ನರಸಿಂಹರಾಜಪುರ ಅಗಲಿದ ಗಾನ ಕೋಗಿಲೆ ಎಸ್.ಜಾನಕಿ ಅವರು 6 ದಶಕಗಳ ಕಾಲ ವಿವಿಧ ಭಾಷೆ ಹಾಗೂ ಎಲ್ಲಾ ಸ್ತರಗಳಲ್ಲೂ ಹಾಡಿ ಸಂಗೀತ ಸಾಮ್ರಾಜ್ಯವನ್ನೇ ಹುಟ್ಟು ಹಾಕಿದ್ದರು ಎಂದು ತಾಲೂಕು ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶ್ರಾವಣ ಸಂಭ್ರಮ। ಎಸ್.ಜಾನಕಿ ಸವಿ ನೆನಪು । ರಸ ಪ್ರಶ್ನೆಕನ್ನಡಪ್ರಭ ವಾರ್ತೆ ನರಸಿಂಹರಾಜಪುರಅಗಲಿದ ಗಾನ ಕೋಗಿಲೆ ಎಸ್.ಜಾನಕಿ ಅವರು 6 ದಶಕಗಳ ಕಾಲ ವಿವಿಧ ಭಾಷೆ ಹಾಗೂ ಎಲ್ಲಾ ಸ್ತರಗಳಲ್ಲೂ ಹಾಡಿ ಸಂಗೀತ ಸಾಮ್ರಾಜ್ಯವನ್ನೇ ಹುಟ್ಟು ಹಾಕಿದ್ದರು ಎಂದು ತಾಲೂಕು ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ತಿಳಿಸಿದರು.ಶುಕ್ರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಶ್ರಾವಣ ಸಂಭ್ರಮ-2026 ಕಾರ್ಯಕ್ರಮದಡಿ ಎಸ್ ಜಾನಕಿ ಸವಿ ನೆನಪು ಮತ್ತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಹಳ ವರ್ಷಗಳ ಹಿಂದೆ ರೇಡಿಯೋ ಮೂಲಕವೇ ಎಸ್.ಜಾನಕಿ ಅವರ ಹಾಡನ್ನು ಎಲ್ಲರೂ ಕೇಳುತ್ತಿದ್ದರು. ಎಸ್.ಜಾನಕಿ ಅವರ ಸಮಕಾಲೀನವರಾದ ಬಿ.ಕೆ.ಸುಮಿತ್ರ, ಪಿ.ಸುಶೀಲ ಇಂದಿಗೂ ಪ್ರಸ್ತುತರಾಗುತ್ತಾರೆ ಎಂದರು.ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಶಾಲೆಗಳಲ್ಲಿ ಶ್ರಾವಣ ಸಂಭ್ರಮದ ಮೂಲಕ ಎಸ್.ಜಾನಕಿ ಸವಿ ನೆನಪು ಸಹ ಅರ್ಥಗರ್ಭಿತ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಮತ್ತು ಸಾಹಿತ್ಯದ ಬಗ್ಗೆ ಅರಿವು ಮೂಡಿಸಲು ಶಾಲೆಗಳಲ್ಲಿ ಕಸಾಪ ದಿಂದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಸಾಪದಿಂದ ಆದರ್ಶ ದಂಪತಿಗಳ ಸ್ಪರ್ಧೆ ಹಾಗೂ ಜಾನಪದ ಕಾರ್ಯಾಗಾರ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಕ.ಸಾ.ಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ ಶ್ರಾವಣ ಎಂದರೆ ಕೇವಲ ಒಂದು ಮಾಸದ ಹೆಸರಲ್ಲ. ಶ್ರಾವಣ ಮಾಸದಲ್ಲಿ ಹಬ್ಬಗಳ ಸರಮಾಲೆಯೇ ಬರುತ್ತದೆ. ಶ್ರಾವಣ ಸಂಭ್ರಮ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಪರಿಚಯಿಸುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ ಕ.ಸಾ.ಪ ಕಸಬಾ ಹೋಬಳಿ ಘಟಕ ಅಧ್ಯಕ್ಷ ತಕ್ಷಕ್ ಕುಮಾರ್ ಯುವ ಘಟಕದ ಅಧ್ಯಕ್ಷೆ ಸುಷ್ಮಾ ಯುಗಾಂದರ್, ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಜುಬೇದ, ಕಾರ್ಯದರ್ಶಿ ನಂದಿನಿ ಆಲಂದೂರು,ಕ.ಸಾ.ಪ ಪ್ರಧಾನ ಸಲಹೆಗಾರ ಸುನೀಲ್ ಕುಮಾರ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಾಧಿಕಾ ಅರ್ಜುನ್, ಸಹ ಶಿಕ್ಷಕ ನಾಗರಾಜ್ ಇದ್ದರು.ಇದೇ ಸಂದರ್ಭದಲ್ಲಿ ಶಾಲೆ ಪ್ರಾಂಶುಪಾಲರು,ಸಹ ಶಿಕ್ಷಕರು ಹಾಗೂ ಸಿಬ್ಬಂದಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ನಂತರ ಮಕ್ಕಳಿಗೆ ರಸ ಪ್ರಶ್ನೆ ನಡೆಸಲಾಯಿತು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ಎಸ್.ಜಾನಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸುಷ್ಮಾ ಯುಗಾಂದರ್ ಪ್ರಾರ್ಥಿಸಿದರು. ಶಿಕ್ಷಕಿ ಬಲ್ಕೀಸ್ ಭಾನು ಸ್ವಾಗತಿಸಿದರು.ಶಿಕ್ಷಕಿ ಬಿ. ಭಾಗ್ಯ ಕಾರ್ಯಕ್ರಮ ನಿರೂಪಿಸಿದರು.