ಸಾರಾಂಶ
ವಿಶೇಷವಾಗಿ ಮತ್ತು ಅದ್ಧೂರಿಯಾಗಿ ಜಯಂತಿ ಆಯೋಜನೆ ಮಾಡಲು ಸಮಾಜದಿಂದ ಉದ್ದೇಶಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಸ್ಕಿ
ತಾಲೂಕು ಬಂಜಾರ ಸಮಾಜದಿಂದ ಸಂತ ಸೇವಲಾಲ್ ಜಯಂತಿಯನ್ನು ಮಾ.3ರಂದು ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಅಮರೇಶ ನಾಯ್ಕ್ ಹೇಳಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪ್ರತಿ ವರ್ಷವೂ ಸಂತ ಸೇವಲಾಲ್ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಮತ್ತು ಅದ್ಧೂರಿಯಾಗಿ ಜಯಂತಿ ಆಯೋಜನೆ ಮಾಡಲು ಸಮಾಜದಿಂದ ಉದ್ದೇಶಿಸಲಾಗಿದೆ. ಮಾ.3ರಂದು ಬೆಳಗ್ಗೆ ಸಂತಸೇವಲಾಲ್ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು.
ಬಳಿಕ ಮಸ್ಕಿ ಪಟ್ಟಣದ ಹೃದಯ ಭಾಗ ಪೊಲೀಸ್ ಠಾಣೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಮಾಜದ ಸ್ವಾಮೀಜಿಗಳಾದ ಬಳಿರಾಮಮಹಾರಾಜ, ಕುಮಾರ ಮಹಾರಾಜ, ವಿಠಲ ಮಹಾರಾಜ, ಸಿದ್ದಲಿಂಗಸ್ವಾಮೀಜಿ ಹಾಗೂ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಪಿ.ರಾಜೀವ್, ಮಣಿಕಂಠ ರಾಠೋಡ, ಆರ್.ಬಸನಗೌಡ ತುರುವಿಹಾಳ, ಮಾನಪ್ಪ ವಜ್ಜಲ್, ಹಂಪನಗೌಡ ಬಾದರ್ಲಿ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ, ಮಾದೇವಪ್ಪಗೌಡ ಪಾಟೀಲ್, ಪ್ರತಾಪಗೌಡ ಪಾಟೀಲ್ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಸಮಾಜದ ಮುಖಂಡರಾದ ಅಮರೇಶ ರಾಠೋಡ, ಅಮರೇಶ ಪವಾರ್, ಸಿತಾರಾಮ ರಾಠೋಡ ಸೇರಿ ಇತರರು ಇದ್ದರು.