ಸಾರಾಂಶ
ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸೈನಿಕ ಮಾಲತೇಶ್ ಚಾಲನೆ, ಮಕ್ಕಳಿಗೆ ದೇಶಭಕ್ತಿಯ ಪಾಠ ಮಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿರುವುದು ತೃಪ್ತಿ ತಂದಿದೆ ಎಂದ ಸುಬೇದಾರ್ (ನಿವೃತ್ತ) ಮಾಜಿ ಸೈನಿಕ ಮಾಲತೇಶ್ ತಮ್ಮ ಅನುಭವದ ಪ್ರೇರಣಾದಾಯಕ ಮಾತುಗಳಲ್ಲಿ ಮಕ್ಕಳನ್ನು ಅಗ್ನಿವೀರ ಸೇವೆಗೆ ಸೇರಿ, ಸೇವೆ ಸಲ್ಲಿಸುವಂತೆ ಕರೆ ನೀಡಿದರು.ಶುಕ್ರವಾರ ನಗರದ ಬಿ.ಎಚ್.ರಸ್ತೆಯ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸೈನಿಕರಿಗೊಂದು ಸಲಾಂ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಯುದ್ಧದಂತಹ ಕಠಿಣ ಸಮಯದಲ್ಲಿ ನಮ್ಮ ದೇಶದ ಗಡಿಯನ್ನು ಕಾಯುವ ಸೇನಾ ಬಳಗದ ಸೇವೆ ಶೌರ್ಯ, ಜಾಣ್ಮೆ, ನಿಸ್ವಾರ್ಥ ಸೇವೆ, ಮುಖ್ಯವಾಗಿ ದೇಶ ಪ್ರೇಮವನ್ನು ಮೆರೆಯುವ, ದೇಶದ ರಕ್ಷಣೆಗಾಗಿ ಕಾರ್ಗಿಲ್ ವಿಜಯದ ಸಮಯದಲ್ಲಿ ಕಾರ್ಗಿಲ್‌ಗಾಗಿ ಪ್ರಾಣತ್ಯಾಗ ಮಾಡಿದ 520 ಜನ ವೀರ ಯೋಧರು ವೀರ ಸ್ವರ್ಗ ಸೇರಿದುದನ್ನು ಸ್ಮರಿಸಿದರು. ಸಭೆಯಲ್ಲಿ ಉಪಸ್ಥಿತರಿರುವ ಮಕ್ಕಳಿಗೆ ದೇಶಭಕ್ತಿಯನ್ನು ಮೂಡಿಸುವ ವೀರ ಸೇನಾನಿಗಳ ಬಗ್ಗೆ ತಿಳಿಸಿದರು.ಜಿಲ್ಲಾ ಮುಖ್ಯ ಕಾಯರ್ದರ್ಶಿ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಮಕ್ಕಳಿಗೆ ದೇಶಸೇವೆಯ ಮಹತ್ವವನ್ನು ತಿಳಿಸಿ, ದೇಶದ ಗಡಿಯಲ್ಲಿ ವಿದೇಶಿ ಸೈನಿಕರ ದಾಳಿ ಯಿಂದ ದೇಶವಾಸಿಗಳನ್ನು ರಕ್ಷಣೆ ಮಾಡಲು ಹಗಲು ರಾತ್ರಿ ಎನ್ನದೇ ಬಿಸಿಲು ಮಳೆಯ ಪರಿವಿಲ್ಲದೇ ಸೇವೆಸಲ್ಲಿಸುತ್ತಾರೆ. ಅಂಥಹ ‘ಸೈನಿಕರಿಗೊಂದು ಸಲಾಮ್’ ಹಾಗೂ ಮಕ್ಕಳು ದೇಶಪ್ರೇಮವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್.ಪರಮೇಶ್ವರ, ಜಂಟಿಕಾರ್ಯದರ್ಶಿ ಲಕ್ಷ್ಮೀ ಕೆ ರವಿ, ವಿಜಯಕುಮಾರ್, ಮಲ್ಲಿಕಾರ್ಜುನ ಕಾನೂರ್, ರಾಜೇಶ್ ವಿ.ಅವಲಕ್ಕಿ, ಕಾತ್ಯಾಯಿನಿ.ಸಿ.ಎಸ್, ಎಂ.ಹೇಮಲತಾ, ಆರ್.ಮೀನಾಕ್ಷಮ್ಮ, ದಾಕ್ಷಾಯಣಿ, ರಾಜ ಕುಮಾರ್, ಸಂದೇಶ್ ನಾಡಿಗ್, ಬಿಂದು ಶೇಖರ್, ಗೀತಾ ಚಿಕ್ಮಠ್, ನಾಗಪ್ರಿಯ, ಕಸ್ತೂರಬಾ ಬಾಲಿಕಾ ಶಾಲೆಯ ಗೈಡ್ ವಿದ್ಯಾರ್ಥಿನಿಯರು, ಮೇರಿ ಇಮ್ಯಾಕ್ಯು ಲೆಟ್ ಶಾಲೆಯ ಗೈಡ್ ಮಕ್ಕಳು, ಎಟಿಎನ್‌ಸಿಸಿ, ಡಿವಿಎಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ ರೇಂಜರ್ ವಿದ್ಯಾರ್ಥಿಗಳು ದಳನಾಯಕ, ನಾಯಕಿಯರೊಂದಿಗೆ ಭಾಗವಹಿಸಿದ್ದರು. ರಾಜೇಶ್ ವಿ ಅವಲಕ್ಕಿ ನಿರೂಪಿಸಿ, ಎಚ್.ಪರಮೇಶ್ವರ ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು.