ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾ ಜಲ ವಿದ್ಯುತ್ ಯೋಜನೆ, ಗಂಧದ ಎಣ್ಣೆ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯ ಮೂಲಕ ನಾಲ್ವಡಿ ಅವರು ಆಧುನಿಕ ಮೈಸೂರಿನ ನಿರ್ಮಾತೃವಾಗಿದ್ದರು. ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ತರುವ ಮೂಲಕ ಇತಿಹಾಸ ಸೃಷ್ಟಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಜನಪರ ಆಡಳಿತ, ಅಭಿವೃದ್ಧಿಯಲ್ಲಿ ಚರಿತೆ ಸೃಷ್ಟಿಸಿದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ಆಧುನಿಕ ಕರ್ನಾಟಕದ ನಿರ್ಮಾತೃ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಿನ್ನೆಲೆಯಲ್ಲಿ ನಗರದ ಕೆ.ಆರ್. ವೃತ್ತದಲ್ಲಿರುವ ಅವರ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸಾಮಾಜಿಕ ನ್ಯಾಯ ಇವತ್ತಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾ ಜಲ ವಿದ್ಯುತ್ ಯೋಜನೆ, ಗಂಧದ ಎಣ್ಣೆ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯ ಮೂಲಕ ನಾಲ್ವಡಿ ಅವರು ಆಧುನಿಕ ಮೈಸೂರಿನ ನಿರ್ಮಾತೃವಾಗಿದ್ದರು. ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ತರುವ ಮೂಲಕ ಇತಿಹಾಸ ಸೃಷ್ಟಿಸಿದರು. ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಗೆಜ್ಜೆಪೂಜೆ ಮತ್ತು ಅಸ್ಪೃಶ್ಯತೆ ಆಚರಣೆಯನ್ನು ಕಡ್ಡಾಯವಾಗಿ ನಿಷೇಧಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದರು ಎಂದರು.ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಉದ್ಯೋಗದ ನೀಡುವ ದೃಷ್ಟಿಯಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಶಿಕ್ಷಣ ಕೇಂದ್ರಗಳನ್ನು ತೆರೆಯುವ ಮೂಲಕ ಶಿಕ್ಷಣದ ಕ್ರಾಂತಿಯನ್ನು ಕೂಡ ಅವರ ಕಾಲದಲ್ಲಿ ಮಾಡಿದ್ದರು. ವಿಶೇಷವಾಗಿ ಪ್ರಜಾಪ್ರತಿನಿಧಿ ಸಭೆ, ನಗರಗಳ ಯೋಜನೆಗಳು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಗಳ ಉನ್ನತೀಕರಣ, ಕೃಷಿ ನೀರಾವರಿ ಕೈಗಾರಿಕೆಗಳಿಗೆ ಒತ್ತು ನೀಡಿ ಯೋಜನೆಗಳನ್ನು ರೂಪಿಸಿದ್ದರು. ಅಂತಹ ಒಬ್ಬ ನಾಡುಕಂಡ ಅಪರೂಪದ ಮಹಾರಾಜರನ್ನ ಮೈಸೂರಿಗರಾದ ನಾವೆಲ್ಲರೂ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀಧರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಜೆ. ವಿನಯ್ ಕುಮಾರ್, ಸದಸ್ಯ ವೆಂಕಟೇಶ್, ಮುಖಂಡರಾದ ಅಣ್ಣಯ್ಯ, ಜೋಗಿ ಮಹೇಶ್, ರವಿಶಂಕರ್, ವಿಜಯ್ ಕುಮಾರ್, ಗುಣಶೇಖರ್, ಮಹ್ಮದ್ ಫಾರೂಕ್, ಭಾಗ್ಯಾ ಚಂದ್ರಶೇಖರ್, ಮಂಜುನಾಥ್, ರಮೇಶ್, ಪುಟ್ಟಣ್ಣ, ಸಂತೋಷ್, ರವಿ ಮೊದಲಾದವರು ಇದ್ದರು.ಮಧುವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಸಂಸ್ಥಾನದ 24ನೇ ಮಹಾರಾಜರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜನ್ಮದಿನವನ್ನು ನಂಜನಗೂಡು ರಸ್ತೆಯ ಮಧುವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮಾರಕದ ಮುಂದೆ ಮೈಸೂರು ಯೋಗಿಸ್ ಟ್ರಸ್ಟ್ ಮತ್ತು ಮೈಸೂರು ಸಿಟಿಜನ್ಸ್ ವಾಯ್ಸ್‌ವತಿಯಿಂದ ಆಚರಿಸಲಾಯಿತು.ಬೆಳಗ್ಗೆ 7.30ಕ್ಕೆ ನಾಲ್ವಡಿ ಸ್ಮಾರಕದ ಮುಂದೆ ಸಪ್ತ ಖುಷಿ ಆಶ್ರಮದ ಶ್ರೀಗಳ ಸಾನಿಧ್ಯದಲ್ಲಿ ಓಂಕಾರದೊಂದಿಗೆ ಸ್ಮರಣ ಕಾರ್ಯಕ್ರಮ ಪ್ರಾರಂಭವಾಯಿತು. ಖ್ಯಾತ ಆಯುರ್ವೇದ ವೈದ್ಯ ಡಾ. ಚಂದ್ರಶೇಖರ್, ಖ್ಯಾತ ಯೋಗ ಪಟು ತಿರುಮಲೈ ಯೋಗ ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯರಾದ ಬಿ.ವಿ. ಮಂಜುನಾಥ್, ಪಾರ್ಥಸಾರಥಿ ಇದ್ದರು.
ಆನಂದ್ ಅವರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ, ಕನ್ನಂಬಾಡಿ ಕಟ್ಟೆ ನಿರ್ಮಾಣ, ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ, ಭಾರತೀಯ ವಿಜ್ಞಾನ ಸಂಸ್ಥೆ, ಕಾರುಗಳ ಓಡಾಟವೇ ಇಲ್ಲದ 18ನೇ ಶತಮಾನದ ಸಂದರ್ಭದಲ್ಲಿ ಚಾಮರಾಜ ಜೋಡಿ ರಸ್ತೆ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದರು. ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು.ಮಧುವನದಿಂದ ಅರಮನೆ ದಕ್ಷಿಣ ದ್ವಾರದವರೆಗೂ ವಿವಿಧ ಬಿತ್ತಿಪತ್ರಗಳನ್ನು ಹಿಡಿದು ಜಾಥಾ ನಡೆಸಲಾಯಿತು. ಈ ವೇಳೆ ಮುಕುಂದನ್ ಗುರೂಜೀ, ವೆಂಕಟೇಶ್, ಆರ್ಚಕರಾದ ನಾಗರಾಜು, ವೀರಪ್ಪಾಜೀ, ಅಭಿ ಇದ್ದರು.