ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನ, ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಟಿ.ತಿಮ್ಮೇಗೌಡ ಅವರ ಆಡಳಿತದ ಅಂಗಳದಲ್ಲಿ ಪುಸ್ತಕದ ಅವಲೋಕನ, ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಫೆ.೧೬ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್ ತಿಳಿಸಿದರು.ಅಧ್ಯಕ್ಷತೆಯನ್ನು ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಟಿ.ತಿಮ್ಮೇಗೌಡ ವಹಿಸುವರು. ಉದ್ಘಾಟನೆಯನ್ನು ಸಾಹಿತಿ ಪ್ರದೀಪ್‌ಕುಮಾರ್ ಹೆಬ್ರಿ ನೆರವೇರಿಸುವರು. ಸಾಹಿತ್ಯಶ್ರೀ ಪ್ರಶಸ್ತಿಯನ್ನು ಜಿಪಂ ಸಿಇಓ ಕೆ.ಆರ್.ನಂದಿನಿ ಅವರು ಸಾಹಿತಿ ಶುಭಶ್ರೀ ಪ್ರಸಾದ್ ಅವರಿಗೆ ಮತ್ತು ಬಿಇ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಕೆ.ಜೆ.ಮೋಹನಪ್ರಿಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಸಾಹಿತ್ಯಶ್ರೀ ಪ್ರಶಸ್ತಿ ೫ ಸಾವಿರ ರು. ನಗದನ್ನು ಒಳಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಕೆ.ಪಿ.ಮೃತ್ಯುಂಜಯ ವಹಿಸುವರು. ಪಿಇಟಿ ನಿರ್ದೇಶಕ ಡಾ|ರಾಮಲಿಂಗಯ್ಯ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಎ.ಸಿ.ರಮೇಶ್ ಮತ್ತು ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹೆಚ್.ಟಿ.ರಾಮಕೃಷ್ಣ ಉಪಸ್ಥಿತರಿರುವರು ಎಂದರು.ಗೋಷ್ಠಿಯಲ್ಲಿ ಕನ್ನಿಕ ಶಿಲ್ಪ, ಕೀಲಾರ ಕೃಷ್ಣೇಗೌಡ, ಟಿ.ಶಂಕರೇಗೌಡ ಇತರರಿದ್ದರು.
ಫೆ.೨೧ರಂದು ಪ್ರತಿಭಟನೆಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ಮಂಡ್ಯ ತಾಲೂಕಿನಲ್ಲಿ ೨೫೦ ರಿಂದ ೨೭೫ ಕೋಟಿ ರು. ದುರುಪಯೋಗವಾಗಿದೆ ಎಂದು ಆರೋಪಿಸಿರುವ ಆರ್‌ಟಿಐ ಕಾರ್ಯಕರ್ತ ಜಿ.ಎಸ್.ಜಯರಾಮು ಫೆ.೨೧ರಂದು ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಮಂಡ್ಯ ತಾಲೂಕಿನ ವ್ಯಾಪ್ತಿಯ ಕಸಬಾ, ಕೆರಗೋಡು, ಬಸರಾಳು, ದುದ್ದ, ಕೊತ್ತತ್ತಿ ಒಟ್ಟು ೫ ಹೋಬಳಿಗಳು ಮತ್ತು ೪೬ ಪಂಚಾಯ್ತಿಗಳನ್ನು ಒಳಗೊಂಡಂತೆ ೧೮೩ ಹಳ್ಳಿಗಳಿವೆ. ಜಲಜೀವನ್ ಮಿಷನ್ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಕರಪತ್ರಗಳನ್ನು ಸಾರ್ವಕನಿಕರಿಗೆ ನೀಡಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.ಫೆ.೨೨ರಂದು ಶ್ರೀಶನೇಶ್ವರಸ್ವಾಮಿ ಉತ್ಸವ
ಮಂಡ್ಯ: ತಾಲೂಕಿನ ದುದ್ದಹೋಬಳಿಯ ಜಿ.ಮಲ್ಲಿಗೆರೆ ಗ್ರಾಮದಲ್ಲಿರುವ ಶ್ರೀಶನೇಶ್ವರಸ್ವಾಮಿ ದೇವಸ್ಥಾನ ವತಿಯಿಂದ ಫೆ.೨೨ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಭಕ್ತರ ಸಮ್ಮುಖದಲ್ಲಿ ಶ್ರೀಶನೇಶ್ವರಸ್ವಾಮಿ ಉತ್ಸವ ಮತ್ತು ಪೂಜಾ ಕಾರ್ಯಕ್ರಮವು ಜರುಗಲಿದೆ, ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಸ್ಥಳೀಯ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅರ್ಚಕ ಎಂ.ಎಚ್.ರಾಮು ಮನವಿ ಮಾಡಿದ್ದಾರೆ.