ಸಚಿನ್ ಪಾಂಚಾಳ ಸಾವು: ಆರೋಪಿಗಳ ಬಂಧನಕ್ಕೆ ಆಗ್ರಹ

| Published : Jan 03 2025, 12:32 AM IST

ಸಾರಾಂಶ

ಬೀದರ್‌ ಜಿಲ್ಲೆಯ ಗುತ್ತಿಗೆದಾರ ವಿಶ್ವಕರ್ಮ ಸಮಾಜದ ಸಚಿನ್ ಮಾನಪ್ಪ ಪಂಚಾಳ ಆತ್ಮಹತ್ಯೆ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಬೀದರ್‌ ಜಿಲ್ಲೆಯ ಗುತ್ತಿಗೆದಾರ ವಿಶ್ವಕರ್ಮ ಸಮಾಜದ ಸಚಿನ್ ಮಾನಪ್ಪ ಪಂಚಾಳ ಆತ್ಮಹತ್ಯೆ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಬಾಗಲಕೋಟೆ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹನಮಂತ ಪತ್ತಾರ ಒತ್ತಾಯಿಸಿದರು.

ಗುಳೇದಗುಡ್ಡ ತಾಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘದ ಪದಾಧಿಕಾರಿಗಳು ಸಚಿನ್ ಸಾವಿನ ಘಟನೆ ಖಂಡಿಸಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ, ಸಚಿನ್ ನಿಗೂಢ ಸಾವಿಗೆ ಕಾರಣರಾದ ಸಚಿವರ ಆಪ್ತರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಸಚಿನ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅಖಂಡೇಶ್ವರ ಪತ್ತಾರ ಅವರು ಮನವಿ ಅವರು ತಹಸೀಲ್ದಾರ್ ಮಂಗಳಾ ಎಂ. ಅವರಿಗೆ ಸಲ್ಲಿಸಿದರು. ಈ ವೇಳೆಯಲ್ಲಿ ತಾಲೂಕ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಗೌರವಾಧ್ಯಕ್ಷ ಸುಭಾಸ್ ಬಡಿಗೇರ, ಉಪಾಧ್ಯಕ್ಷ ಮಾನಪ್ಪ ಬಡಿಗೇರ ತೆಗ್ಗಿ, ಕಟಗೇರಿ ಲಚ್ಚಪ್ಪ ಕಂಬಾರ, ಹಂಸನೂರ ಈರಪ್ಪ ಬಡಿಗೇರ, ಕೋಟೆಕಲ್ ಸುಭಾಸ್ ಬಡಿಗೇರ, ತಿಪ್ಪಣ್ಣ ಬಡಿಗೇರ, ತಿಮ್ಮಸಾಗರ ಚಿದಾನಂದ ಬಡಿಗೇರ, ಹಳದೂರ ಬಸವರಾಜ ಬಡಿಗೇರ, ಕೆಲವಡಿ ರಂಗನಾಥ ಬಡಿಗೇರ, ಹುಲ್ಲಿಕೇರಿ ಕಾಳಪ್ಪ ಬಡಿಗೇರ, ಭೀಮಸಿ ಬಡಿಗೇರ, ಸಂಗಪ್ಪ ಬಡಿಗೇರ, ಅಲ್ಲೂರ ಎಸ್.ಪಿ ದ್ಯಾಮಣ್ಣ ಬಡಿಗೇರ, ಐ.ಎ.ಬಡಿಗೇರ, ವೈ.ಎಸ್.ಬಡಿಗೇರ, ಎ.ಎಂ. ಬಡಿಗೇರ, ಪಾದನಕಟ್ಟಿ ರಾಚಪ್ಪ ಬಡಿಗೇರ ಇತರರು ಇದ್ದರು.ಸೂಕ್ತ ಕ್ರಮಕ್ಕೆ ಮೌನೇಶ್ವರ ಶ್ರೀಗಳ ಆಗ್ರಹ

ಬಾಗಲಕೋಟೆ: ಬೀದರ್‌ ಜಿಲ್ಲೆಯ ಬಾಲ್ಕಿ ತಾಲೂಕಿನ ವಿಶ್ವಕರ್ಮ ಸಮಾಜದ ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠ ಮೌನೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ವಿಶ್ವಕರ್ಮ ಸಮಾಜದವರು ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಗೆ ಮನವಿ ಸಲ್ಲಿಸಿ ತನಿಖೆಗೆ ಒತ್ತಾಯಿಸಿದರು.

ಸಚಿನ್‌ ಆತ್ಮಹತ್ಯೆಯು ಇಡೀ ಸಮಾಜದಲ್ಲಿ ಜೀವನವನ್ನು ಕಂಡುಕೊಳ್ಳಲು ಬರುವಂತ ಯುವಕರ ವೃತ್ತಿಯಲ್ಲಿ ರಾಜಕೀಯ ಪ್ರೇರಿತ ಒತ್ತಡಗಳು, ರಾಜಕಾರಣಿಗಳ ಸಹಚರರ ದಬ್ಬಾಳಿಕೆ, ದೌರ್ಜನ್ಯಗಳು ಮಾರಕವಾಗಿ ಪರಿಣಾಮ ಬೀರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಚಿನ್‌ ಬರೆದಿರುವ ಡೆತ್‌ನೋಟ್‌ ತನಿಖೆಗೆ ಒಳಪಡಿಸಬೇಕು. ಮಾನವೀಯ ಮೌಲ್ಯಗಳ ಆಧಾರದ ಮೇಲೆ ಬದುಕುತ್ತಿರುವ ಸಮಾಜಕ್ಕೆ ಸಾಮಾಜಿಕ ನ್ಯಾಯ ಹಾಗೂ ಭದ್ರತೆ ಇದ್ದಾಗ ಮಾತ್ರ ಬದುಕಲು ಸಾಧ್ಯ. ಹಾಗಾಗೀ ಕೂಡಲೇ ಸಚಿನ್‌ಗೆ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಸಮಾಜದ ಎಲ್ಲ ಸಂಘನೆಗಳು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಸೇರಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮೌನೇಶ್ವರ ಮಹಾಸ್ವಾಮೀಜಿ ತಿಳಿಸಿದರು.

ಈ ವೇಳೆ ಸಮಾಜದ ಗಂಗಾಧರ ಬಡಿಗೇರ, ಮುರನಾಳದ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ ಪತ್ತಾರ, ಉಪಾಧ್ಯಕ್ಷ ಚಂದ್ರಶೇಖರ ಪತ್ತಾರ, ಶಿಲ್ಪಿ, ಯುವ ಮುಖಂಡ ಈರಣ್ಣ ಬಡಿಗೇರ ಸೇರಿ ಅನೇಕರಿದ್ದರು.