ಉದ್ಯಮಿ ನಂದ ಕುಮಾರ್ ಕುಡ್ವರಿಗೆ ಸಮಾಜ ಮಂದಿರ ಪುರಸ್ಕಾರ- 2025

| Published : Sep 02 2025, 01:01 AM IST

ಸಾರಾಂಶ

ಉದ್ಯಮಿ, ಧಾರ್ಮಿಕ ನೇತಾರ, ನವಮಿ ಸಮೂಹ ಸಂಸ್ಥೆಗಳ ನಂದ ಕುಮಾರ್ ಆರ್. ಕುಡ್ವ ಅವರಿಗೆ ‘ಸಮಾಜ ಮಂದಿರ ಪುರಸ್ಕಾರ 2025’ ನೀಡಿ ಗೌರವಿಸಲಾಗುವುದು ಎಂದು ಸಮಾಜ ಮಂದಿರ ಸಭಾ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ಮೂಡುಬಿದಿರೆ: ಇಲ್ಲಿನ ಸಮಾಜ ಮಂದಿರ ಸಭಾ ವತಿಯಿಂದ ಜರಗಲಿರುವ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಈ ಬಾರಿ ಉದ್ಯಮಿ, ಧಾರ್ಮಿಕ ನೇತಾರ, ನವಮಿ ಸಮೂಹ ಸಂಸ್ಥೆಗಳ ನಂದ ಕುಮಾರ್ ಆರ್. ಕುಡ್ವ ಅವರಿಗೆ ‘ಸಮಾಜ ಮಂದಿರ ಪುರಸ್ಕಾರ 2025’ ನೀಡಿ ಗೌರವಿಸಲಾಗುವುದು ಎಂದು ಸಮಾಜ ಮಂದಿರ ಸಭಾ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.ಸೆ. 22ರಿಂದ 26ರವರೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಪ್ರತೀ ದಿನ ಸಂಜೆ 7ರಿಂದ ಸಾಹಿತ್ಯ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಉತ್ಸವವನ್ನು ಉದ್ಘಾಟಿಸಲಿದ್ಧಾರೆ.ಮೂಡುಬಿದಿರೆ ಬೆಳುವಾಯಿ ಮೂಲದ ಉದ್ಯಮಿ ನಂದ ಕುಮಾರ್ ಆರ್. ಕುಡ್ವ ಮುಂಬೈನಲ್ಲಿ ತನ್ನ ತಂದೆ ಆರಂಭಿಸಿದ್ದ ಬಟಾಟ ವಡಾ ವ್ಯವಹಾರವನ್ನು ಬ್ರಾಂಡ್ ಫುಡ್ ಆಗಿ ಬೆಳೆಸಿದ್ದಾರೆ. 80ರ ದಶಕದಲ್ಲಿ ಹುಟ್ಟೂರು ಮೂಡುಬಿದಿರೆಯ ಅಭಿವೃದ್ಧಿಗೆ ಹೊಟೇಲ್, ಕಾರ್ಗೊ ಸರ್ವಿಸ್, ಲಕ್ಸುರಿ ಬಸ್ಸುಗಳು, ಕಾರ್ಗೊ, ಡೆಕೋರೇಟರ್ಸ್, ಲಾಡ್ಜಿಂಗ್, ಸಭಾಭವನ, ವೀಡಿಯೋ ಥಿಯೇಟರ್, ವೆಜ್ ರೆಸ್ಟೊ ಹೀಗೆ ಸಾಲು ಸಾಲು ನವಮಿ ಬಳಗದ ಉದ್ಯಮಗಳ ಮೂಲಕ ಹಲವು ಕುಟುಂಬಗಳಿಗೆ ಉದ್ಯೋಗದಾತರಾಗಿದ್ದಾರೆ. ಸೆ. 22ರಂದು ಸಂಜೆ 7ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಮಾಜ ಮಂದಿರ ಗೌರವ 2025 :

ಮೂಡುಬಿದಿರೆಯ ಅಭಿವೃದ್ಧಿಯಲ್ಲಿ ತಮ್ಮದೇ ವಿಶಿಷ್ಠ ಕೊಡುಗೆಗಳ ಮೂಲಕ ಗುರುತಿಸಿಕೊಂಡಿರುವ ಸಾಧಕರ ಪೈಕಿ ವರ್ಷವೂ ದಸರಾ ಉತ್ಸವದಲ್ಲಿ 18 ಮಂದಿ ಸಾಧಕರನ್ನು ಸಮಾಜ ಮಂದಿರ ಪುರಸ್ಕಾರದೊಂದಿಗೆ ಗೌರವಿಸಲಾಗುತ್ತಿದೆ. ಸಮಾಜ ಮಂದಿರ ಗೌರವ 2025 ಕ್ಕೆ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.

ವೇ. ಮೂ. ಶ್ರೀ ಎಂ. ಹರೀಶ್ ಭಟ್ (ಧಾರ್ಮಿಕ), ಆಡ್ಲಿನ್ ಜೆ. ಜತನ್ನ (ಶಿಕ್ಷಣ, ಗೌರಾ ಗೋವರ್ಧನ್ (ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್ (ಆಹಾರ ಉದ್ಯಮ), ಪಿ. ರಾಜಾರಾಮ ಭಟ್ (ಸಾಹಿತ್ಯ ಸೇವೆ), ಡಾ. ರೇವತಿ ಭಟ್ (ಆರೋಗ್ಯ) ರವಿ ಕೋಟ್ಯಾನ್ (ಛಾಯಾಗ್ರಹಣ), ಸೀತಾರಾಮ ಶೆಟ್ಟಿ ತೋಡಾರು (ವೇದಿಕೆ ವಿನ್ಯಾಸ), ಯಶವಂತ ಎಂ.ಜಿ. (ಸಂಗೀತ), ರಾಜೇಶ್ ಆರ್. ಶ್ಯಾನುಭಾಗ್ (ಛಾಯಾಗ್ರಹಣ), ತಿಲಕ್ ಕುಲಾಲ್ (ಚಿತ್ರ ಕಲೆ), ಅಶ್ರಫ್ ವಾಲ್ಪಾಡಿ (ಕಲೆ, ಪತ್ರಿಕೋದ್ಯಮ), ಹೆರಾಲ್ಡ್ ತಾವೋ (ಸಂಗೀತ), ಪ್ರಕಾಶ್ ಅಮೀನ್ (ಯೋಗ ಸಂಸ್ಕೃತಿ), ದಾಮೋದರ ಡಿ.ಸಪಲಿಗ (ಸಮುದಾಯ ಸೇವೆ), ದಿನೇಶ್ ಪೂಜಾರಿ (ಸಮುದಾಯ ಸೇವೆ), ರಾಜೇಶ್ ಒಂಟಿಕಟ್ಟೆ (ಕಲೆ) ಕಿರಣ್ ಕುಮಾರ್ (ಶಿಕ್ಷಣ).