ವಿವೇಕಾನಂದರಿಗೆ ಯುವ ಶಕ್ತಿಯಲ್ಲಿ ಅಪಾರ ನಂಬಿಕೆ, ಆತ್ಮವಿಶ್ವಾಸ ಇತ್ತು. ಜಾತಿ ಭೇದ, ಅಸಮಾನತೆ, ಅಂಧಶ್ರದ್ಧೆ ಮರೆತು ಆತ್ಮವಿಶ್ವಾಸಿಗಳಾಗಿ ಎಂಬ ತತ್ವ ಬೋಧಿಸಿದ ಮಹಾನ್ ಸಂತರು. ವಿವೇಕರ ವಾಣಿ ಅಮರವಾಗಿದೆ. ಇವರ ಜೀವನ ಚರಿತ್ರೆ ಅರಿತು ಬದುಕಿದರೆ ಯುವ ಸಂಪತ್ತು ನಾಡಿನ ಸಂಪತ್ತಾಗಲಿದೆ.
ಕಿಕ್ಕೇರಿ:
ವಿವೇಕರ ವಾಣಿ ಅಮರವಾಗಿದೆ. ಇವರ ಜೀವನ ಚರಿತ್ರೆ ಅರಿತು ಬದುಕಿದರೆ ಯುವ ಸಂಪತ್ತು ನಾಡಿನ ಸಂಪತ್ತಾಗಲಿದೆ ಎಂದು ಪರಿಸರ ಪ್ರೇಮಿ ವೆಂಕಟೇಶ್ ತಿಳಿಸಿದರು.ಊಗಿನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಗೆಳೆಯರ ಬಳಗ ಹಮ್ಮಿಕೊಂಡಿದ್ದ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿ, ವಿವೇಕಾನಂದರಿಗೆ ಯುವ ಶಕ್ತಿಯಲ್ಲಿ ಅಪಾರ ನಂಬಿಕೆ, ಆತ್ಮವಿಶ್ವಾಸ ಇತ್ತು. ಜಾತಿ ಭೇದ, ಅಸಮಾನತೆ, ಅಂಧಶ್ರದ್ಧೆ ಮರೆತು ಆತ್ಮವಿಶ್ವಾಸಿಗಳಾಗಿ ಎಂಬ ತತ್ವ ಬೋಧಿಸಿದ ಮಹಾನ್ ಸಂತರು ಎಂದರು.
ಜೇನುಗೂಡು ಸಾಹಿತಿ ಊಗಿನಹಳ್ಳಿ ಮಹೇಶ್ ಮಾತನಾಡಿ, ಬೆಳೆಯುವ ಮಕ್ಕಳಿಗೆ ಆತ್ಮಸ್ಥೈರ್ಯದ ಚಿಲುಮೆ ವಿವೇಕರು. ಹಿಂದೂ ಸಂಸ್ಕೃತಿಯನ್ನು ತಿಳಿಸಿಕೊಟ್ಟ ಪಾಂಡಿತ್ಯಕ್ಕೆ ಇಡೀ ವಿಶ್ವವೇತಲೆದೂಗಿತು ಎಂದರು.ಸಾಮಾಜಿಕ ಕಾರ್ಯಕರ್ತ ಕೆ.ವಿ.ಬಲರಾಮು ಮಾತನಾಡಿ, ಆದರ್ಶ ವ್ಯಕ್ತಿಗಳ, ಗಿಡಮರಗಳ ಸಂರಕ್ಷಣೆ, ನಾಡು, ನುಡಿ ಉಳಿಸಲು ವಿವೇಕರನ್ನು ಪ್ರೇರಕಶಕ್ತಿಯಾಗಿ ಸ್ವೀಕರಿಸಬೇಕಿದೆ. ಕನ್ನಡ ಶಾಲೆ, ಸರ್ಕಾರಿ ಶಾಲೆ ಉಳಿದರೆ ನಾಡು, ನುಡಿ, ಸಂಸ್ಕೃತಿ, ಎಲೆಮರೆಕಾಯಿಯಂತಹ ಪ್ರತಿಭೆ ಉಳಿಯಲಿದೆ ಎಂದರು.
ಮಕ್ಕಳಿಗೆ ವಿವೇಕಾನಂದ ಗೆಳೆಯರ ಬಳಗದಿಂದ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕ, ಸಿಹಿ ವಿತರಿಸಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ಪರಮೇಶ್, ಸೋಮಶೇಖರ್, ಮಂಜುನಾಥಶೆಟ್ಟಿ, ವೆಂಕಟರಮಣಶೆಟ್ಟಿ, ನಿವೃತ್ತ ಸಂಚಾರಿ ನಿಯಂತ್ರಕ ನಂಜೇಗೌಡ, ಮುಖ್ಯಶಿಕ್ಷಕ ಪುಟ್ಟೇಗೌಡ, ಶಿಕ್ಷಕ ಮಹೇಶ್, ಕಿರಣ್ ಹಾಜರಿದ್ದರು.ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ ಸರಳ ಆಚರಣೆ
ಮದ್ದೂರು:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ 163ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.
ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಅಂಗವಾಗಿ ವಿವೇಕಾನಂದ ಪ್ರತಿಮೆಗೆ ಮಾಲಾಪಣೆ ಮಾಡಿ ಕಾಲೇಜು ಪ್ರಾಂಶುಪಾಲೆ ಗೀತಾ ಮಾತನಾಡಿ, ಕಾಲೇಜು ಆವರಣದಲ್ಲಿ ಸ್ಥಾಪನೆಗೊಂಡಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಹೊಣೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಈ ವೇಳೆ ಸಂಘದ ಕಾರ್ಯದರ್ಶಿ ಲಾರಾ ಪ್ರಸನ್ನ, ದೈಹಿಕ ಶಿಕ್ಷಕ ಮೋಹನ್ ಕುಮಾರ್, ಸುಶೀಲಮ್ಮ, ಚಂದ್ರಮ್ಮ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.