ಸಾರಾಂಶ
ರಟ್ಟೀಹಳ್ಳಿ: ಬ್ರಿಟಿಷರ ಗುಲಾಮಗಿರಿಯಿಂದ ಭಾರತವನ್ನು ಸ್ವತಂತ್ರ್ಯಗೊಳಿಸಲು ತಮ್ಮ ಪ್ರಾಣ ಅರ್ಪಣೆ ಮಾಡಿದ ಲಕ್ಷಾಂತರ ದೇಶ ಭಕ್ತರನ್ನು ನೆನೆಯುವುದು ನಮ್ಮ ಕರ್ತವ್ಯ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದರು.ಭವ್ಯ ಭಾರತ ನಿರ್ಮಾಣದ ಕನಸು ಹೊತ್ತ ಲಕ್ಷಾಂತರ ದೇಶ ಭಕ್ತರ ತ್ಯಾಗ, ಬಲಿದಾನ ಇಂದು ಸಾಕಾರಗೊಂಡಿದೆ. ಸ್ವಾತಂತ್ರ್ಯಾ ನಂತರ ಭಾರತ ಅತ್ಯಂತ ಬಲಿಷ್ಠವಾಗಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ವೈದ್ಯಕೀಯ, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ಭಾರತ ಬಲಿಷ್ಠವಾಗಿ ಬೆಳೆದಿದೆ ಎಂದರು.
78 ವರ್ಷದ ಸ್ವತಂತ್ರ್ಯ ನಂತರ ಭಾರತ ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ, ಬಡತನ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಿ ಭಾರತವನ್ನು ವಿಶ್ವ ಗುರುವಾಗಿಸಲು ಶ್ರಮವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇ ಆದಲ್ಲಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿಯಲು ಸಾಧ್ಯ ಎಂದರು.ತಹಸೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ಭಾರತೀಯರಾದ ನಾವುಗಳು ಮೊದಲು ದೇಶಾಭಿಮಾನ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಆ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಮ್ಮೇಲ್ಲರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಕಾಂತ ಬೊಮ್ಮಣ್ಣನವರ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಸಿಪಿಐ ಬಸವರಾಜ ಪಿ.ಎಸ್., ಪಿಎಸ್ಐ ಜಗದೀಶ ಜೆ., ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್., ಅಕ್ಷರ ದಾಸೋಹ ಅಧಿಕಾರಿ ಎಚ್.ಎಚ್. ಜಾಡರ, ದೇವರಾಜ ನಾಗಣ್ಣನವರ, ಮಹೇಶ ಗುಬ್ಬಿ, ಹನಮಂತಗೌಡ ಭರಮಣ್ಣನವರ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ತಳವಾರ, ಮಂಜು ಮಾಸೂರ ಹಾಗೂ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಸದಸ್ಯರು, ಶಿಕ್ಷಕ-ಶಿಕ್ಷಕಿಯರು, ಎಲ್ಲ ಶಾಲೆ ವಿದ್ಯಾರ್ಥಿಗಳು ಇದ್ದರು.ಸಹಕಾರಿ ಸಂಘ
ಪಟ್ಟಣದ ಹೋಳಿಸಾಲ ದುರ್ಗಾ ದೇವಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಡಾ. ವಾಸುದೇವ ಜೋಶಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ರವೀಂದ್ರ ಹರವಿಶೆಟ್ಟರ, ಸತೀಶ ರಾಯ್ಕರ, ಪ್ರಶಾಂತ ಹರವಿಶೆಟ್ಟರ, ಶೇಖಪ್ಪ ಹರವಿಶೆಟ್ಟರ ಮುಂತಾದವರು ಇದ್ದರು.ಆಂಗ್ಲೊ ಉರ್ದು ಪ್ರೌಢ ಶಾಲೆ
ಪಟ್ಟಣದ ಆಂಗ್ಲೊ ಉರ್ದು ಪ್ರೌಢ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಸ್ಥೆ ಅಧ್ಯಕ್ಷ ಮಹಮ್ಮದ ಹುಸೇನ್ ಖಾಜಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಎಂ.ಎಂ ಮುಲ್ಲಾ, ಸಂಸ್ಥೆಯ ಕಾರ್ಯದರ್ಶಿ, ಸದಸ್ಯರು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ಇದ್ದರು.ತಾಲೂಕಿನ ಕಣವಿಸಿದ್ದಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷ ಫಕ್ಕಿರೇಶ ತುಮ್ಮಿನಕಟ್ಟಿ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಬೇಳಕೆರಪ್ಪ ಸಣ್ಣಪ್ಪನವರ, ಬೀರೇಶ ಕರಡೆಣ್ಣನವರ, ಮಂಜಪ್ಪ ಎತ್ತಿನಹಳ್ಳಿ, ಕುಮಾರ ಹರಿಜನ, ವಸಂತ ತುಮ್ಮಿನಕಟ್ಟಿ, ರುದ್ರಪ್ಪ ಮರಡೇರ, ಶಾಲಾ ಮುಖ್ಯೋಪಾಧ್ಯಾಯ ವಿ.ಎಸ್. ಪೂಜಾರ, ಶಿಕ್ಷಕ, ಶಿಕ್ಷಕಿಯರು ಇದ್ದರು.
ಹೆಸ್ಕಾಂ ಕಚೇರಿಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ರಾಜೀವ ಮರಿಗೌಡ್ರ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಸೆಕ್ಷನ್ ಆಫೀಸರ್ ನಾಗರಾಜ ಸೋಮಕ್ಕಳವರ, ಸಿಬ್ಬಂದಿ ಇದ್ದರು.
ತಾಲೂಕಾಡಳಿತ ವಿರುದ್ಧ ಆ. 19ರಂದು ಪ್ರತಿಭಟನೆತಾಲೂಕಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಶಾಸಕರ ಬೆಂಬಗಲಿಗರಿಗಷ್ಟೇ ಸೀಮಿತಗೊಳಿಸಿ ಎರಡು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನು ಕಡೆಗಣಿಸಿ ಕೇವಲ ರಾಜಕೀಯ ಕಾರ್ಯಕ್ರಮ ಮಾಡಿದ್ದಾರೆ. ತಾಲೂಕಾಡಳಿತದ ವಿರುದ್ಧ ಸೋಮವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜು ಪೂಜಾರ, ರಮೇಶ ತಳವಾರ, ಶಂಕರಗೌಡ ಚನ್ನಗೌಡ್ರ, ವೀರನಗೌಡ ಮಕರಿ, ರವಿ ಹದಡೇರ, ಈರಣ್ಣ ಎಡಚಿ, ಹನುಮಂತಪ್ಪ ಗಾಜೇರ, ಆನಂದ ಪುಟ್ಟಣ್ಣನವರ, ಸಿದ್ದು ಹಲಗೇರಿ, ಮಂಜು ತಳವಾರ, ಸುರೇಶ ಜಾಧವ, ಸಂತೋಷ ಕಾಪ್ಸೇಕರ್, ಸುನೀಲ ಕಟ್ಟಿಮನಿ, ಬೀರಪ್ಪ ಹೊಳಜೋಗಿ, ನವೀನ ಮಾದರ, ಸುನೀಲ ನಾಯಕ, ಆನಂದ ಎಂ.ಎಂ., ಸಂತೋಷ ಎಂ.ಎಂ. ಎಚ್ಚರಿಕೆ ನೀಡಿದರು.