ಎಸ್.ಬಂಗಾರಪ್ಪ ಕಲಿತ ಶಾಲೆಯ ಅಭಿವೃದ್ಧಿಗೆ ಪಣ

| Published : Dec 01 2024, 01:32 AM IST

ಎಸ್.ಬಂಗಾರಪ್ಪ ಕಲಿತ ಶಾಲೆಯ ಅಭಿವೃದ್ಧಿಗೆ ಪಣ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾಳಕೊಪ್ಪ ಸರ್ಕಾರಿ ಪ್ರೌಢಶಾಲೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಶಿಕ್ಷಣ ಪಡೆದ ಸರ್ಕಾರಿ ಪ್ರೌಢಶಾಲೆಯನ್ನು ಬಂಗಾರಪ್ಪನವರ ಸವಿ ನೆನಪಿಗಾಗಿ ಕೆ.ಪಿ.ಎಸ್ ಶಾಲೆ ಮಾಡುವದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದರು.

ಶನಿವಾರ ಬೆಳಗ್ಗೆ ಶಿರಾಳಕೊಪ್ಪ ಸಪಪೂ ಕಾಲೇಜಿನ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವರು, ತಮ್ಮ ತಂದೆ ಶಿಕ್ಷಣ ಪಡೆದ ಶಾಲೆ ಎಂಬುದು ಇತ್ತೀಚೆಗೆ ತಿಳಿದಿದೆ. ಶಿಕ್ಷಣ ಸಚಿವನಾಗಿ ಈ ಶಾಲೆಯನ್ನು ಅಭಿವೃದ್ಧಿ ಪಡಿಸುವದು ನನ್ನ ಪುಣ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು.ಎಸ್‌.ಬಂಗಾರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಆದ್ದರಿಂದ ನಾನು ಈ ಶಾಲೆಯನ್ನು ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಕೆಪಿಎಸಿ ಶಾಲೆ ಮಾಡುವುದಾಗಿ ತಿಳಿಸಿದರು.

ಈಗಾಗಲೇ ಶಿರಾಳಕೊಪ್ಪದಲ್ಲಿ ಹೆಣ್ಣುಮಕ್ಕಳ ಕೆಪಿಎಸ್‌ಸಿ ಶಾಲೆ ಇದೆ ಎಂದು ತಿಳಿದು ಬಂದಿದೆ. ಅಲ್ಲಿನ ಶಾಲೆಯ ಎಲ್ಲ ಮಾಹಿತಿ ಪಡೆದು ಅಲ್ಲಿಯ ಪ್ರಮುಖರ ಜನಪ್ರತಿನಿಧಿಗಳೊಂದಿಗೆ ಚಚಿರ್ಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ಕುರಿತು ಪಕ್ಷದ ಪ್ರಮುಖರಾದ ನಾಗರಾಜ ಗೌಡ ಅವರಿಗೆ ಸಂಭಂದಿಸಿದ ಎಂಜಿನೀಯರ್,ಇಲಾಖೆಯ ಅಧಿಕಾರಿಗಳು ಸೇರಿ ಇತರರನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆದು ತಲುಪಿಸುವಂತೆ ತಿಳಿಸಿದರು.

ರಾಜ್ಯ ಸರ್ಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ ಮತು ನೀಟ್ ಪರೀಕ್ಷೆಯ ತರಬೇತಿ ಆನ್‌ಲೈನ್ ಮೂಲಕ ನೀಡುತ್ತಿದೆ. ಪ್ರಸಕ್ತ ವರ್ಷ 25 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಅವರಿಗೆ ಶಿಕ್ಷಣದ ಜೊತೆಗೆ ಸಂಭಂದಿಸಿದ ಪುಸ್ತಕಗಳನ್ನು ಕೊಡುತ್ತಿದೆ. ಇತರ ಮಕ್ಕಳು ಸಹ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಈ ಹಿಂದೆ ಕ್ರೀಡಾಂಗಣಕ್ಕೆ ಇಂದಿರಾಗಾಂಧಿ ಕ್ರೀಡಾಂಗಣವೆಂದು ಹೆಸರಿತ್ತು. ಆದರೆ ಅಭಿವ್ರದ್ಧಿ ಮಾಡುವ ಸಂಧಪರ್ದಲ್ಲಿ ಅದನ್ನು ತೆರವು ಮಾಡಲಾಗಿದ್ದು, ಪುನಹ ಕ್ರೀಡಾಂಗಣಕ್ಕೆ ಇಂದಿರಾ ಗಾಂಧಿ ಹೆಸರನ್ನು ಇಡುವಂತೆ ಮನವಿ ಸಲ್ಲಿಸಲಾಯಿತು.

ಕಾಯರ್ಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ನಾಗರಾಜ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ, ನಗರ ಅಧ್ಯಕ್ಷ ಸಯ್ಯದ್ ಬಿಲಾಲ್, ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಸೀರ್, ಸ್ಥಾಯಿಸಮಿತಿ ಅಧ್ಯಕ್ಷ ಮಹಬಲೇಶ್, ಸದಸ್ಯರಾದ ರಾಘವೇಂದ್ರ, ನಿರ್ಮಲ ಶಿವಾನಂದ ಸ್ವಾಮಿ, ತೇಜಪ್ಪ ತಡಗಣಿ,ಶಾಲೆಯ ಮುಖ್ಯಶಿಕ್ಷಕ ನಾಗರಾಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜಪ್ಪ, ಶಾಲೆಯ ಶಿಕ್ಷಕರು ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.