.ಗ್ರಾಮೀಣ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಬೇಕು

| Published : Aug 08 2025, 01:01 AM IST

.ಗ್ರಾಮೀಣ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಉತ್ಸವಗಳನ್ನು ಏರ್ಪಡಿಸುವ ಮೂಲಕ ಕಲೆಗಳನ್ನು ಪ್ರೋತ್ಸಾಹಿಸಬೇಕು. ಈಗಿನ ಕಾಲದಲ್ಲಿ ಉಹಾಲೋಕ ತೇಲಾಡುತ್ತಿದ್ದಾರೆ. ಸಮಾಜದ ದೃಷ್ಟಿಯಿಂದ ಸಂಸ್ಕೃತಿ ತಾಯಿಯ ಹಾಲು ಇದ್ದಂತೆ. ಸಮಾಜದ ಚಿಂತಕರು ಕಲಾವಿದರು ಸಾಹಿತಿಗಳು, ಕವಿಗಳು ಜಾತಿವಾದಿಗಳಾದರೆ ಸಮಾಜ ಕೆಡುತ್ತದೆ. ಸಂಸ್ಕೃತಿಯಿಂದ ದೇಶ ಕಟ್ಟಬಹುದು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಗ್ರಾಮೀಣ ಕಲೆಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಅವುಗಳನ್ನು ಉಳಿಸಿ, ಬೆಳೆಸಬೇಕು. ಆಗ ಮಾತ್ರ ಅ‍ುಗಳನ್ನು ನಾವು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಹೇಳಿದರು.

ನಗರದ ಡಾ.ಹೆಚ್.ಎನ್ ಕಾಲಾಭವನದಲ್ಲಿ ಗ್ರಾಮೀಣ ಯುವ ಕಾಲಾ ಸಂಘ ಆಯೋಜಿಸಿದ್ದ 30ವರ್ಷ ಸುದೀರ್ಘ ಪ್ರಯಾಣದಲ್ಲಿ ಗ್ರಾಮೀಣ ಯುವ ಕಲೆ. ಸಂಸ್ಕೃತಿ, ವೈಚಾರಿಕ ಚಿಂತನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೆಂಕಟರವಣಪ್ಪನವರ ಸಾಧನೆ

ಜನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗುಟ್ಲಕುಂಟೆ ವೆಂಕಟರವಣಪ್ಪರವರು ಕರ್ನಾಟಕದಿಂದ ದೆಹಲಿಯವರೆಗೂ ಕಲಾ ಸೇವೆ ಮಾಡುವ ಮೂಲಕ ಜನರಿಗೆ ಮನ ಮುಟ್ಟುವ ಕಲಾ ತಂಡಗಳನ್ನು ಉಳಿಸಿ- ಬೆಳೆಸಿದ್ದಾರೆ. ಕಳೆದ 30 ವರ್ಷಗಳಿಂದ ಗ್ರಾಮೀಣ ಯುವ ಕಲಾವಿದರ ತಂಡ ಕಟ್ಟಿ ಬೆಳೆಸಿದ್ದಾರೆ. ಕರ್ನಾಟಕದಿಂದ ದೆಹಲಿಯವರೆಗೂ ಕಲಾ ಸೇವೆ ಮಾಡಿದ್ದಾರೆಂದು ಹಾಗೂ ಹಂಪಿ ಉತ್ಸವಗಳಲ್ಲಿ ಜನರಿಗೆ ಮನ ಮುಟ್ಟುವ ಕಲಾ ತಂಡಗಳನ್ನು ಬೆಳೆಸಿದ್ದಾರೆಂದು ತಿಳಿಸಿದರು.ಕರ್ನಾಟಕ ರಾಜ್ಯ ಜನಪದ ಅಕಾಡೆಮಿ ಅಧ್ಯಕ್ಷ ಗೊಳ್ಳಹಳ್ಳಿ ಶಿವಪ್ರಸಾದ್ ಮಾತನಾಡಿ, ಉತ್ಸವಗಳನ್ನು ಏರ್ಪಡಿಸುವ ಮೂಲಕ ಕಲೆಗಳನ್ನು ಪ್ರೋತ್ಸಾಹಿಸಬೇಕು. ಈಗಿನ ಕಾಲದಲ್ಲಿ ಉಹಾಲೋಕ ತೇಲಾಡುತ್ತಿದ್ದಾರೆ. ಸಮಾಜದ ದೃಷ್ಟಿಯಿಂದ ಸಂಸ್ಕೃತಿ ತಾಯಿಯ ಹಾಲು ಇದ್ದಂತೆ. ಸಮಾಜದ ಚಿಂತಕರು ಕಲಾವಿದರು ಸಾಹಿತಿಗಳು, ಕವಿಗಳು ಜಾತಿವಾದಿಗಳಾದರೆ ಸಮಾಜ ಕೆಡುತ್ತದೆ. ಸಂಸ್ಕೃತಿಯಿಂದ ದೇಶ ಕಟ್ಟಬಹುದು ಎಂದು ತಿಳಿಸಿದರು

ಸಾಧಕರ ಚಿಂತನೆಗಳೇ ಪ್ರೇರಕ ಗೊಟ್ವಗುಂಟೆ ವೆಂಕಟರಮಣಪ್ಪ ಗ್ರಾಮೀಣ ಯುವ ಕಲಾ ಸಂಘವು ಕಲೆ, ಸಂಸ್ಕೃತಿ ಮತ್ತು ಜನಕಲ್ಯಾಣಕ್ಕೆ ತಮ್ಮನ್ನು ತಾವೇ ಮುಡಿಪಾಗಿಟ್ಟಿದ್ದಾರೆ. ನಾವು ಬಸವಣ್ಣನವರ ನೈತಿಕತೆ, ಡಾ. ಬಿ. ಆರ್. ಅಂಬೇಡ್ಕರ್ರವರ ಸಾಮಾಜಿಕ ನ್ಯಾಯದ ಕಳಕಳಿ, ಸರ್ ಎಂ. ವಿಶ್ವೇಶ್ವರಯ್ಯನವರ ತಾಂತ್ರಿಕ ದೃಷ್ಟಿ, ಮತ್ತು ಡಾ. ಎಚ್. ನರಸಿಂಹಯ್ಯನವರ ವೈಚಾರಿಕ ಚಿಂತನೆಗಳಿಂದ ಪ್ರೇರಿತರಾಗಿದ್ದೇವೆ ಎಂದು ತಿಳಿಸಿದರು.ಇಂದು ನಮ್ಮ ತಂಡದ ಕಲಾವಿದರು ವಿಟಿಯು-ತರಬೇತಿ ಪಡೆದ ತಂತ್ರಜ್ಞರು, ಉತ್ಸಾಹಿ ಕಲಾವಿದರು ಮತ್ತು ಸಾಂಸ್ಕೃತಿಕ ಪಾಲಕರ ಸಮಾಗಮವಾಗಿದೆ. ತಂತ್ರಜ್ಞಾನ ಮತ್ತು ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿ, ಗ್ರಾಮೀಣ ಯುವ ಸಮುದಾಯದ ಪ್ರತಿಭೆಗೆ ಹೊಸ ದಿಕ್ಕು ತೋರಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದರು.ಭವಿಷ್ಯದ ದೃಷ್ಟಿ, ಬದುಕಿನ ಉದ್ದೇಶ

ನಮ್ಮ ಕಾರ್ಯವು ಹಿಂದಿನ ಜ್ಞಾನ, ಇಂದಿನ ಕರ್ತವ್ಯ ಮತ್ತು ಮುಂದಿನ ಕನಸುಗಳನ್ನು ಬೆಸೆಯುವ ಒಂದು ನಿರಂತರ ಸೇತುವೆಯಾಗಿದೆ. ಈ ಸೇವೆಯ ಮೂಲಕ ಸಮಾಜಕ್ಕೆ ನಮ್ಮ ಕೊಡುಗೆಯನ್ನು ನೀಡುವುದಷ್ಟೇ ಅಲ್ಲ, ನಮ್ಮ ಜೀವನಕ್ಕೊಂದು ಸಾರ್ಥಕ ಉದ್ದೇಶವನ್ನು ಕಂಡುಕೊಳ್ಳುತ್ತಿದ್ದೇವೆ. ಆದ್ದರಿಂದ, ನಮ್ಮದು ಕೇವಲ ಒಂದು ಸಂಘಟನೆಯಲ್ಲ, ಬದಲಿಗೆ ಸಮಾಜ ಪರಿವರ್ತನೆಗೆ ನಾವು ಕೈಗೊಂಡಿರುವ ಒಂದು ನಿಷ್ಠಾವಂತ ಅಭಿಯಾನ ಎಂದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕರು-ಆದರ್ಶ.ಜಿ.ವಿ, ಗೊಳ್ಳಹಳ್ಳಿ ಶಿವಪ್ರಸಾದ್ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾಸಪ್ತಗಿರಿ, ಮಾಕಾರಾಮಚಂದ್ರ, ಮುನಿರೆಡ್ಡಿ, ಜನಾರ್ದನಮೂರ್ತಿ, ದಲಿತ ಮುಖಂಡರಾದ ಸೋಮಯ್ಯ, ಕಲಾವಿದರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಉಪಸ್ಥಿತರಿದ್ದರು.

.