ಗ್ರಾಮೀಣರ ಆರೋಗ್ಯ ರಕ್ಷಣೆಗೆ ಆದ್ಯತೆ: ಶಾಸಕ

| Published : Jan 03 2025, 12:31 AM IST

ಗ್ರಾಮೀಣರ ಆರೋಗ್ಯ ರಕ್ಷಣೆಗೆ ಆದ್ಯತೆ: ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಜನತೆ ಅನುಭವಿಸುತ್ತಿರುವ ನೈಜ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ. ನನ್ನ ಭೇಟಿಯ ಅವಧಿಯಲಿಯೇ ಪರಿಹರಿಸಬಹುದಾದ ಸಾಕಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರಿಸುತ್ತೇನೆ. ಯಾರು ಏನೇ ಹೇಳಿದರೂ ಜನಪರ ಕಾರ್ಯಕ್ರಮ ನಿಲ್ಲಿಸುವುದುಲ್ಲ ಎನ್ನುತ್ತಾರೆ ಶಾಸಕ ಪ್ರದೀಪ್‌ ಈಶ್ವರ್‌.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ, ಸಾರಿಗೆ ಸಮಸ್ಯೆ ಇದ್ದಂತೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಇದೇ ಉದ್ದೇಶದಿಂದಲೇ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ತಾಲೂಕಿನ ಮಂಡಿಕಲ್ಲು ಹೋಬಳಿಯ ರೇಣುಮಾಕಲಹಳ್ಳಿ, ಉಪ್ಪುಗುಟ್ಟಹಳ್ಳಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಹೊಸ ಚೈತನ್ಯ ನೀಡು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದರು.

ಅಧಿಕಾರಿಗಳ ಜತೆ ಗ್ರಾಮಕ್ಕೆ ಭೇಟಿ

ಶಾಸಕರೊಬ್ಬರು ಹಳ್ಳಿಗಳಿಗೆ ಭೇಟಿ ನೀಡುವುದು ಅಪರೂಪ ಎಂಬ ಅಪವಾದವನ್ನು ನನ್ನ ಕ್ಷೇತ್ರದಲ್ಲಿ ದೂರ ಮಾಡಿದ್ದೇನೆ. ಹಳ್ಳಿಗಳಿಗೆ ನಾನಷ್ಟೇ ಭೇಟಿ ನೀಡುತ್ತಿಲ್ಲ, ಬದಲಿಗೆ ನನ್ನೊಂದಿಗೆ 36 ಅಧಿಕಾರಿಗಳ ಇಡೀ ತಾಲೂಕು ಆಡಳಿತವನ್ನೇ ಕರೆದೊಯ್ಯುತ್ತಿದ್ದೇನೆ. ಈ ಮೂಲಕ ಜನತೆ ಅನುಭವಿಸುತ್ತಿರುವ ನೈಜ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ. ನನ್ನ ಭೇಟಿಯ ಅವಧಿಯಲಿಯೇ ಪರಿಹರಿಸಬಹುದಾದ ಸಾಕಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಾಣಿಸಿದ್ದೇನೆ.ಯಾರು ಏನೇ ಹೇಳಿದರೂ ಜನಪರ ಕಾಳಜಿ ಮತ್ತು ಕಾರ್ಯಕ್ರಮ ನಿಲ್ಲಿಸುವ ಮಾತೇ ಇಲ್ಲ ಎಂದರು.

2025 ರಲ್ಲಿ ಕ್ಷೇತ್ರಕ್ಕೆ ಕನಿಷ್ಠ 250 ಕೋಟಿ ಅನುದಾನ ತಂದೇ ತರುತ್ತೇನೆ. ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿನ 300 ಕೋಟಿ ರು. ಬಾಕಿಯಿದ್ದು ಅದನ್ನು ಬಿಡುಗಡೆಗೊಳಿಸಬೇಕಿದೆ. ಈವರ್ಷ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದೇನೆ. ವಿದ್ಯಾರ್ಥಿಗಳಿಗೆ ಎಂಎಲ್‌ಎ ಪ್ರದೀಪ್ ಈಶ್ವರ್ ಹೆಸರಿನಲ್ಲಿ ನೀಡುತ್ತಿರುವ ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಿದ್ದು, ಪುರ ಪಂಚಾಯಿತಿ, ಮಿಣಕನಗುರ್ಕಿ ಪಂಚಾಯಿತಿ, ಮುದ್ದೇನಹಳ್ಳಿ ಪಂಚಾಯಿತಿಯಲ್ಲಿ ಮನೆಮನೆಗೆ ತೆರಳಿ ಕೊಟ್ಟಿದ್ದೇನೆ. ಉಳಿದ ಕಡೆ 2 ತಿಂಗಳಲ್ಲಿ ಅವರಿದ್ದಲ್ಲಿಗೇ ಹೋಗಿ ನೀಡುತ್ತೇನೆ ಎಂದರು.ಈದ್ಗಾಗೆ ರಸ್ತೆ ನಿರ್ಮಾಣ

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ರೇಣುಮಾಕಲಹಳ್ಳಿ ಗ್ರಾಮದ ಮುಸ್ಲಿಂ ಸಮುದಾಯ ಈದ್ಗಾಗೆ ರಸ್ತೆ ಮಾಡಿಕೊಡಲು ಮನವಿ ಮಾಡಿದ್ದಾರೆ. ಸುಮಾರು 40ಲಕ್ಷದಷ್ಟು ಅನುದಾನ ಬೇಕಿದೆ. ಇಲ್ಲಿ ಜಾಗದ ಸಮಸ್ಯೆಯಿದ್ದು ತಹಸೀಲ್ದಾರ್ ಅನಿಲ್, ತಾ.ಪಂ ಇ.ಒ ಮಂಂಜುನಾಥ್ ಅವರು ಸ್ಪಂಧಿಸಿ ಪರಿಹಾರದ ಮಾರ್ಗ ಕಾಣಿಸಿದ್ದಾರೆ. ಉಪ್ಪು ಗುಟ್ಟಹಳ್ಳಿ ಗ್ರಾಮದಲ್ಲಿ ಚರಂಡಿ ಸಮಸ್ಯೆ, ಗಂಗಾಕಲ್ಯಾಣ ಬೋರ್‌ವೆಲ್ ಸಮಸ್ಯೆ, ನಿವೇಶನ ಸಮಸ್ಯೆ,ಹೇಳಿದ್ದಾರೆ. ಶೀಘ್ರದಲ್ಲಿಯೇ ಇವುಗಳಿಗೆ ಪರಿಹಾರ ತೋರಿಸಲಾಗುವುದು ಎಂದರು.ಸ್ಥಳೀಯ ನಿವಾಸಿಯೊಬ್ಬರ ನಿವೇಶನದ ಸಮಸ್ಯೆಗೂ ತಹಸೀಲ್ದಾರ್ ಅನಿಲ್, ತಾ.ಪಂ ಇ.ಒ ಮಂಂಜುನಾಥ್ ಅವರನ್ನು ಕೇಳಿ ಸ್ಥಳದಲ್ಲಿಯೇ ಪರಿಹರಿಸಿದರು. ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿದರೆ ಬಡವರೇ ಆಗಲಿ ಶ್ರೀಮಂತರೇ ಆಗಲಿ ಕಾನೂನಿನಲ್ಲಿ ಬಿಡುವ ಮಾತೇ ಇಲ್ಲ. ಒಂದು ವೇಳೆ ನಿಮಗೆ ಯಾರಾದರೂ ನಮ್ಮ ಅಧಿಕಾರಿಗಳು ತೊಂದರೆ ಕೊಟ್ಟಲ್ಲಿ ಕೋರ್ಟಿಗೆ ಹೋಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ ಎಂದರು.

ರವಿ ಜೀವಕ್ಕೆ ನಾನೇ ಗ್ಯಾರಂಟಿಶಾಸಕ ಸಿ.ಟಿ. ರವಿ ಪ್ರಕರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರದೀಪ್ ಈಶ್ವರ್, ಸಿ.ಟಿ ರವಿ ಅವರು ಹಿರಿಯ ರಾಜಕಾರಣಿ,ಅವರನ್ನು ಎನ್‌ಕೌಂಟರ್ ಮಾಡಲು ಉಂಟೆ, ಸುಮ್ಮನೆ ಕಲ್ಪಿಸಿಕೊಳ್ಳುತ್ತಿದ್ದಾರೆ.ನಾನು ಅವರನ್ನು ಕೇಳುತ್ತೇನೆ, 5 ವರ್ಷದ ಹಿಂದೆ ಅವರದೇ ಪಕ್ಷದಲ್ಲಿ ಎಂಎಲ್‌ಎ ಆಗಿದ್ದವರು. ನನ್ನನ್ನ ಅರೆಸ್ಟ್ ಮಾಡಿಸಿ 4 ಗಂಟೆ ಸುತ್ತಾಡಿಸಿ ಚದಲಪುರದ ಬಳಿ ಕೂಡಿಸಿ ನಂತರ ಸ್ಟೇಷನ್‌ಗೆ ಕರೆದುಕೊಂಡು ಬಂದರು ಎಂದು ನೆನಪಿಸಿದರು.

ಇದು ಪಾರ್ಟ್ ಆಫ್ ದ ಜರ್ನಿ ಸರ್. ನಾನು ಯಾರನ್ನೂ ಟೀಕಿಸಲಿಲ್ಲವಲ್ಲ. 24 ಗಂಟೆ ಒಳಗೆ ಕೋರ್ಟಿಗೆ ಹಾಜರುಪಡಿಸಬೇಕು ಎಂದಿದೆ. ಹೀಗೆ ಕರೆದೊಯ್ಯುವಾಗ ಅಲ್ಲೆಲ್ಲೋ ಅವರಿದ್ದ ವಾಹನವನ್ನು ಅಲ್ಲೇಲ್ಲೋ ಸೈಡಿಗೆ ಹಾಕಿರುತ್ತಾರೆ. ಅವರು ಆತಂಕ ಪಡುವುದು ಬೇಡ. ಅವರ ಜೀವಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ ಎಂದರು.