ಸಾರಾಂಶ
ಜನಪರ ಯೋಜನೆಗಳನ್ನು ಜಾರಿಗೊಳಿಸಿ ಜನತೆಯ ಬದುಕನ್ನು ಹಸನುಗೊಳಿಸಿದವರು.
ಕಾರವಾರ: ಮಾಜಿ ಮುಖ್ಯಮಂತ್ರಿ, ಜನನಾಯಕ, 82ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೂಗುಚ್ಛ ನೀಡಿ ಶುಭ ಕೋರಿದರು.
ಗುರುವಾರ ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ತೆರಳಿದ ರೂಪಾಲಿ ಎಸ್.ನಾಯ್ಕ, ಯಡಿಯೂರಪ್ಪ ಅವರನ್ನು ಗೌರವಿಸಿ, ಶುಭಾಶಯ ತಿಳಿಸಿದರು. ವಿಶೇಷವಾಗಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಜನತೆಯ ಪರವಾಗಿಯೂ ಅಭಿನಂದನೆಗಳನ್ನು ಸಲ್ಲಿಸಿದರು.ಈ ನಾಡು ಕಂಡ ಅಪ್ರತಿಮ ಹೋರಾಟಗಾರ ಬಿ.ಎಸ್. ಯಡಿಯೂರಪ್ಪ, ರೈತರು, ಬಡವರು, ದಲಿತರು, ಹಿಂದುಳಿದವರು ಹೀಗೆ ಎಲ್ಲ ವರ್ಗಗಳ ಶ್ರೇಯಸ್ಸಿಗಾಗಿ ದುಡಿದ ಜನನಾಯಕ. ಮುಖ್ಯಮಂತ್ರಿಯಾಗಿ ನಾಡಿನ ಅಭಿವೃದ್ಧಿಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿ ಜನತೆಯ ಬದುಕನ್ನು ಹಸನುಗೊಳಿಸಿದವರು. ಅವರ ಬದ್ಧತೆ, ಪಕ್ಷ ಸಂಘಟನೆ, ಹೋರಾಟ ನಮಗೆ ಮಾದರಿಯಾದುದು. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಲು ಅವಕಾಶ ದೊರಕಿದ್ದಕ್ಕೆ ಸಂತಸವಾಗಿದೆ. ಬಹುಕಾಲ ಯಡಿಯೂರಪ್ಪ ಅವರ ಮಾರ್ಗದರ್ಶನ ಈ ನಾಡಿಗೆ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.