ಚನ್ನಪಟ್ಟಣ: ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ಹಾಗೂ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರೋಟರಿ ಇಂಟರ್ ನ್ಯಾಷನಲ್ ಜಿಲ್ಲೆ ೩೧೯೧ರ ಬೇಸಿಕ್ ಎಜುಕೇಷನ್ ಆಂಡ್ ಲಿಟರಸಿ ವಿಭಾಗದ ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಮಾಡಲಾಯಿತು
ಚನ್ನಪಟ್ಟಣ: ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ಹಾಗೂ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರೋಟರಿ ಇಂಟರ್ ನ್ಯಾಷನಲ್ ಜಿಲ್ಲೆ ೩೧೯೧ರ ಬೇಸಿಕ್ ಎಜುಕೇಷನ್ ಆಂಡ್ ಲಿಟರಸಿ ವಿಭಾಗದ ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಮಾಡಲಾಯಿತು.
ರೋಟರಿ ಜಿಲ್ಲೆ ೩೧೯೧ರ ಜಿಲ್ಲಾ ಪಾಲಕ ಡಾ. ಅನಿಲ್ ಗುಪ್ತ, ನಿಕಟಪೂರ್ವ ಜಿಲ್ಲಾ ಪಾಲಕ ಸತೀಶ್ ಮಾಧವನ್, ನಿಯೋಜಿತ ಜಿಲ್ಲಾ ಪಾಲಕ ರೋ. ಕುಮಾರಸ್ವಾಮಿ, ಬೇಸಿಕ್ ಎಜುಕೇಷನ್ ಆಂಡ್ ಲಿಟರಸಿ ವಿಭಾಗದ ಅಧ್ಯಕ್ಷ ರೋ. ದೊರೈರಾಜ್, ನಿರ್ದೇಶಕ ರೋ. ಸುಬ್ರಹ್ಮಣ್ಯಂ, ಅಧ್ಯಕ್ಷೆ ರೋ. ಲಕ್ಷ್ಮಿ ಶಾಸ್ತ್ರಿ, ರೋಟರಿ ರಾಮಗಡ್ ರಾಕರ್ಸ್ ಕ್ಲಬ್ ಅಧ್ಯಕ್ಷ ಎಂ.ಎಚ್. ಪ್ರಕಾಶ್ ಇತರರಿದ್ದರು.ಪ್ರಶಸ್ತಿ ಪುರಸ್ಕೃತರಿಗೆ ಚನ್ನಪಟ್ಟಣದ ರೋಟರಿ ಟಾಯ್ ಸಿಟಿ ಅಧ್ಯಕ್ಷ ಸಂತೋಷ್ ಪಾಪಣ್ಣ, ಕಾರ್ಯದರ್ಶಿ ಆದರ್ಶ್ ಕುಮಾರ್, ರೋಟರಿ ನಿಕಟ ಪೂರ್ವ ಅಧ್ಯಕ್ಷ ಹಾಗೂ ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್, ಮಾಜಿ ಅಧ್ಯಕ್ಷರಾದ ರಾಜೇಶ್, ಬಿ. ಶ್ರೀನಿವಾಸ್, ನಿತಿನ್ ಮೋಹನ್, ತೇಜಸ್, ರಘು, ಜಯರಾಮು, ಲೋಕೇಶ್ ಇತರರು ಅಭಿನಂದನೆ ಸಲ್ಲಿಸಿದ್ದಾರೆ.ಪೊಟೋ೨೮ಸಿಪಿಟಿ೨:
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕ ಯೋಗೇಶ್ ಚಕ್ಕೆರೆ ಹಾಗೂ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಅವರಿಗೆ ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ ೩೧೯೧ರ ಬೇಸಿಕ್ ಎಜುಕೇಷನ್ ಆಂಡ್ ಲಿಟರಸಿ ವಿಭಾಗದ ನೇಷನ್ ಬಿಲ್ಡರ್ ಅವಾರ್ಡ್ ಪ್ರದಾನ ಮಾಡಲಾಯಿತು.