ಸಾರಾಂಶ
ಶಿಗ್ಗಾಂವಿ: ಗ್ರಾಮದ ಅಭಿವೃದ್ಧಿಯು ಮನೆಯಲ್ಲಿರುವ ಪ್ರತಿಯೊಬ್ಬ ಯುವಕ ಯುವತಿಯರ ಮೇಲೆ ನಿಂತಿದ್ದು ಜವಾಬ್ದಾರಿಯುತ ಕಾರ್ಯವೈಖರಿ ಮಾಡುವಂತಾಗಬೇಕು ಎಂದು ನಿವೃತ್ತ ಶಿಕ್ಷಕ ಐ.ಎಲ್. ಬೋಸ್ಲೆ ಹೇಳಿದರು.ತಾಲೂಕಿನ ಮಮದಾಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ೨೦೦೩ರಿಂದ ೨೦೦೮ರ ವರೆಗಿನ ವಿದ್ಯಾರ್ಥಿ ಬಳಗ ಸೇವಾಲಾಲ್ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಷ್ಯೆ ಹಾಗೂ ಗುರುವಿನ ಸಂಬಂಧ ಅತ್ಯಂತ ದೃಢವಾಗಿದ್ದು ಉನ್ನತ ಸ್ಥಾನಮಾನಗಳಿಗೆ ಶಿಷ್ಯರು ಸೇರಿದಾಗ ಗುರುವಿನ ಸ್ಥಾನಕ್ಕೆ ಬಲ ಬರುತ್ತದೆ ಎಂದರು.ಬಳಿಕ ಮಾತನಾಡಿದ ಶಿಕ್ಷಕ ಮಂಜುನಾಥ್ ಬಡಪ್ನವರ್, ಪ್ರತಿಯೊಬ್ಬ ಮಗುವಿನಲ್ಲಿ ಒಂದೊಂದು ಕೌಶಲ್ಯ ಅಡಗಿದ್ದು, ಶಿಕ್ಷಕನು ಅವನಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ಕಾರ್ಯ ಮಾಡಬೇಕು. ಪ್ರತಿ ಶಾಲಾ ಮಕ್ಕಳು ಗುರುವಿನ ಮಾರ್ಗದರ್ಶನ ಹಾದಿಯಲ್ಲಿ ಸಾಗಿದರೆ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.ನಂತರ ಮಾತನಾಡಿದ ಪ್ರಾಂಶುಪಾಲ ನೂರಪ್ಪ ನಾಯಕ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಅಭ್ಯಾಸದ ಕಡೆ ಗಮನಹರಿಸಿ ಸಾಗಿದರೆ ಪ್ರತಿಯೊಂದು ಕುಟುಂಬವು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು.ಚಿತ್ರಕಲಾ ಶಿಕ್ಷಕ ನೀಲಕಂಠ ಲಮಾಣಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಶಿಕ್ಷಣ ಬಲಪಡಿಸಲು ರಾತ್ರಿ ಶಾಲಾ ವ್ಯವಸ್ಥೆ ಗ್ರಾಮೀಣ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.ಗ್ರಾಮ ಪಂಚಾಯತಿ ಸದಸ್ಯರಾದ ಲಕ್ಷ್ಮಣ ಬೆಂಡಲಗಟ್ಟಿ, ಶಿಕ್ಷಕರಾದ ಈಶ್ವರ ರಾಠೋಡ, ಪುಟ್ಟಪ್ಪ ನಾಯಕ, ದೇವಣ್ಣ ಚವ್ಹಾಣ ಮಾತನಾಡಿದರು.ಪತ್ರಕರ್ತ ಪುಟ್ಟಪ್ಪ ಲಮಾಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪೊಲೀಸ್ ರಮೇಶ ಲಮಾಣಿ ಅತಿಥಿ ಪರಿಚಯ ಮಾಡಿದ್ದು, ವಸಂತ ನಾಯಕ ಹಾಗೂ ನಾಗರಾಜ ಲಮಾಣಿ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಂಗವ್ವ ಲಮಾಣಿ, ಊರಿನ ಮುಖಂಡರಾದ ಕೃಷ್ಣಪ್ಪ ನಾಯಕ್, ಹನುಮಂತಪ್ಪ ಕಾರಬಾರಿ, ಕಂಟೆಪ್ಪ ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಪೂಜಾರ್, ಚಂದಪ್ಪ ನಾಯಕ, ಆನಂದ ಲಮಾಣಿ, ಈರಪ್ಪ ಪೂಜಾರಿ, ಶೇಖಪ್ಪ ರಾಠೋಡ ಹಾಗೂ ವಿದ್ಯಾರ್ಥಿ ಬಳಗ ಇದ್ದರು.