ಸಾಲು ಸಾಲು ರಜೆ; ತುಂಬಿ ತುಳಿಕಿದ ಪ್ರವಾಸಿ ತಾಣಗಳು

| Published : Nov 04 2024, 12:18 AM IST

ಸಾಲು ಸಾಲು ರಜೆ; ತುಂಬಿ ತುಳಿಕಿದ ಪ್ರವಾಸಿ ತಾಣಗಳು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಗಿರಿಧಾಮ ವೀಕ್ಷಣೆಗೆ ಸಹಸ್ರಾರು ಮಂದಿ ಪ್ರವಾಸಿಗರು ಬೆಳಗಿನ ಸೂರ್ಯೋದಯ ಕಣ್ ತುಂಬಿಕೊಳ್ಳಲು ಮುಂಜಾನೆ ಐದು ಗಂಟೆಯಿಂದಲೇ ಆಗಮಿಸುತ್ತಿದ್ದು, ಬೆಟ್ಟದಲ್ಲಿ ಸಂತಸದಿಂದ ಕಾಲ ಕಳೆದರು. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಹಿನ್ನಲೆ ಬೆಟ್ಟದ ಕೆಳಗಡೆ ಸುಮಾರು 6 ಕಿ.ಮೀ ಸಂಚಾರ ದಟ್ಟಣೆ ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾಲು ಸಾಲು ರಜೆ ಹಿನ್ನಲೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಹಾಕಿದ್ದು, ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ವೀಕ್ಷಣೆಗೆ ಭೇಟಿ ನೀಡಿದ್ದಾರೆ.

ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಭಾನುವಾರ 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಸವಿದರು. ಸೆಲ್ಫಿ ಸ್ಪಾಟ್‌ ಅವಲಬೆಟ್ಟ, ಶ್ರೀನಿವಾಸ ಸಾಗರ, ನಂದಿ ದೇಗುಲ. ರಂಗಸ್ಥಳಕ್ಕೆ, ಈಶಾ ಕೇಂದ್ರಕ್ಕೆ ಲಕ್ಷಾಂತರ ಪ್ರವಾಸಿಗರ ಭೇಟಿ ಮುಂದುವರೆದಿದೆ.

6 ಕಿಮೀ ಸಂಚಾರ ದಟ್ಟಣೆ

ತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಗಿರಿಧಾಮ ವೀಕ್ಷಣೆಗೆ ಸಹಸ್ರಾರು ಮಂದಿ ಪ್ರವಾಸಿಗರು ಬೆಳಗಿನ ಸೂರ್ಯೋದಯ ಕಣ್ ತುಂಬಿಕೊಳ್ಳಲು ಮುಂಜಾನೆ ಐದು ಗಂಟೆಯಿಂದಲೇ ಆಗಮಿಸುತ್ತಿದ್ದು, ಬೆಟ್ಟದಲ್ಲಿ ಸಂತಸದಿಂದ ಕಾಲ ಕಳೆದರು. ನಂದಿಗಿರಿಧಾಮಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಹಿನ್ನಲೆ ಬೆಟ್ಟದ ಕೆಳಗಡೆ ಸುಮಾರು 6 ಕಿ.ಮೀ ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ನಂದಿ ಬೆಟ್ಟಕ್ಕೆ ಮೇಲಕ್ಕೆ ಹೋಗಲು ಕೆಳಗಡೆ ಬಾರಲು ಆಗದೆ ಕೆಲವು ಪ್ರವಾಸಿಗರ ಪರದಾಡಿದರು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು.

ಈಶಾ ಕೇಂದ್ರಕ್ಕೆ ಪ್ರವಾಸಿಗರ ಭೇಟಿ

ಚಿಕ್ಕಬಳ್ಳಾಪುರದ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ಬಳಿ ಸ್ಥಾಪಿಸಿರುವ 21 ಅಡಿಗಳ ನಂದಿ ಮತ್ತು 54ಅಡಿಯಗಳ ಮಹಾಶೂಲವು, ಸದ್ಗುರು ಸನ್ನಿಧಿಯಲ್ಲಿರುವ 112 ಅಡಿಗಳ ಆದಿಯೋಗಿಯ ಭವ್ಯತೆ ಮತ್ತು ಅನುಗ್ರಹವನ್ನು ಪಡೆಯಲು ಮತ್ತು ಸಂಜೆ ಏಳುಗಂಟೆಗೆ ಆರಂಭವಾಗುವ ಲೇಸರ್ ಶೋ ವೀಕ್ಷಿಸಲು ಅಗಲಗುರ್ಕಿಯ ಈಶಾ ಕೇಂದ್ರಕ್ಕೆ ಗುರುವಾರದಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರ ಭೇಟಿ ನೀಡುತ್ತಿದ್ದಾರೆ. ಈಶಾ ಕೇಂದ್ರಕ್ಕೂ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಜಿಲ್ಲೆಯ ನಂದಿಗಿರಿಧಾಮ, ಅವಲಬೆಟ್ಟ, ಶ್ರೀನಿವಾಸ ಸಾಗರ ವೀಕ್ಷಣೆಗೆ ಬರುವ ಪ್ರವಾಸಿಗರು ಈಶಾ ಕೇಂದ್ರಕ್ಕೂ ಬರುತ್ತಿದ್ದು, ಈಶಾ ಕೇಂದ್ರ ನೋಡಲು ಆಗಮಿಸುವ ಪ್ರವಾಸಿಗರು ನಂದಿಬೆಟ್ಟ, ನಂದಿ ದೇವಾಲಯಕ್ಕೆ ಬೇಟಿ ನೀಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಪ್ರವಾಸಿ ತಾಣಗಳ ಬಳಿ ಕರೆ ತಂದು ಮಕ್ಕಳ ಆಟೋಟಗಳನ್ನು ನೋಡಿ ಖುಷಿಯಲ್ಲಿ ತೇಲಾಡುವ ದೃಶ್ಯಗಳು ಪ್ರವಾಸಿ ತಾಣಗಳ ಬಳಿ ಕಂಡು ಬಂದವು.ಹೋಟೆಲ್‌, ಬಾರ್‌ ಫುಲ್

ಪ್ರವಾಸೋದ್ಯಮ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೆದ್ದಾರಿ ಅಕ್ಕಪಕ್ಕದ ಹೋಟೆಲ್‌ ಸೇರಿದಂತೆ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ಭರ್ತಿ ಆಗಿದ್ದವು. ಪ್ರವಾಸಿಗರ ದಟ್ಟಣೆಯಿಂದ ಹೋಟೆಲ್‌ಗ‌ಳು ರಷ್ ಆಗಿದ್ದವು, ಬಾರ್‌, ಡಾಬಾಗಳಲ್ಲಿ ಜನದಟ್ಟಣೆ ಕುಂಡು ಬಂತು. ಪ್ರವಾಸಿಗರು ನಿರೀಕ್ಷೆಗೂ ಮೀರಿ ಆಗಮಿಸಿದ್ದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ದಟ್ಟಣೆ ಕಂಡು ಬಂದು ಕೆಲಕಾಲ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಯಿತು. ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಕೂಡ ವ್ಯಾಪಾರ ವಹಿವಾಟು ಜೋರಾಗಿತ್ತು.

ಸಿಕೆಬಿ-2 ಆವಲಗುರ್ಕಿಯ ಈಶಾ ಕೇಂದ್ರಕ್ಕೆ ಪ್ರವಾಸಿಗರು ಭೇಟಿ ನೀಡಿದ್ದರು.

ಸಿಕೆಬಿ-3 ನಂದಿಗಿರಿಧಾಮಕ್ಕೆ ಮುಂಜಾನೆ ಐದು ಗಂಟೆಗೆ ಪ್ರವಾಸಿಗರು ಆಗಮಿಸಿದ್ದ ಬೈಕ್ ಗಳನ್ನು ಪಾರ್ಕ್‌ ಮಾಡಿರುವುದು.