ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಸಾರ್ವಜನಿಕ ರಸ್ತೆ ಬದಿ ಧರೆ ಕುದಿತ, ರಸ್ತೆ ಕುಸಿತವಾಗಿದ್ದು, ಅವುಗಳ ದುರಸ್ತಿಗೆ ಸರ್ಕಾರದಿಂದ ರು. ೧೨.೫೦ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಪುತ್ತೂರು: ಕಳೆದ ಬಾರಿಯ ಭಾರಿ ಮಳೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಸಾರ್ವಜನಿಕ ರಸ್ತೆ ಬದಿ ಧರೆ ಕುದಿತ, ರಸ್ತೆ ಕುಸಿತವಾಗಿದ್ದು, ಅವುಗಳ ದುರಸ್ತಿಗೆ ಸರ್ಕಾರದಿಂದ ರು. ೧೨.೫೦ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.ಕೊಂಬೆಟ್ಟು ತಾಲೂಕು ಕ್ರೀಡಾಂಗಣ ಬಳಿಯ ಧರೆಯ ತಡೆಗೋಡೆ ನಿರ್ಮಾಣಕ್ಕೆ ರು. ೧ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸವಣೂರು -ಮಾಡಾವು-ಕೊಳ್ತಿಗೆ- ಐವರ್ನಾಡುಜಿಲ್ಲಾ ಮುಖ್ಯ ರಸ್ತೆ ಕುಸಿತ ತಡೆಗೋಡೆ ದುರಸ್ತಿಗೆ ೩೦ ಲಕ್ಷ , ಪುತ್ತೂರು-ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿ ತಡೆಗೋಡೆ ರಚನೆ ೫೦ ಲಕ್ಷ, ಪುತ್ತೂರು-ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿ ಬದಿ ತಡೆಗೋಡೆ ರಚನೆ ೩೦ ಲಕ್ಷ ರು., ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ತಡೆಗೋಡೆ ನಿರ್ಮಾಣ ರು. ೩೦ ಲಕ್ಷ, ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಕೋಡಿಂಬಾಡಿಯಲ್ಲಿ ಧರೆ ಕುಸಿತ ತಡೆಗೋಡೆ ನಿರ್ಮಾಣಕ್ಕೆ ೬೦ ಲಕ್ಷ ರು., ಪುತ್ತೂರು ಉಪ್ಪಿನಂಗಡಿ ರಾಜ್ಯ ಹೆದ್ದಾರಿ ತಡೆಗೋಡೆ ನಿರ್ಮಾಣಕ್ಕೆ ೫೦ ಲಕ್ಷ ರು., ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಮಚ್ಚಿಮಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕ ರು. ೪೫ ಲಕ್ಷ, ಕೊಡಿಮರ- ದಾರಂದಕುಕ್ಕು ಸೇಡಿಯಾಪು- ಕಡಂಬು ರಸ್ತೆಯ ಬದಿ ತಡೆಗೋಡೆ ನಿರ್ಮಾಣಕ್ಕೆ ೨೫ ಲಕ್ಷ ರು., ಉಪ್ಪಿನಂಗಡಿ- ಹಿರೆಬಂಡಾಡಿ ಗ್ರಾಮದ ಕೊಯಿಲ-ರಾಮಕುಂಜ ಆಲಂತಾಯ-ನೆಲ್ಯಾಡಿರಸ್ತೆಯ ತಡೆಗೋಡೆ ಕಾಮಗಾರಿಗೆ ರು. ೫೦ ಲಕ್ಷ , ಕೊಡಿಮರ-ದಾರಂದಕುಕ್ಕು -ಸೇಡಿಯಾಪು-ಕಡಂಬು ಜಿಲ್ಲಾ ಮುಖ್ಯ ರಸ್ತೆ ತಡೆಗೋಡೆ ಕಾಮಗಾರಿ ೨೫ ಲಕ್ಷ ರು., ಹಂಟ್ಯಾರು- ಬೆಟ್ಟಂಪಾಡಿ ಜಿಲ್ಲಾ ಮುಖ್ಯ ರಸ್ತೆಯ ತಡೆಗೋಡೆ ಕಾಮಗಾರಿ ೧ ಕೋಟಿ ರು., ಮುಕ್ರಂಪಾಡಿ-ರೆಂಜಲಾಡಿ- ಸರ್ವೆ ರಸ್ತೆಯ ತಡೆಗೋಡೆ ಕಾಮಗಾರಿಗೆ ೪೦ ಲಕ್ಷ ರು., ಬಂಟ್ವಾಳ ತಾಲೂಕು ವ್ಯಾಪ್ತಿಯ ಕುದ್ದುಪದವು-ಪಕಳಕುಂಜ ಜಿಲ್ಲಾ ಮುಖ್ಯ ರಸ್ತೆಯ ಮಾಣಿಲ ತಡೆಗೋಡೆ ಕಾಮಗಾರಿಗೆ ೩೦ ಲಕ್ಷ ರು., ಕುದ್ದುಪದವು-ಪಕಳಕುಂಜ ಜಿಲ್ಲಾ ರಸ್ತೆಯ ಮಾಣಮೂಲೆಯಲ್ಲಿ ತಡೆಗೋಡೆ ಕಾಮಗಾರಿ ೫೦ ಲಕ್ಷ ರು., ಬೆಟ್ಟಂಪಾಡಿ ಗ್ರಾಮದ ಕಿಲಂಪಾಡಿ ಒಡ್ಯ ರಸ್ತೆಯ ಬಳಿ ತಡೆಗೋಡೆ ಕಾಮಗಾರಿಗೆ ೭೫ ಲಕ್ಷ ರು., ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಪೆರಾಬೆ ಸಂಪರ್ಕ ರಸ್ತೆ ತಡೆಗೋಡೆಗೆ ೭೫ ಲಕ್ಷ, ಕೋಡಿಂಬಾಡಿ ಗ್ರಾ.ಪಂ. ಹಿಂಬದಿ ತಡೆಗೋಡೆ ನಿರ್ಮಾಣಕ್ಕ ೨೫ ಲಕ್ಷ ರು., ಉಪ್ಪಿನಂಗಡಿ ಗ್ರಾಮದ ನೂಜಿ ಪಾದಳ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ೨೦ ಲಕ್ಷ ರು., ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಪೆರ್ನೆ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ೩೦ ಲಕ್ಷ, ಹಿರೆಬಂಡಾಡಿ ಗ್ರಾಮದ ದಾಸರಮೂಲೆಅಡೆಕ್ಕಲ್ ರಸ್ತೆ ತಡೆಗೋಡೆ ೯೦ ಲಕ್ಷ, ೩೪ ನೆಕ್ಕಿಲಾಡಿ ಗ್ರಾಮದ ದರ್ಬೆ ಕೊಳಕ್ಕೆ ರಸ್ತೆಗೆ ತಡೆಗೋಡೆ ೩೩ ಲಕ್ಷ, ಕೊರ್ಳತಿಗೆ ಗ್ರಾಮದ ಕಜೆ ಕುದ್ಕುಳಿ ತಡೆಗೋಡೆ ೨೦ ಲಕ್ಷ , ಒಳಮೊಗ್ರು ಗ್ರಾಮದ ಬಾಣಬೆಟ್ಟು ರಸ್ತೆಗೆ ತಡೆಗೋಡೆ ೧೨ ಲಕ್ಷ ರು., ಒಳಮೊಗ್ರು ಗ್ರಾಮದ ಕುಟನೋಪ್ಪಿನಡ್ಕನೀರ್ಪಾಡಿ ರಸ್ತೆ ತಡೆಗೋಡೆಗೆ ೨೦ ಲಕ್ಷ ರು., ೩೪ ನೆಕ್ಕಿಲಾಡಿ ಆದರ್ಶನಗರ ಕಾಲನಿ ರಸ್ತೆ ತಡೆಗೋಡೆ ೩೦ ಲಕ್ಷ , ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ನುಳಿಯಾಲು ತಂಬುತ್ತಡ್ಕದಲ್ಲಿ ತಡೆಗೋಡೆ ನಿರ್ಮಾಣ ೨೫ ಲಕ್ಷ, ನಿಡ್ಪಳ್ಳಿ ಗ್ರಾಮದ ಗೋಳಿತ್ತಡಿ ಡೊಂಬೆಗಿರಿ ರಸ್ತೆಯ ಚಿಕ್ಕೋಡಿಯಲ್ಲಿ ತಡೆಗೋಡೆ ಕಾಮಗಾರಿಗೆ ೩೦ ಲಕ್ಷ, ಇಡ್ಕಿದು ಗ್ರಾಮದ ಸೂರ್ಯ ದೇವಸ್ಯ ಕೋಲ್ಪೆ ರಸ್ತೆಯ ಸೇತುವೆಯ ಬದಿ ತಡೆಗೋಡೆ ನಿರ್ಮಾಣಕ್ಕ ೩೦ ಲಕ್ಷ, ಕೆದಿಲ ಗ್ರಾಮದ ಪಾಟ್ರಕೋಡಿ ಕುದುಂಬ್ಲಾಡಿ ರಸ್ತೆಯ ಬಾಯಬ್ಬೆ ತಡೆಗೋಡೆ ನಿರ್ಮಾಣಕ್ಕೆ ೧೦ ಲಕ್ಷ ಹಾಗೂ ಪೆರ್ನೆ ಗ್ರಾಮದ ಬಿಳಿಯೂರು ದೇಂತಡ್ಕ ರಸ್ತೆ ಬದಿ ತಡೆ ಗೋಡೆ ನಿರ್ಮಾಣಕ್ಕೆ ೧೦ ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.