ಜೆಎಸ್‌ಎಸ್ ಎಎಚ್‌ಇಆರ್ ನ ಸಮ ಕುಲಪತಿ ಡಾ.ಬಿ. ಸುರೇಶ್
ಕನ್ನಡಪ್ರಭ ವಾರ್ತೆ ಮೈಸೂರುಫಾರ್ಮಸಿ ಪದವೀಧರರಿಗೆ ವಿಫುಲ ಅವಕಾಶಗಳಿದ್ದು, ಅದಕ್ಕೆ ಅಗತ್ಯವಾದ ರೀತಿಯಲ್ಲಿ ಜ್ಞಾನ ಹಾಗೂ ಅನುಭವ ಬೆಳೆಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಎಎಚ್‌ಇಆರ್ ನ ಸಮ ಕುಲಪತಿ ಡಾ.ಬಿ. ಸುರೇಶ್ ತಿಳಿಸಿದರು.ಜಮ್ಮುವಿನ ವಿಜಯಪುರದ ನಜ್ವಾಲ್ ನಲ್ಲಿರುವ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಟ್ಟಡ ಮೊದಲಾದ ಇತರ ಸೌಲಭ್ಯಗಳಿಗಿಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉತ್ತಮ ಬಾಂಧವ್ಯದಿಂದ ಜ್ಞಾನ ಸಂಪಾದಿಸಲು ಹಾಗೂ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ದೂರದೃಷ್ಟಿಯ ಉತ್ತಮ ಧ್ಯೇಯ ಮತ್ತು ಆಶಯಗಳನ್ನಿಟ್ಟುಕೊಂಡು ಸಕಾರಾತ್ಮಕವಾಗಿ ತೊಡಗಿಸಿಕೊಂಡರೆ ಎಲ್ಲಾ ರೀತಿಯ ಯಶಸ್ಸು ಪಡೆಯಲು ಸಾಧ್ಯ. ಡಾ. ಅಬ್ದುಲ್ ಕಲಾಂ ಅವರು ಹೇಳುತ್ತಿದ್ದಂತೆ ಉತ್ತಮ ಕನಸುಗಳನ್ನು ಕಂಡು ಅದನ್ನುಆಚರಣೆಗೆ ತರಲು ಪ್ರಯತ್ನಿಸಿದರೆ ಫಲ ಕಾಣಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನ ಹಾಗೂ ಆಶೀರ್ವಾದಗಳೊಂದಿಗೆ ಸಂಸ್ಥೆಯನ್ನು ಜಮ್ಮುವಿನಲ್ಲಿ ಉತ್ತಮ ರೀತಿಯಲ್ಲಿ ಬೆಳೆಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅವರು ಸದ್ಯದಲ್ಲಿಯೇ ಜಮ್ಮುವಿನಲ್ಲಿ ಸಂಸ್ಥೆಗೆ ನಿವೇಶನ ಪಡೆಯಲಿದ್ದು, ಆದಷ್ಟು ಜಾಗ್ರತೆ ಎಲ್ಲಾ ರೀತಿಯ ಮೂಲ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು.ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಜಯರಾಜೇಂದ್ರರು, ಶಿವಶಂಕರ್, ಪಿ. ರಾಜಣ್ಣ, ಮೈಸೂರು ಮತ್ತು ಊಟಿ ಫಾರ್ಮಸಿ ಕಾಲೇಜುಗಳ ವಿದ್ಯಾರ್ಥಿಗಳು, ಸ್ಥಳೀಯ ಗಣ್ಯರು ಇದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಪಿ. ದೊರೆಸ್ವಾಮಿ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಶುಮೈಲ್ ಅತಿಥಿಗಳನ್ನು ಪರಿಚಯಿಸಿದರು.ಫಾರ್ಮಸಿ ಪದವೀಧರರಿಗೆ ವಿಫುಲ ಅವಕಾಶಗಳಿವೆ
ಜಮ್ಮುವಿನ ವಿಜಯಪುರದ ನಜ್ವಾಲ್ ನಲ್ಲಿರುವ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.