ಡೇರಿ ಅಧ್ಯಕ್ಷರಾಗಿ ಎಸ್.ಜಿ.ಮಹೇಶ್, ಉಪಾಧ್ಯಕ್ಷರಾಗಿ ಹೇಮಂತ್ ಕುಮಾರ್ ಆಯ್ಕೆ

| Published : May 04 2025, 01:34 AM IST

ಡೇರಿ ಅಧ್ಯಕ್ಷರಾಗಿ ಎಸ್.ಜಿ.ಮಹೇಶ್, ಉಪಾಧ್ಯಕ್ಷರಾಗಿ ಹೇಮಂತ್ ಕುಮಾರ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್- ರೈತಸಂಘ ಬೆಂಬಲಿತ ಎಸ್.ಜಿ.ಮಹೇಶ್, ಹೇಮಂತ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್- ರೈತಸಂಘ ಬೆಂಬಲಿತ ಎಸ್.ಜಿ.ಮಹೇಶ್, ಹೇಮಂತ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

12 ಮಂದಿ ಸಂಖ್ಯಾಬಲ ಡೇರಿಯಲ್ಲಿ ಜೆಡಿಎಸ್ ಹಾಗೂ ರೈತಸಂಘ ಬೆಂಬಲಿತ ಸದಸ್ಯರ ಒಗ್ಗಟ್ಟಿನಿಂದ ಅಧಿಕಾರ ಹಂಚಿಕೆ ಮಾಡಿಕೊಂಡು ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಜಿ.ಮಹೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರೈತಸಂಘ ಬೆಂಬಲಿತ ಹೇಮಂತ್ ಕುಮಾರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದರು.ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ನಿರ್ದೇಶಕರನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಅಭಿನಂದಿಸಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಸುಂಕಾತೊಣ್ಣೂರು ಡೇರಿಯಲ್ಲಿ ಜೆಡಿಎಸ್- ರೈತಸಂಘ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದಿದ್ದಾರೆ. ಸಹಕಾರ ಸಂಘಗಳ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಮನ್ಮುಲ್ ಒಕ್ಕೂಟದಿಂದ ದೆಹಲಿ ಮಾರುಕಟ್ಟೆಯಲ್ಲಿ ನಿತ್ಯ 50 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿವೆ. ಎಲ್ಲರೂ ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಈ ವೇಳೆ ನಿರ್ದೇಶಕರಾದ ಜೆ.ದೇವೇಗೌಡ, ಲೋಕೇಶ, ಅಪ್ಪುಗೌಡ, ಸತೀಶ್, ಮಧುಶಂಕರ್, ಬಿ.ಸವೀನ, ಯಶೋಧಮ್ಮ, ರಾಮಚಂದ್ರು, ಕಾಳೇಗೌಡ, ಸಿ.ಎಸ್.ಲೋಕೇಶ್, ಸೊಸೈಟಿ ಅಧ್ಯಕ್ಷ ನಂದೀಶ್, ನಿದೇಕರಾದ ಪಾರ್ಥಸಾರಥಿ, ಎಸ್.ಕೆ.ಪ್ರಭಾಕರ, ಮುಖಂಡರಾದ ಕೋಡಾಲರಾಧಾಕೃಷ್ಣ, ಮೋಹನ್ ಕುಮಾರ್, ಡೇರಿ ಸ್ವಾಮೀಗೌಡ, ಯೋಗರಾಜು, ಧರ್ಮ, ಮೋಹನ್, ದ್ಯಾವಪ್ಪರಕುಮಾರ, ಕಾರ್‍ಯದರ್ಶಿ ರವಿ, ಸಿಬ್ಬಂದಿ ನವೀನ್ ಸೇರಿದಂತೆ ಹಲವರು ಹಾಜರಿದ್ದರು.