ಸಾರಾಂಶ
ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಆರ್‌ಟಿಇ ಸೊಸೈಟಿಯ, ರೂರಲ್ ಎಂಜಿನಿಯರಿಂಗ್ ಕಾಲೇಜ್ ಆವಗರಣದಲ್ಲಿ ದಿ ಕೆ. ಎಚ್. ಪಾಟೀಲರ 100ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ನೂತನ ಗ್ರಂಥಾಲಯ ಹಾಗೂ ಬೋಧನಾ ಕೊಠಡಿಗಳ ಕಟ್ಟಡದ ಭೂಮಿ ಪೂಜೆಯನ್ನು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸಿದರು.
ಗದಗ: ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಆರ್‌ಟಿಇ ಸೊಸೈಟಿಯ, ರೂರಲ್ ಎಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ದಿ ಕೆ. ಎಚ್. ಪಾಟೀಲರ 100ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ನೂತನ ಗ್ರಂಥಾಲಯ ಹಾಗೂ ಬೋಧನಾ ಕೊಠಡಿಗಳ ಕಟ್ಟಡದ ಭೂಮಿ ಪೂಜೆಯನ್ನು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಪಾಟೀಲ, ಕಾರ್ಯದರ್ಶಿ ಸಚಿನ ಪಾಟೀಲ, ನಿರ್ದೇಶಕರಾದ ಡಾ. ಅರವಿಂದ ಪಾಟೀಲ, ದೀಪಕ ಪಾಟೀಲ, ರಂಗನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಡಾ. ಎಸ್.ಆರ್. ನಾಗನೂರ, ಡಾ. ವೇಮನ ಸಾವಕಾರ, ಆರ್.ಎಮ್. ಮೂಲಿಮನಿ, ಸಿ.ಬಿ. ಕರಿಕಟ್ಟಿ, ಪ್ರಕಾಶಗೌಡ ಪಾಟೀಲ ಮತ್ತು ಶ್ರೇಯಸ್ ಮೂಲಿಮನಿ. ಆರ್.ಆರ್. ಓದುಗೌಡ್ರ. ಆರ್.ಆರ್. ಸಾವಕಾರ, ಕಾಲೇಜಿನ ಪ್ರಾಚಾರ್ಯ ಡಾ.ವ್ಹಿ.ಎಂ. ಪಾಟೀಲ, ಎಸ್.ಟಿ. ವಾಸನ. ಕೃಷ್ಣಾ ಓದುಗೌಡರ ಸೇರಿದಂತೆ ಹುಲಕೋಟಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮದ ಹಿರಿಯರು, ಆರ್.ಟಿ.ಇ. ಸೊಸೈಟಿಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.