ಆರೆಸ್ಸೆಸ್‌ ಸ್ವಯಂ ಸೇವಕರ ಫಥ ಸಂಚಲನ

| Published : Oct 20 2025, 01:02 AM IST

ಸಾರಾಂಶ

ನಗರಸಭೆ ಮುಂಭಾಗದ ನಗರದ ಮೈದಾನದಿಂದ ಪ್ರಾರಂಭವಾದ ಪಥ ಸಂಚಲನವು ಸೂರಜ್‌ಮಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್ ರಸ್ತೆ, ಗೀತಾ ರಸ್ತೆ, ಒಂದನೇ ಅಡ್ಡರಸ್ತೆಯ ಮೂಲಕ ಸಾಗಿ ಪುನಃ ನಗರಸಭೆ ಮೈದಾನ ಸಮಾವೇಶಗೊಂಡಿತು. ಪಥ ಸಂಚಲನದ ವೇಳೆ ಸಾರ್ವಜನಿಕರು ಮತ್ತು ಆರ್‌ಎಸ್‌ಎಸ್ ಅಭಿಮಾನಿಗಳು ಗಣ ವೇಷಧಾರಿಗಳಿಗೆ ಹೂ ಮಳೆ ಸುರಿಸಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಕೆಜಿಎಫ್ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಶತಮಾನೋತ್ಸವದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕರ ಸೇವಕರು ಗಣವೇಷ ಧರಿಸಿ ಆಕರ್ಷಕ ಪಥ ಸಂಚಲನ ನಡೆಸಿದರು.ನಗರಸಭೆ ಮುಂಭಾಗದ ನಗರದ ಮೈದಾನದಿಂದ ಪ್ರಾರಂಭವಾದ ಪಥ ಸಂಚಲನವು ಸೂರಜ್‌ಮಲ್ ವೃತ್ತ, ಗಾಂಧಿ ವೃತ್ತ, ಪ್ರಿಚರ್ಡ್ ರಸ್ತೆ, ಗೀತಾ ರಸ್ತೆ, ಒಂದನೇ ಅಡ್ಡರಸ್ತೆಯ ಮೂಲಕ ಸಾಗಿ ಪುನಃ ನಗರಸಭೆ ಮೈದಾನ ಸಮಾವೇಶಗೊಂಡಿತು. ಪಥ ಸಂಚಲನದ ವೇಳೆ ಸಾರ್ವಜನಿಕರು ಮತ್ತು ಆರ್‌ಎಸ್‌ಎಸ್ ಅಭಿಮಾನಿಗಳು ಗಣ ವೇಷಧಾರಿಗಳಿಗೆ ಹೂ ಮಳೆ ಸುರಿಸುವ ಮೂಲಕ ದಾರಿಯುದ್ದಕ್ಕೂ ಸ್ವಾಗತಿಸಿದರು.ರಸ್ತೆಯಲ್ಲಿ ಪಥಸಂಚಲನ

ನಿಗದಿಯಂತೆ ಸಾಯಂಕಾಲ ೩.೩೦ ಗಂಟೆಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಮುಖರು ಹಾಗೂ ಸ್ವಯಂ ಸೇವಕರು ನಗರಸಭಾ ಮೈದಾನಕ್ಕೆ ಗಣ ವೇಷಧಾರಿಗಳಾಗಿ ಆಗಮಿಸಿದರು. ನಂತರ ಎಲ್ಲರು ಶಿಸ್ತಿನ ಶಿಪಾಯಿಗಳಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ ಪುನಃ ೫.೩೦ ಗಂಟೆಗೆ ಪಥ ಸಂಚಲನವನ್ನು ಪೂರ್ಣಗೊಳಿಸಿದರು.ಪಥ ಸಂಚಲನದಲ್ಲಿ ಗಣವೇಷ ಸಹಿತ ಸಾಕಷ್ಟು ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಭಾಗವಹಿಸಿದ್ದರು. ಆರ್‌ಎಸ್‌ಎಸ್‌ನ ಕಾರ್ಯವಾಹ ಸೇಲಂ ಪ್ರವೀಣ್, ತಾಲೂಕು ಪ್ರಮುಖ್ ದತ್ತಾತ್ರೇಯ, ಬಿಜೆಪಿ ಮಾಜಿ ಶಾಸಕ ವೈ.ಸಂಪAಗಿ, ನಗರ ಘಟಕದ ಮಾಜಿ ಅಧ್ಯಕ್ಷ ಹಾಲಿ ಜಿಲ್ಲಾ ಉಪಾಧ್ಯಕ್ಷ ಕಮಲನಾಥನ್, ಜಿಲ್ಲಾ ವಕ್ತಾರ ಸುರೇಶ್ ನಾರಾಯಣ್‌ಕುಟ್ಟಿ, ತಾಲೂಕು ಅಧ್ಯಕ್ಷ ಬಿ ಸುರೇಶ್, ಪ್ರಧಾನ ಕಾರ್ಯದರ್ಶಿ ನವ ರಾಜಕುಮಾರ್, ಪಾಂಡಿಯನ್, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಸಂತೋಷ್ ಕುಮಾರ್, ರಾಜ, ದೀನ ಮೊದಲಾದವರು ಇದ್ದರು.