ಸಂತ ಸೇವಾಲಾಲ್ ಜಯಂತ್ಯುತ್ಸವ; ಅದ್ಧೂರಿ ಮೆರವಣಿಗೆ

| Published : Feb 11 2024, 01:49 AM IST

ಸಾರಾಂಶ

ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮ ಗಾಂಧಿ ವೃತ್ತ , ಬಸ್ ನಿಲ್ದಾಣ , ಅಂಬೇಡ್ಕರ್ ವೃತ್ತ ಸೇರಿ ಪ್ರಮುಖ ಬೀದಿಗಳ ಮೂಲಕ ತಾಲೂಕು ಕಚೇರಿಯವರೆಗೆ ಸಾಗಿತು. ಮೆರವಣಿಗೆಯಲ್ಲಿ ಯುವಕರು, ಮಕ್ಕಳು, ಮಹಿಳೆಯರು ಕುಣಿದು ಕುಪ್ಪಳಿಸಿದರು.ಈ ವೇಳೆ ಬಂಜಾರ ಸಮಾಜದ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಕೆಪಿಸಿಸಿ ಎಸ್.ಟಿ. ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕರ ಪುತ್ರ ಕೀರ್ತಿ ಕುಮಾರ್ ಮೂಲಕ ಶಾಸಕ ಬಿ.ದೇವೇಂದ್ರಪ್ಪಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಬಂಜಾರ ಸಮಾಜದ ವತಿಯಿಂದ ಶನಿವಾರ ಸಂತ ಸೇವಾಲಾಲ್ ಜಯಂತ್ಯುತ್ಸವ ಅದ್ಧೂರಿಯಾಗಿ ಜರುಗಿತು. ಪ್ರವಾಸಿ ಮಂದಿರದ ಆವರಣದಲ್ಲಿ ಬಂಜಾರ ಗುರು ಪೀಠ ಚಿತ್ರದುರ್ಗದ ಸರ್ದಾರ್ ಶ್ರೀ ಸೇವಾಲಾಲ್ ಸ್ವಾಮೀಜಿ ಹಾಗೂ ಸೂರಗೊಂಡನಕೊಪ್ಪದ ಪೀಠ ಅಧ್ಯಕ್ಷ ಬಾಲಕೃಷ್ಣ ಮಹಾರಾಜ ಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮ ಗಾಂಧಿ ವೃತ್ತ , ಬಸ್ ನಿಲ್ದಾಣ , ಅಂಬೇಡ್ಕರ್ ವೃತ್ತ ಸೇರಿ ಪ್ರಮುಖ ಬೀದಿಗಳ ಮೂಲಕ ತಾಲೂಕು ಕಚೇರಿಯವರೆಗೆ ಸಾಗಿತು. ಮೆರವಣಿಗೆಯಲ್ಲಿ ಯುವಕರು, ಮಕ್ಕಳು, ಮಹಿಳೆಯರು ಕುಣಿದು ಕುಪ್ಪಳಿಸಿದರು.ಈ ವೇಳೆ ಬಂಜಾರ ಸಮಾಜದ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಕೆಪಿಸಿಸಿ ಎಸ್.ಟಿ. ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕರ ಪುತ್ರ ಕೀರ್ತಿ ಕುಮಾರ್ ಮೂಲಕ ಶಾಸಕ ಬಿ.ದೇವೇಂದ್ರಪ್ಪಗೆ ಮನವಿ ಸಲ್ಲಿಸಿದರು. ಬಂಜಾರ ಸಮಾಜಕ್ಕೆ ಸಮುದಾಯ ಭವನ ಇಲ್ಲದೇ ಕಳೆದ 3 ವರ್ಷದಿಂದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಂತ ಸೇವಾಲಾಲ್ ಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ವೇಳೆ ಮಾಜಿ ಶಾಸಕ ಎಚ್.ಪಿ. ರಾಜೇಶ್ , ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರ ಅನಿತ್ ಕುಮಾರ್ , ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಾಟೀಲ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಬಂಜಾರ ಸಮಾಜದ ಅಧ್ಯಕ್ಷ ಪುರುಷೋತ್ತಮ ನಾಯ್ಕ್ , ಪಪಂ ಸದಸ್ಯ ನವೀನ್ ಕುಮಾರ್ , ಮುಖ್ಯಾಧಿಕಾರಿ ಲೋಕ್ಯ ನಾಯ್ಕ್, ಸುರೇಶ್ ನಾಯ್ಕ್ ಸೇರಿ ಬಂಜಾರ ಹಾಗೂ ವಿವಿಧ ಸಮಾಜ ಮುಖಂಡರಿದ್ದರು.