ಸಾರಾಂಶ
ಸಂಘವು ಸಮಾಜ ಪರಿವರ್ತನೆಗಾಗಿ ಪಂಚ ಪರಿವರ್ತನೆ ಸೂತ್ರಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪರಿಸರ, ಪ್ರಕೃತಿ ಮಾತೆಯ ರಕ್ಷಣೆಗೆ ಶ್ರಮಿಸುತ್ತಿದೆ.
ನವಲಗುಂದ:
ತಾಲೂಕಿನ ಮೊರಬ ಗ್ರಾಮದ ಶ್ರೀಸಾಯಿ ಮಂದಿರದಲ್ಲಿ ಈಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಮೊರಬ ಹೋಬಳಿ ಮಟ್ಟದ ಗೃಹ ಸಂಪರ್ಕ ಅಭಿಯಾನದ ಅಂಗವಾಗಿ ಅಭಿಯಾನದ ಕರಪತ್ರ ಹಾಗೂ ಭಾರತ ಮಾತೆಯ ಭಾವಚಿತ್ರ ಬಿಡುಗಡೆಗೊಳಿಸಲಾಯಿತು.ಸಂಘವು ಸಮಾಜ ಪರಿವರ್ತನೆಗಾಗಿ ಪಂಚ ಪರಿವರ್ತನೆ ಸೂತ್ರಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪರಿಸರ, ಪ್ರಕೃತಿ ಮಾತೆಯ ರಕ್ಷಣೆಗೆ ಶ್ರಮಿಸುತ್ತಿದೆ ಎಂದು ಹೇಳಿದ ಸ್ವಯಂ ಸೇವಕರು, ಜಾತಿ-ಭೇದ ದೂರ ಸರಿಸಿ ಸಾಮರಸ್ಯದ ಸಮಾಜ ಹಾಗೂ ಕುಟುಂಬ ಪ್ರಬೋಧನ, ಸಂಸ್ಕಾರ ಬಲಪಡಿಸುವ ಮೂಲಕ ಸುಂದರ ಭಾರತ ಕಟ್ಟೋಣ ಎಂದು ಜಾಗೃತಿ ಮೂಡಿಸಿದರು.
ಸ್ವದೇಶಿ ಭಾವ, ಸ್ವದೇಶಿ ಉಡುಗೆ ತೊಡುಗೆ, ಸ್ವಾವಲಂಬಿ ಭಾರತಕ್ಕೆ ಕೊಡುಗೆ, ನಾಗರಿಕ ಕರ್ತವ್ಯ, ಸಾರ್ವಜನಿಕ ನಿಯಮ ಪಾಲನೆ ಸಹಜ ಸ್ವಭಾವವಾಗಲಿ ಎಂಬ ಉದ್ದೇಶದಿಂದ ಸಂಘವು ಗೃಹಸಂಪರ್ಕ ಅಭಿಯಾನ ಕೈಗೊಂಡಿದೆ ಎಂದು ಪ್ರಮುಖರು ವಿವರಿಸಿದರು.ಸಂಘದ ಪ್ರಮುಖರಾದ ಹೆಬ್ಬಳ್ಳಿಯ ವೇದವ್ಯಾಸ ದೇಶಪಾಂಡೆ, ಸಂಘದ ಪ್ರೊ. ನಿಂಗಪ್ಪ ಮಡಿವಾಳರ, ಬಿಜೆಪಿ ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ ಸೇರಿದಂತೆ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))