ಸಾರಾಂಶ
ಶಾಸಕ ಅಶೋಕ ಮನಗೂಳಿ ಅವರು ಆಲಮೇಲದಲ್ಲಿ ಸಿಂದಗಿ ರಸ್ತೆಯಲ್ಲಿರುವ ಗುಣಾರಿ ಲೇಔಟ್‌ನಲ್ಲಿ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.
ಆಲಮೇಲ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ಸವಾಲಿನ ಕೆಲಸ. ಆಧುನಿಕ ಜಗತ್ತಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುಸಜ್ಜಿತ ಕಟ್ಟಡವು ಅತೀ ಅವಶ್ಯಕ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಗುಣಾರಿ ಲೇಔಟ್‌ನಲ್ಲಿ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು ಶ್ರೀಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರದಿಂದ ಮಂಜೂರಾಗುವ ₹5 ಲಕ್ಷ ಅನುದಾನ ನೀಡಲಾಗುವುದು ಎಂದರು.ರಮೇಶ ಭಂಟನೂರ, ಮಲ್ಲಿಕಾರ್ಜುನ ಜೋಗೋರ ಮಾತನಾಡಿದರು. ಸಂಘಪಾಲ ಭಂತೇಜೀ, ವೈಜನಾಥ ಮಹಾರಾಜರು, ಶ್ರೀಶೈಲ ಅಳ್ಳೋಳ್ಳಿಮಠ, ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಎಂಟಮಾನ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮೇಲಿನಮನಿ, ಪ ಪಂ.ಸದಸ್ಯ ಅಶೋಕ ಕೊಳಾರಿ, ಚಿಕ್ಕ ಮಕ್ಕಳ ತಜ್ಞ ಡಾ.ರಾಜೇಶ ಪಾಟೀಲ್, ಮುಖಂಡ ಬಸವರಾಜ್ ಬಾಗೇವಾಡಿ, ಪುಂಡಲೀಕ ದೊಡ್ಡಮನಿ, ವಿಶ್ವನಾಥ ಕಲ್ಲೂರ, ಚಂದ್ರಕಾಂತ ಜಮಾದಾರ, ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯ ಅಧಿಕಾರಿ ಶಿಂಥಿಲ್, ಶಿಕ್ಷಕ ಅನಂತನಾಗ ಪಾಟೀಲ, ಅಜಿತ್ ಕುಲಕರ್ಣಿ, ಮಲಿಕಸಾಬ ಮುಲ್ಲಾ, ಆನಂದ ಕುಮಸಗಿ, ಸಾವಿತ್ರಿ ಕಲ್ಲೂರ, ಆಶಾ ಕೋಳಿ, ಮಕ್ಕಳು ಮತ್ತು ಪಾಲಕರಿದ್ದರು. ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.