ಕನ್ನಡಪ್ರಭ ವಾರ್ತೆ ಶಿರಾ ಮಾರ್ಚ್ ೩೧ ಕ್ಕೆ ಮುಕ್ತಾಯಗೊಂಡ ೨೦೨೫-೨೬ ಆರ್ಥಿಕ ವರ್ಷದಲ್ಲಿ ೬.೨೯ ಕೋಟಿ ರು. ಕಂದಾಯ ವಸೂಲಾತಿ ಮಾಡಲಾಗಿದೆ ತಾ.ಪಂ. ಇಓ ಹರೀಶ್ ಆರ್. ಹೇಳಿದರು.

ಅವರು ಶಿರಾ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಭೆಯಲ್ಲಿ, ಕಂದಾಯ ವಸೂಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ ಗ್ರಾಮ ಪಂಚಾಯಿತಿ ಕರವಸೂಲಿಕಾರರು, ಡಾಟಾ ಎಂಟ್ರಿ ಆಪರೇಟರ್ ಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ವರ್ಗವನ್ನು ಸನ್ಮಾನಿಸಿ ಮಾತನಾಡಿದರು

ಶಿರಾ ತಾಲೂಕಿನಲ್ಲಿ ೨೦೨೩-೨೪ ರಲ್ಲಿ ೨.೯೭ ಕೋಟಿ ರೂಗಳಷ್ಟು ಮಾತ್ರ ವಸೂಲಾತಿಯಾಗಿತ್ತು, ಅದನ್ನು ಉತ್ತಮಪಡಿಸಲು ಯೋಜನೆ ರೂಪಿಸಿ ನಿರಂತರವಾಗಿ ವಿಡಿಯೋ ಸಂವಾದ, ಕ್ಷೇತ್ರ ಭೇಟಿ, ಲಿಖಿತ ಸೂಚನೆಗಳನ್ನು ನೀಡುವ ಮುಖೇನ ೨೦೨೪-೨೫ ರಲ್ಲಿ ೪.೯೬ ಕೋಟಿಗಳಿಗೆ ಪ್ರಗತಿ ಹೆಚ್ಚಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಶ್ವಿಜಾ ಬಿ.ವಿ. ಅವರ ನಿರ್ದೇಶನದಂತೆ ಮಾರ್ಚ್ ತಿಂಗಳ ಅಂತ್ಯದಲ್ಲಿ ತಾಲೂಕಿನಲ್ಲಿ ಕಂದಾಯ ವಸೂಲಾತಿ ಅಭಿಯಾನ ಹಮ್ಮಿಕೊಂಡು ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಪಂ ಸಿಬ್ಬಂದಿಗಳು, ಎನ್.ಆರ್.ಎಲ್.ಎಂ ಸಿಬ್ಬಂದಿಗಳು ತಂಡೋಪತಂಡವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ೨೦೨೫-೨೬ ನೇ ಸಾಲಿನ ಮಾರ್ಚ್‌ ಅಂತ್ಯಕ್ಕೆ ೬.೨೯ ಕೋಟಿ

ಕರವಸೂಲಿಗಾರರು ಇಲ್ಲದ ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ ಹುಲಿಕುಂಟೆ, ಹಾಲೇನಹಳ್ಳಿ, ಚಿನ್ನೇನಹಳ್ಳಿ ಹಾಗೂ ಯಲಿಯೂರು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಹಾಯಕರುಗಳು, ಕರವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್ ರವರು, ನರೇಗಾ ಸಿಬ್ಬಂದಿ ಹಾಗೂ ತಾಲೂಕು ಪಂಚಾಯಿತಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.