ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹಂತ ಹಂತವಾಗಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಪುರಸಭೆ ಸದಸ್ಯ ಎಸ್.ಪ್ರಕಾಶ್ ಹೇಳಿದರು.ಪಟ್ಟಣದ 10ನೇ ವಾರ್ಡ್‌ನ ಗಾಂಧಿನಗರದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅನುದಾನದಲ್ಲಿ 7 ಕಡೆಗಳಲ್ಲಿ ನಿರ್ಮಿಸುತ್ತಿರುವ ಹೈ ಮಾಸ್ಕ್ ದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನನ್ನ ವಾರ್ಡ್‌ಗೆ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಸ್ಥಳೀಯ ನಿವಾಸಿಗಳು ಹಲವು ವರ್ಷಗಳಿಂದ ಹೈ ಮಾಸ್ಕ್ ದೀಪಕ್ಕೆ ಬೇಡಿಕೆ ಇಟ್ಟಿದ್ದರು. ಅದು ಸಹ ಇಂದು ನೆರವೇರಿದೆ. ಉಳಿದಂತೆ ಆದ್ಯತೆ ಮೇರಿಗೆ ಅಗತ್ಯ ಸೌಲಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಈ ವೇಳೆ ಯಜಮಾನ್ ಸುಬ್ಬಣ್ಣ, ಅಶೋಕ್, ಹರೀಶ್, ಸತೀಶ್, ಕುಮಾರ್, ರಾಣಿ, ನಾಗಮಣಿ ಸೇರಿದಂತೆ ಇತರರು ಇದ್ದರು.
ಸಿಮೆಂಟ್ ರಸ್ತೆ ಕಾಮಗಾರಿಗೆ ಎಸ್.ನಂದೀಶ್ ಚಾಲನೆಶ್ರೀರಂಗಪಟ್ಟಣ: ಪಟ್ಟಣ ಪುರಸಭೆ ವ್ಯಾಪ್ತಿಯ 6ನೇ ವಾರ್ಡ್‌ನ ಸಿಮೆಂಟ್ ರಸ್ತೆ ಕಾಮಗಾರಿಗೆ ಪುರಸಭೆ ಸದಸ್ಯ ಎಸ್.ನಂದೀಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆ ಅಡಿಯಲ್ಲಿ ಸುಮಾರು 2 ಲಕ್ಷ ರು. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿ ಇದಾಗಿದೆ. ಪಟ್ಟಣದ ಕುಪ್ಪಣ್ಣ ಗರಡಿ ಬೀದಿಯ ರಸ್ತೆಯಿಂದ ಉಮಾ ಶಂಕರ್ ಮನೆಯವರೆಗೆ ರಸ್ತೆ ಕಾಮಗಾರಿ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಸುಮಾರು 100 ಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ. ಇನ್ನು ಉಳಿದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಹಂತ ಹಂತವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದರು. ಸದಸ್ಯರಾದ ಎಂ.ಎಲ್. ದಿನೇಶ್, ಕೃಷ್ಣಪ್ಪ, ಚಂದ್ರಶೇಖರ್, ವಸಂತ್ ಕುಮಾರ್ ಹಾಗೂ ದಿವಾಕರ್ ಸೇರಿದಂತೆ ಇತರರು ಇದ್ದರು.