ನೆಲಮಂಗಲ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇವೆ, ಸೌಹಾರ್ದತೆ ಮತ್ತು ಶಾಂತಿ ವೃದ್ಧಿಸುವುದೇ ರೋಟರಿ ಸಂಸ್ಥೆಯ ಧ್ಯೇಯ ಎಂದು ರೋಟರಿ ಅಧ್ಯಕ್ಷ ರೊ ಜಿ.ಆರ್.ನಾಗರಾಜು ತಿಳಿಸಿದರು.

ರೋಟರಿ ನೆಲಮಂಗಲ ವತಿಯಿಂದ 2025- 26ನೇ ಸಾಲಿನ ಫ್ಯಾಮಿಲಿ ಗೆಟ್‌ ಟುಗೆದರ್ ಮತ್ತು ಜ೦ಟಿ ನಿರ್ದೇಶಕರ ಸಭೆ ಹಾಗೂ ಚಾರ್ಟರ್ ನೈಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ಶುದ್ಧ ನೀರು ಮತ್ತು ನೈರ್ಮಲ್ಯ, ತಾಯಿ ಮತ್ತು ಮಕ್ಕಳ ಆರೋಗ್ಯ ಶಿಕ್ಷಣ ಮತ್ತು ಸಾಕ್ಷರತೆ ಸ್ಥಳೀಯ ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆಯಂತಹ ಸಮಾಜ ಸೇವೆ ನಿರ್ವಹಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.

2025-26 ಹಾಗೂ 2026-27ನೇ ಸಾಲಿನ ಸೇವಾ ಯೋಜನೆಗಳ ಬಗ್ಗೆ ಚರ್ಚಿಸಲು ಜಂಟಿ ನಿರ್ದೇಶಕರ ಸಭೆ ಜೊತೆಗೆ ಚಾರ್ಟರ್ ನೈಟ್, ರೋಟರಿ ಕುಟುಂಬಸ್ಥರು ಹಾಗೂ ಮಕ್ಕಳು ಬೆಳಗ್ಗೆಯಿಂದ ಸಂಜೆವರೆಗೂ ಫನ್ ಗೇಮ್ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಮಿಮಿಕ್ರಿ ಕಲಾವಿದ ಮೈಸೂರಿನ ಶ್ರೀಹರಿ ಹಾಗೂ ಸಾಗರ್ ತುರುವೇಕೆರೆ ಎಲ್ಲರನ್ನು ರಂಜಿಸಿದರು. ನೆಲಮಂಗಲ ರೋಟರಿ 18 ವಸಂತಗಳು ಪೂರೈಸಿರುವ ಸ್ಮರಣಾರ್ಥ ಚಾರ್ಟರ್ ನೈಟ್ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಿಗೆ ಸನ್ಮಾನ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಆರ್.ರವಿಕುಮಾರ್, ಖಜಾಂಚಿ ಎಸ್.ಗಂಗರಾಜು, ಸಂಸ್ಥಾಪಕ ಅಧ್ಯಕ್ಷ ಎಚ್. ಜಿ.ರಾಜು, ಮಾಜಿ ಅಧ್ಯಕ್ಷರಾದ ಸಿ.ಜಿ.ಮಂಜುನಾಥ್ ಗೌಡ, ಎನ್.ಜಿ.ನಾಗರಾಜು, ಮಂಜುನಾಥ್ ಪಾಟೀಲ್, ಎಂ.ಎನ್. ಹರೀಶ್ ಕುಮಾರ್, ವನರಾಜು, ವಿ.ಆರ್.ಸ್ವಾಮಿ, ಬಿ.ಆರ್.ಸುರೇಂದ್ರನಾಥ್, ಟಿ.ನಾಗರಾಜು, ಬಿ.ಪೃಥ್ವಿರಾಜ್, ಭಾವಿ ಅಧ್ಯಕ್ಷರಾದ ಕೆ.ಎಸ್.ಲೋಕೇಶ್, ಎನ್.ಜಿ.ಚಂದ್ರಕುಮಾರ್, ಉಪಾದ್ಯಕ್ಷರಾದ ಬಿ.ಟಿ.ಕೃಷ್ಣಮೂರ್ತಿ, ನಿರ್ದೇಶಕರಾದ ಶಿವಶಂಕರ್ ಪ್ರಸಾದ್, ಬಸವರಾಜು, ಪ್ರಕಾಶ್ ,ಸುಶೀಲ್ ಕುಮಾರ್, ರುದ್ರೇಗೌಡ, ರಾಜಶೇಖರ್, ಶಿವರಾಮಯ್ಯ, ಆದಿರೆಡ್ದಿ, ಸತೀಶ್, ಸಿದ್ದರಾಜು, ದೊಡ್ಡ ನರಸಿಂಹಯ್ಯ, ಸಣ್ಣಪ್ಪ, ಜಯಂತ್, ಚಿರಂಜೀವಿ, ಬಿ.ಜಿ.ಹರೀಶ್, ಮಂಜಣ್ಣ, ಗಂಗಾಧರಯ್ಯ ಇತರರು ಹಾಜರಿದ್ದರು.

ಪೊಟೊ-22ಕೆಎನ್ಎಲ್ಎಮ್ 2-

ನೆಲಮಂಗಲ ರೋಟರಿ ವತಿಯಿಂದ 2025- 26ನೇ ಸಾಲಿನ ಫ್ಯಾಮಿಲಿ ಗೆಟ್‌ಗೆದರ್ ಮತ್ತು ಜ೦ಟಿ ನಿರ್ದೇಶಕರ ಸಭೆ ಹಾಗೂ ಚಾರ್ಟರ್ ನೈಟ್ ಕಾರ್ಯಕ್ರಮ ನಡೆಯಿತು.