ಪರರಿಗಾಗಿ ಜೀವನ ನಡೆಸುವರು ಸಂತರು: ನಿಂಗಣ್ಣ

| Published : Aug 23 2024, 01:02 AM IST

ಸಾರಾಂಶ

Saints Who Live for Others: Ninganna

-ಶ್ರಾವಣ ಶ್ರವಣ ಶಿವಾನುಭವ ಚಿಂತನದಲ್ಲಿ ಸಿಆರ್‌ಪಿ ನಿಂಗಣ್ಣ ಗೋನಾಲ

------

ಕನ್ನಡಪ್ರಭ ವಾರ್ತೆ ಸುರಪುರ

ಪರರಿಗಾಗಿ ಜೀವನ ನಡೆಸಿಕೊಂಡು ಹೋಗುವವರಿಗೆ ಪರೋಪಕಾರಿಗಳೆಂದೂ ಸಂತ-ಶರಣರೆಂದು ಕರೆಯುವರು. ಸಂತ-ಶರಣರಾಗಲಿ ಪರೋಪಕಾರದ ಭಾವವಾಗಲಿ ಬೇರೆ ಬೇರೆ ಅಲ್ಲ ಎಂದು ದೇವಪುರ ಸಿ.ಆರ್.ಪಿ. ನಿಂಗಣ್ಣ ಗೋನಾಳ ಹೇಳಿದರು.

ನಗರದ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ ಜರುಗಿದ ಶ್ರಾವಣ ಶ್ರವಣ ಶಿವಾನುಭವ ಚಿಂತನದಲ್ಲಿ ಶಿವಶರಣರು ಮತ್ತು ಉಪಕಾರ ವಿಷಯ ಕುರಿತು ಮಾತನಾಡಿದ ಅವರು, ಬಸವಾದಿ ಪ್ರಮಥರು ಕಾಯಕದಲ್ಲಿ ಬಂದಿರುವುದನ್ನು ಜನಹಿತಕ್ಕಾಗಿ ಬಳಸಿಕೊಂಡರು. ಪರೋಪಕಾರಿಯಾಗಿ ಜೀವನ ನಡೆಸಿದ ಅವರ ವಚನಗಳು ನಮ್ಮ ಸಂವಿಧಾನದ ಜೀವಾಳವಾಗಿವೆ ಎಂದರು.

ಮಠದ ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಕಾಯಕದಲ್ಲಿ ನಿರತರಾಗಿ ಕಾಯಕದಿಂದ ಬಂದದ್ದರಲ್ಲಿ ತಮಗೂ ಮತ್ತು ಜನಸಾಮಾನ್ಯರ ಜೀವನಕ್ಕೆ ಉಪಯೋಗಿಸುವ ಕೆಲವನ್ನು ಶಿವಶರಣರು ಮಾಡಿದ್ದಾರೆ. ತಮ್ಮ ವಚನಗಳಲ್ಲಿ ಪರೋಪಕಾರದ ಮಹತ್ವವನ್ನು ಸಾರಿದ್ದಾರೆ. ಇಂದು ಸಮಾಜದಲ್ಲಿ ಸ್ವಾರ್ಥ ಸಾಧನೆ ಹೆಚ್ಚಳವಾಗುತ್ತಿದ್ದು, ಪರೋಪಕಾರದ ಭಾವನೆ ಇಲ್ಲವಾಗುತ್ತಿದೆ. ಇದರಿಂದ ನಿಸರ್ಗ ಮಾನವನ ಮೇಲೆ ಮುನಿಸುಗೊಳ್ಳುತ್ತಿದೆ ಎಂದು ನುಡಿದರು.

ಪಿಎಸ್ಐ ಸಿದ್ದಣ್ಣ ಯಡ್ರಾಮಿ ಮಾತನಾಡಿ, ನಿಷ್ಠಿ ಕಡ್ಲಪ್ಪನವರ ವಿರಕ್ತಮಠವು ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ. ಪುರಾಣ ಪ್ರವಚನಗಳನ್ನು ಹೇಳಿಸುವ ಮೂಲಕ ಶ್ರೀಮಠದ ಪೂಜ್ಯರು ಮಹದುಪಕಾರ ಮಾಡುತ್ತಿದ್ದಾರೆ ಎಂದರು.

ಶ್ರೀಶೈಲ ನಿಂಬಾಳ ಮಾತನಾಡಿದರು. ಮಾನಪ್ಪ ಭಜಂತ್ರಿಯವರ ಕೊಳಲು ವಾದನ ಸಭಿಕರ ಮನಸೂರೆಗೊಂಡಿತು. ಉಮೇಶ ಯಾದವ ಪ್ರಾರ್ಥಿಸಿದರು. ರಮೇಶ್ ಕುಲಕರ್ಣಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಗೌರವ ತಾಲೂಕು ಕಾರ್ಯದರ್ಶಿ ಎಚ್.ವೈ. ರಾಠೋಡ್ ನಿರೂಪಿಸಿದರು. ಪ್ರಾಣೇಶ ಕುಲಕರ್ಣಿ ಮಂಗಳಗೀತೆಯನ್ನು ಹಾಡಿದರು.

ಶಿವಶರಣಯ್ಯಸ್ವಾಮಿ ಬಳುಂಡಗಿಮಠ, ಮೇಹನರಾವ್ ಮಾಳದಕರ, ಪ್ರಾಣೇಶ ಕುಲಕರ್ಣಿ, ಶರಣಬಸವ ಕೊಂಗಂಡಿ, ಸೂಗಮ್ಮ ಕೊಂಗಂಡಿ, ರಮೇಶ್ ಕುಲಕರ್ಣಿ, ಶರಣಪ್ಪ ಕಮ್ಮಾರ, ಗೋಪಾಲ ಗುಳೇದ, ಉಮೇಶ ಯಾದವ, ಸುರೇಶ ಅಂಬುರೆ ಸೇರಿದಂತೆ ಅನೇಕ ಕಲಾವಿದರು ಸಂಗೀತ ಸೇವೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಬಸವರಾಜ ಜಮದ್ರಖಾನಿ, ವೀರೇಶ ನಿಷ್ಠಿ ದೇಶಮುಖ, ಗಂಗಾಧರ ರುಮಾಲ, ಕೊಟ್ರಯ್ಯಸ್ವಾಮಿ ಬಳುಂಡಗಿಮಠ, ಶ್ರೀಶೈಲ ಯಂಕಂಚಿ, ಕೊಟ್ರಯ್ಯಸ್ವಾಮಿ ಕೊಟ್ರಯ್ಯಮಠ, ಮಹೇಶ ಹಳ್ಳದ, ಸುಭಾಷ ಹೂಗಾರ, ಶಿವಶರಣಬಸವ ಪುರಾಣಿಕ ಮಠ, ಮಲ್ಲಿಕಾರ್ಜುನ ಗೋಗಿ, ಶರಣಪ್ಪ ಮುಗಲಿ, ಮಾನಪ್ಪ ಸೇರಿದಂತೆ ಇದ್ದರು.

------ಫೋಟೊ: 22ವೈಡಿಆರ್2: ಸುರಪುರ ನಗರದ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ ಜರುಗಿದ ಶ್ರಾವಣ ಶ್ರವಣ ಶಿವಾನುಭವ ಚಿಂತನದಲ್ಲಿ ಸಿಆರ್‌ಪಿ ನಿಂಗಣ್ಣ ಗೋನಾಲ ಮಾತನಾಡಿದರು.