ಸಮೂಹದ ವ್ಯವಸ್ಥೆಯ ಪಾಲುದಾರರಾದ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಬಾರದು.
ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಬಾರದು: ದೇವಿದಾಸ ಶಾನಭಾಗ
ಕನ್ನಡಪ್ರಭ ವಾರ್ತೆ ಯಲ್ಲಾಪುರಮಹಿಳೆಯರ ನೋವನ್ನು ಅರಿತು ಸರ್ಕಾರ ಗೌರವಿಸಿ ಉದ್ಯೋಗ ನಿರ್ವಹಣೆಗೆ ದಾರಿ ಮಾಡಿದೆ. ಸರ್ಕಾರದ ಗ್ಯಾರಂಟಿ ಯೋಜನೆ ಅನೇಕರ ಬದುಕಿಗೆ ಧೈರ್ಯ ತುಂಬಿದೆ. ಸಮೂಹದ ವ್ಯವಸ್ಥೆಯ ಪಾಲುದಾರರಾದ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಬಾರದು. ಬಡತನ ನಿರ್ಮೂಲನೆ ಆಗಬೇಕು. ಹಳ್ಳಿಗಳ ಮೂಲೆಮೂಲೆಯಲ್ಲಿ ಗ್ಯಾರಂಟಿ ಯೋಜನೆ ತಲುಪಿಸಲು ನಮ್ಮ ಸಮಿತಿ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಜನರ ಜೀವನ ಮಟ್ಟ ಸುಧಾರಿಸಲು ಪಣತೊಟ್ಟಿದೆ ಎಂದು ತಾಲೂಕಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇವಿದಾಸ ಶಾನಭಾಗ ಹೇಳಿದರು.
ವಜ್ರಳ್ಳಿಯ ಆದರ್ಶ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಸ್ಪಂದನಾ ಕಾರ್ಯಕ್ರಮದ ಗ್ರಾಮೀಣ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವಾತಂತ್ರ‍್ಯ ಹೋರಾಟಗಾರರ ಪರವಾಗಿ ಕುಟುಂಬದ ಲಕ್ಷ್ಮೀನಾರಾಯಣ ಭಟ್ಟ ಕಳಚೆ ಸನ್ಮಾನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿ ರಂಜನಾ ಹುಳ್ಸೆ ಸನ್ಮಾನ ಸ್ವೀಕರಿಸಿದರು. ಗ್ಯಾರಂಟಿ ಯೋಜನೆಯ ಫಲಾನುಭವಿ ಲಕ್ಷ್ಮೀ ಸಿದ್ದಿಯನ್ನು ಗೌರವಿಸಲಾಯಿತು.
ತಾಪಂ ಇಒ ರಾಜೇಶ್ ಧನವಾಡಕರ್, ತಾಲೂಕು ಪಂಚ ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯ ಟಿ.ಸಿ. ಗಾಂವ್ಕರ, ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ, ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಪ್ರಮುಖರಾದ ಪ್ರೇಮಾನಂದ ನಾಯ್ಕ, ಗಜಾನನ ಭಟ್ಟ ಕಳಚೆ, ಮಹೇಶ ಗಾಂವ್ಕರ ಉಪಸ್ಥಿತರಿದ್ದರು.ಹೆಸ್ಕಾಂನ ಸಹಾಯಕ ಅಭಿಯಂತರ ಪ್ರಮಾಥ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಲ್ಲಾಪುರ ಘಟಕದ ವ್ಯವಸ್ಥಾಪಕ ಸಂತೋಷ, ಆಹಾರ ಇಲಾಖೆಯ ರಾಘವೇಂದ್ರ ಕಿನ್ನಿಗೋಳಿ ಮಾಹಿತಿ ನೀಡಿದರು.
ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮಹೇಶ ನಾಯ್ಕ ಸ್ವಾಗತಿಸಿದರು. ಸಮಿತಿಯ ಸದಸ್ಯ ಎಂ.ಕೆ. ಭಟ್ಟ ಯಡಳ್ಳಿ ನಿರ್ವಹಿಸಿದರು. ಅನಿಲ ಮರಾಠಿ ವಂದಿಸಿದರು.