಿ ನಿರ್ಮಿಸಿರುವ ನೂತನ ಅನಿಲ ಚಿತಾಗಾರ ಘಟಕ ಲೋಕಾರ್ಪಣೆ ಮಾಡಿ ಮಾತನಾಡಿದರು. ಪಟ್ಟಣದ ಜನತೆಯ ಬಹುದಿನಗಳ ಕನಸನ್ನು ರೋಟರಿ ಸಂಸ್ಥೆ ನನಸಾಗಿಸಿದೆ. ಈ ಅನಿಲ ಚಿತಾಗಾರ ಸ್ಥಾಪನೆಗೆ ರೋಟರಿಯ ಎಲ್ಲ ಸದಸ್ಯರು ಅಧ್ಯಕ್ಷರೊಂದಿಗೆ ದಾನಿಗಳ ಸಹಕಾರದಿಂದ ಒಂದು ಕೋಟಿ ದೇಣಿಗೆ ಸಂಗ್ರಹಿಸಿ ಸತ್ತ ವ್ಯಕ್ತಿಯ ದೇಹ ಸುಡು ವಂತಹ ಆಧುನಿಕ ಯಂತ್ರಗಳನ್ನು ಅಳವಡಿಸಿ ಪಟ್ಟಣದ ಎಲ್ಲ ವರ್ಗದವರಿಗೂ ಅನುಕೂಲವಾಗುವ ಕೆಲಸ ಮಾಡಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತು ಸದಸ್ಯರು ಸೇರಿ ಸ್ಮಶಾನದಲ್ಲಿ ಮೂಲ ಸೌಕರ್ಯ ನಿರ್ಮಿಸಿ ಚಿತಾಗಾರ ಸ್ಥಾಪನೆಗೆ ರೋಟರಿಗೆ ಸಹಕಾರ ನೀಡಿರುವ ಕಾರ್ಯಕ್ಕೆ ಅಭಿನಂದಿಸುತ್ತೇನೆ ಎಂದರು.ತಾವು ಕೂಡ ದಾನಿಗಳಂತೆ ವೈಯುಕ್ತಿಕವಾಗಿ ₹1 ಲಕ್ಷ ಮತ್ತು ಸರ್ಕಾರಿಂದ ₹5 ಲಕ್ಷ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ರೋಟರಿ ಸಂಸ್ಥೆಯ ಜನಪರ ಕೆಲಸ ಕಾರ್ಯಗಳಿಗೆ ಸದಾ ನಮ್ಮ ಸಹಕಾರ ಇರುತ್ತದೆ ಎಂಬ ಭರವಸೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರೋಟರಿ ಸಂಸ್ಥೆಯವರು ಚಿತಾಗಾರ ಸ್ಥಾಪನೆಗೆ ಮುಂದಾದಾಗ ಪುರಸಭೆ ಆಡಳಿತದಿಂದ ₹45 ಲಕ್ಷ ವನ್ನು ಸ್ಮಶಾನ ಅಭಿವೃದ್ಧಿಗೆ ನೀಡಿ ರಸ್ತೆ, ಶೌಚಾಲಯ, ಕುಡಿಯುವ ನೀರು, ವಿದ್ಯುತ್‌ ಬೆಳಕಿನ ವ್ಯವಸ್ಥೆಗಳನ್ನು ಮಾಡಿ ರೋಟರಿ ಸಂಸ್ಥೆಗೆ ಚಿತಾಗಾರ ಮಾಡಲು ಸಹಕಾರ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಅತ್ಯುತ್ತಮ ಚಿತಾಗಾರ ಸ್ಥಾಪನೆಯಾಗಿರುವುದು ತಮಗೆ ತೃಪ್ತಿ ನೀಡಿದೆ. ಪುರಸಭೆ ಆಡಳಿತ ಸಂಘ ಸಂಸ್ಥೆಗಳು ಮಾಡುವ ಸಾರ್ವಜನಿಕ ಕೆಲಸಗಳಿಗೆ ಸದಾ ಬೆಂಬಲವಾಗಿ ಇರುತ್ತದೆ ಎಂದರು.ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಕಡೂರು ರೋಟರಿ ಸಂಸ್ಥೆ ಮತ್ತು ಪುರಸಭೆ ಆಡಳಿತ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ. ಇದಕ್ಕಾಗಿ ರೋಟರಿ ಸಂಸ್ಥೆ ಎಲ್ಲರನ್ನು ಹಾಗೂ ದಾನಿಗಳನ್ನು ಅಬಿನಂಧಿಸುತ್ತೇನೆ. ಶಾಸಕ ಆನಂದಣ್ಣ ಅವರ ಮಾರ್ಗದರ್ಶನದಲ್ಲಿ ಇಂತಹ ಜನೋಪಯೋಗಿ ಕೆಲಸಗಳಿಗೆ ಅನುದಾನ ನೀಡುವ ಭರವಸೆ ನೀಡಿದರು.ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ರೋಟರಿ ಸಂಸ್ಥೆ ಸಮಾಜಮುಖಿ ಕೆಲಸ ಮಾಡಿದೆ ಕಟ್ಟ ಕಡೆಯ ವ್ಯಕ್ತಿಗೂ ಸದ್ಬಳಕೆಯಾಗುವ ಚಿತಾಗಾರ ನಿರ್ಮಿಸಿ ಜಿಲ್ಲೆಯಲ್ಲಿಯೇ ನೂತನ ದಾಖಲೆ ಮಾಡಿದ್ದಾರೆ. ಸಂಘ ಸಂಸ್ಥೆ ಗಳು ಸಾರ್ವಜನಿಕ ಕೆಲಸ ಮಾಡಿದರೆ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ. ಕಡೂರು ರೋಟರಿ ಸಂಸ್ಥೆ ಉತ್ತಮ ಕಾರ್ಯ ಮಾಡಿದೆ ತಾವು ಸಹ ₹5 ಲಕ್ಷ ಅನುದಾನ ನೀಡಿದ್ದೇನೆ ಎಂದು ಹೇಳಿ, ಪ್ಲಾಸ್ಟಿಕ್ ಬಳಕೆಯನ್ನು ಅದರಲ್ಲೂ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಹೂಗಳನ್ನು ಅಲಂಕಾರಕ್ಕೆ ಉಪಯೋಗಿಸುವುದನ್ನು ನಿಷೇದಿಸಬೇಕು ಎಂದು ಮನವಿ ಮಾಡಿದರು.ಟಿ.ಡಿ.ಸತ್ಯನ್ ಒಂದು ವರ್ಷದ ಅವಧಿಯಲ್ಲಿ ದಾನಿಗಳ ಸಹಕಾರದಿಂದ ಚಿತಾಗಾರ ನಿರ್ಮಿಸಿ ಲೋಕಾರ್ಪಣೆ ಮಾಡಿರುವುದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.ರೋಟರಿ ಅಧ್ಯಕ್ಷ ಟಿ.ಡಿ.ರಾಜನ್ ಅಧ್ಯಕ್ಷತೆ ವಹಿಸಿ ನೂತನ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಸಾರ್ವಜನಿಕರು,ಪುರಸಭೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಅನಿಲ ಚಿತಾಗಾರಕ್ಕೆ ಬೆಳ್ಳಿ ಬಳಗದಿಂದ ಅಂಬುಲೆನ್ಸ್, ಅಮೇರಿಕಾ ಕ್ಯಾನ್ಸಸ್ ನಿವಾಸಿಗಳಿಂದ ಶವ ಇಡುವ ಪ್ರೀಜರ್ ಹಾಗೂ ಬೆಂಗಳೂರಿನ ವಸಂತಕುಮಾರ್ ಮಹಳತ್ಕರ್ ಅವರು ಜನರೇಟರನ್ನು ಕೊಡುಗೆಯಾಗಿ ನೀಡಿದರು.ರೋಟರಿ ಜಿಲ್ಲಾ ಗವರ್ನರ್ ಸಿ.ದೇವಾನಂದ್, ಟಿ.ಡಿ.ಸತ್ಯನ್, ಪುರಸಭೆ ಸದಸ್ಯ ತೋಟದ ಮನೆ ಮೋಹನ್, ರೋಟರಿಯನ್ ಕೆ.ಪಿ.ರಾಘವೇಂದ್ರ, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಶಿವಕುಮಾರ್,ನಾಸಿರ್ ಹುಸೇನ್, ಗೀತಾ, ಎಸ್.ಟಿ.ಚಂದ್ರಪ್ಪ ,ಮುರಳಿಕೊಠಾರಿ, ಎ.ಎಚ್.ಮಂಜುನಾಥ್, ಶಂಕರ್ ಪವಾರ್, ಕೆಎಚ್‍ಎ.ಪ್ರಸನ್ನ. ಪ್ರೇಂ ಕುಮಾರ್, ರಘುರಾಮ್, ಸವಿತಾ ಸತ್ಯನಾರಾಯಣ ,ಮುಕುಂದ್‌, ಉದಯಚಂದ್ರ,ರೋಟರಿ ಸಂಸ್ಥೆ ಸದಸ್ಯರು ವಿವಿಧ ಸಮಾಜಗಳ ಅಧ್ಯಕ್ಷರು ದಾನಿಗಳು ಭಾಗವಹಿಸಿದ್ದರು. 21ಕೆಕೆಡಿಯು3. ಕಡೂರು ರೋಟರಿ ಕ್ಲಬ್ ಮತ್ತು ಪುರಸಭೆ ಆಡಳಿತ ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಮೀಪದ ಸ್ಮಶಾನದಲ್ಲಿ ನಿರ್ಮಿಸಿರುವ ರೋಟರಿ ಅನಿಲ ಚಿತಾಗಾರವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು.ಶಾಸಕ ಕೆ.ಎಸ್.ಆನಂದ್, ಸಂಸದ ಶ್ರೇಯಸ್ ಪಟೇಲ್, ವಿಪ ಸದಸ್ಯ ಎಲ್.ಎಲ್.ಭೊಜೇಗೌಡ ಟಿ.ಡಿ.ರಾಜನ್ ಇದ್ದರು.

21ಕೆಕೆಡಿಯು 1ಎ.

ಕಡೂರು ರೋಟರಿ ಕ್ಲಬ್ ಮತ್ತು ಪುರಸಭೆ ಆಡಳಿತವು ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಮೀಪದ ಸ್ಮಶಾನದಲ್ಲಿ ನಿರ್ಮಿಸಿರುವ ರೋಟರಿ ಅನಿಲ ಚಿತಾಗಾರದ ಕಾರ್ಯ ನಿರ್ವಹಣೆಯನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಶಾಸಕ ಕೆ.ಎಸ್.ಆನಂದ್,ಸಂಸದ ಶ್ರೇಯಸ್ ಪಟೇಲ್,ವಿಧಾನ ಪರಿಷತ್ ಸದಸ್ಯ ಎಲ್.ಎಲ್.ಭೊಜೇಗೌಡ ಟಿ.ಡಿ.ರಾಜನ್ ವೀಕ್ಷಿಸಿದರು.