ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರು. ಅನುದಾನ

| Published : Sep 28 2025, 02:00 AM IST

ಸಾರಾಂಶ

ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ ೧೦ ಲಕ್ಷ ಅನುದಾನದಲ್ಲಿ ತಿಮ್ಮಾಪುರದಲ್ಲಿ ಭಾವನಮಠ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು.

ಶಿಗ್ಗಾಂವಿ: ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ ೧೦ ಲಕ್ಷ ಅನುದಾನದಲ್ಲಿ ತಿಮ್ಮಾಪುರದಲ್ಲಿ ಭಾವನಮಠ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ ಹೇಳಿದರು.ತಾಲೂಕಿನ ತಿಮ್ಮಾಪುರದಲ್ಲಿ ಮರಾಠ ಸಮಾಜದ ಭಾವನಮಠ ಸಭಾಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮರಾಠ ಸಮಾಜದ ದೀರ್ಘಕಾಲದ ಕನಸಾಗಿದ್ದ ಈ ಸಭಾಭವನ ಸಮಾಜದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿ ಸೇವೆ ಸಲ್ಲಿಸುವಂತಾಗಲಿ. ಗ್ರಾಮ ಹಾಗೂ ಸಮಾಜದ ಒಗ್ಗಟ್ಟಿಗೆ ದೊಡ್ಡ ಕೊಡುಗೆಯಾಗಲಿ. ಕ್ಷೇತ್ರವು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಂಡಿದ್ದು, ಇನ್ನು ಹೆಚ್ಚಿನ ಅನುದಾನ ಹರಿದುಬರಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ತುಕಾರಾಮ ಪವಾರ, ಗಂಗಪ್ಪ ತಾಂದೋಳ್ಕರ, ಶಿವಾಜಿ ತಮ್ಮಣ್ಣವರ, ಚಂದ್ರು ಹೆಬ್ಬಾಳ, ಮಂಜುನಾಥ ಬಗಾಡೆ, ಅರ್ಜುನ ಚವ್ಹಾಣ ಇತರರಿದ್ದರು.