ಸಹಸ್ರ ಚಂಡಿಕಾಯಾಗ: ವಿವಿಧ ಧಾರ್ಮಿಕ ಕಾರ್ಯಕ್ರಮ

| Published : May 09 2025, 12:32 AM IST

ಸಾರಾಂಶ

ಬೆ​ಳಗ್ಗೆ 6ಕ್ಕೆ ದೇ​ವಿಗೆ ಅ​ಲಂಕಾರ ಪೂಜೆ, ಶ್ರೀ​ರು​ದ್ರ​ಪಾ​ರಾ​ಯಣ, ಶ್ರೀ​ರುದ್ರ ಏ​ಕಾ​ದಶಿ ಹೋಮ ನ​ಡೆ​ಯಿ​ತು.

ಹು​ಬ್ಬ​ಳ್ಳಿ: ನ​ಗ​ರದ ದಾ​ಜಿ​ಬಾನ್‌ ಪೇ​ಟೆಯ ದು​ರ್ಗಾ​ದೇವಿ ದೇ​ವ​ಸ್ಥಾ​ನ​ದಲ್ಲಿ ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾ​ಗಿ ಕ​ಳೆದ ಆರು ದಿ​ನ​ಗ​ಳಿಂದ ನ​ಡೆ​ಯು​ತ್ತಿ​ರುವ ಶ್ರೀ ಸಹಸ್ರ ಚಂಡಿಕಾಯಾಗ ಗು​ರುವಾರವು ಮುಂದು​ವ​ರಿದಿ​ದ್ದು, ವಿ​ವಿಧ ಧಾ​ರ್ಮಿಕ ಕಾ​ರ್ಯ​ಕ್ರ​ಮ​ಗಳು ವಿ​ಜೃಂಭ​ಣೆ​ಯಿಂದ ಜ​ರು​ಗಿ​ದ​ವು.

ಬೆ​ಳಗ್ಗೆ 6ಕ್ಕೆ ದೇ​ವಿಗೆ ಅ​ಲಂಕಾರ ಪೂಜೆ, ಶ್ರೀ​ರು​ದ್ರ​ಪಾ​ರಾ​ಯಣ, ಶ್ರೀ​ರುದ್ರ ಏ​ಕಾ​ದಶಿ ಹೋಮ ನ​ಡೆ​ಯಿ​ತು. ಸಂಜೆ 5ಕ್ಕೆ ಶ್ರೀ ದು​ರ್ಗಾ​ದೇವಿ ದೇ​ವ​ಸ್ಥಾ​ನದ ಹಿಂದಿನ ಶಾ​ಲೆಯ ಆ​ವ​ರ​ಣ​ದಲ್ಲಿ ಶ್ರೀ ಸ​ಹ​ಸ್ರ​ಚಂಡಿಕಾ ಯಾ​ಗದ ಕ​ಲಶ ಸ್ಥಾ​ಪನೆ, ಮಂಡ​ಲಾ​ರಾ​ಧನೆ, ಅ​ಷ್ಟಾ​ವ​ಧಾನ ಸೇವೆ, ಹೋಮ ತ​ಯಾರಿ ನ​ಡೆ​ದವು.

ಸಂಜೆ 6ರಿಂದ ರಾತ್ರಿ 8ರ​ವ​ರೆಗೆ ಪಂಜಿನ ಬೆ​ಳ​ಕಿ​ನಲ್ಲಿ ಉ​ಯ್ಯಾ​ಲೆ​ಯ​ಲ್ಲಿ​ರುವ ಅ​ಮ್ಮ​ನ​ವರ ಪೂಜೆ, ಮಂಡ​ಲ​ಪೂಜೆ ಮತ್ತು ಗು​ರು​ವೃಂದ​ದ​ವ​ರಿಂದ ವಿ​ಶೇಷ ಪ್ರ​ವ​ಚನ ಜ​ರು​ಗಿ​ತು.

ಸಹಸ್ರ ಚಂಡಿಕಾಯಾಗದ ಪೂಜಾ ಕಾರ್ಯಗಳ ನೇತೃತ್ವ ವಹಿಸಿರುವ ಬೆಂಗಳೂರಿನ ವೇದಬ್ರಹ್ಮ ಶ್ರೀ ಚಂದ್ರೇಶ ಶರ್ಮಾ, ಹುಬ್ಬಳ್ಳಿಯ ವೇದಬ್ರಹ್ಮ ಶ್ರೀ ರವೀಂದ್ರಾಚಾರ್ಯ ಅವರನ್ನೊಳಗೊಂಡ 100 ಜನ ಪುರೋಹಿತರಿಂದ 1 ಸಾವಿರ ಸಂಖ್ಯೆ ಶ್ರೀ ದುರ್ಗಾಸಪ್ತಶತೀ ಪಾರಾಯಣ ಸಂಖ್ಯಾ ಪರಿಪೂರ್ತಿಗಾಗಿ ಪಾರಾಯಣವು 4ನೇ ದಿ​ನ​ವು ಮುಂದುವರಿಯಿತು.

ಶ್ರೀ​ದೇ​ವಿಗೆ ನಿತ್ಯ ಬೆ​ಳಗ್ಗೆ ಪಂಚಾ​ಮೃತ ಅ​ಭಿ​ಷೇಕ, ಮ​ಹಾ​ಭಿ​ಷೇಕ, ವಿ​ಶೇಷ ಅ​ಲಂಕಾರ, ವಿ​ಶೇಷ ನೈ​ವೇದ್ಯ, ಮ​ಹಾ​ಮಂಗ​ಳಾ​ರತಿ, ದೇ​ವಿಯ ಸಾನ್ನಿನಿಧ್ಯ ವೃ​ದ್ಧಿಗೆ ಕಲಾ ಹೋ​ಮಾ​ದಿ​ಗಳು ನ​ಡೆ​ದವು. ಸಂಪೂರ್ಣ ಚ​ತು​ರ್ವೇದ ಪಾ​ರಾ​ಯಣ, ಮಾ​ರ್ಕಂಡೇಯ ಪು​ರಾಣ ಪಾ​ರಾ​ಯ​ಣ ನ​ಡೆ​ಯಿತು. ನಂತರ 250 ದಂಪ​ತಿ​ಗ​ಳಿಂದ ಸಂಕಲ್ಪ ಪೂಜೆ ನ​ಡೆ​ಯಿತು. ಸಾ​ವಿ​ರಾರು ಜನ ಭ​ಕ್ತರು ಭಾ​ಗ​ವ​ಹಿ​ಸಿದ್ದು ವಿ​ಶೇ​ಷ​ವಾ​ಗಿ​ತ್ತು.

ಸ​ಮಾ​ರಂಭ​ದಲ್ಲಿ ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ಕಮಿಟಿ ಗೌರವ ಕಾರ್ಯದರ್ಶಿ ಭಾಸ್ಕರ ಎನ್‌. ಜಿತೂರಿ, ಜಾಯಿಂಟ್‌ ಚೀಫ್‌ ಟ್ರಸ್ಟಿ ನೀಲಕಂಠ ಜಡಿ, ಚೀಫ್‌ ಟ್ರಸ್ಟಿ ತಾರಾಸಾ ಧೋಂಗಡಿ, ಕೋಶಾಧಿಕಾರಿ ಅಶೋಕ ಕೆ. ಕಲಬುರ್ಗಿ, ಟ್ರಸ್ಟಿಗಳಾದ ನಾಗೇಂದ್ರ ಹಬೀಬ, ಅಶೋಕ ಪವಾರ ಸೇರಿದಂತೆ ಪಂಚಾಯಿತಿ ಘಟಕದ ಹಿರಿಯರು, ಯುವಕರು, ಮಹಿಳಾ ಮಂಡಳ ಸದಸ್ಯರು ಭಾ​ಗ​ವ​ಹಿ​ಸಿ​ದ್ದ​ರು.

ಇಂದಿನ ಕಾರ್ಯಕ್ರಮ

ಮೇ 9ರಂದು ಬೆ​ಳಗ್ಗೆ 5.30ಕ್ಕೆ 10 ಜನ ಋು​ತ್ವಿ​ಜ​ರಂತೆ 10 ಹೋ​ಮ​ಕುಂಡ​ಗ​ಳಲ್ಲಿ ಒಟ್ಟು 100 ವಿ​ದ್ವ​ಜ್ಜನ ಪು​ರೋ​ಹಿ​ತ​ರಿಂದ 50 ಸ​ಹಾ​ಯಕ ಪು​ರೋ​ಹಿತ ವೃಂದ​ದಿಂದ ಸ​ಹ​ಸ್ರ​ಚಂಡಿ​ಕಾ​ಹೋಮ ನ​ಡೆ​ಯ​ಲಿದೆ. ನಂತರ ತ​ರ್ಪಣೆ, ನ​ಮ​ಸ್ಕಾರ, ಮ​ಹಾ​ಪೂ​ರ್ಣಾ​ಹುತಿ, ಮ​ಹಾ​ಮಂಗ​ಳಾ​ರತಿ, ತೀ​ರ್ಥ-ಪ್ರ​ಸಾದ ವಿ​ನಿ​ಯೋಗ ಇ​ರ​ಲಿದೆ. ಮ​ಧ್ಯಾಹ್ನ 12ಕ್ಕೆ ಗ​ಣ್ಯ​ದಾ​ನಿ​ಗ​ಳಿಂದ ಶ್ರೀ ಸ​ಹ​ಸ್ರ​ಚಂಡಿ​ಕಾ​ಯಾ​ಗದ ಪೂ​ಜಾ​ಫಲ ಅ​ರ್ಪಣೆ ನಂತರ ವಿ​ದ್ವ​ಜ್ಜನ ಬ್ರಾ​ಹ್ಮ​ಣ​ರಿಗೆ ಫ​ಲ​ಸ​ಹಿತ ತಾಂಬೂ​ಲ-ಗೌ​ರ​ವಾ​ರ್ಪಣೆ, ಮ​ಧ್ಯಾಹ್ನ ಮ​ಹಾ​ಪ್ರ​ಸಾದ ಇ​ರ​ಲಿದೆ. ಸಂಜೆ 6ಕ್ಕೆ ಅ​ವ​ಭೃ​ತ​ಸ್ನಾನ, ಶ್ರೀ​ದೇ​ವಿಯ ಪೂಜಾ ಮೂರ್ತಿ ಮೆ​ರ​ವ​ಣಿ​ಗೆ ಹಾಗೂ ಇಂದಿರಾ ಗ್ಲಾಸ್‌ಹೌಸ್‌ ಬಾ​ವಿ​ಯಲ್ಲಿ ಮೂ​ರ್ತಿಯ ವಿ​ಸ​ರ್ಜನೆ ನ​ಡೆ​ಯ​ಲಿ​ದೆ.