ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಒಗ್ಗಟ್ಟಿನಿಂದ ಪತ್ರಕರ್ತರು ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಮಾದರಿ ಪತ್ರಕರ್ತರಾಗಬೇಕೆಂದು ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಗೌರಿಗಣೇಶ ಹಬ್ಬ ಮುಗಿದ ನಂತರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಭವನ ನಿರ್ಮಾಣಕ್ಕೆ ನಗರದಲ್ಲಿ ಸರ್ಕಾರದಿಂದ ಉಚಿತವಾಗಿ ನಿವೇಶನ ಮಂಜೂರು ಮಾಡಿಸಿಕೊಡುವುದಾಗಿ ಶಾಸಕ ಸಮೃದ್ಧಿ ವಿ.ಮಂಜುನಾಥ್ ಭರವಸೆ ನೀಡಿದರು.ನಗರದ ಪತ್ರಕರ್ತರ ಭವನದ ಮುಂಭಾಗದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಡಿ.ವಿ ಗುಂಡಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಪತ್ರಕರ್ತರು ನೈಜ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಸಮಾಜದ ಅಂಕು- ಡೊಂಕುಗಳನ್ನು ತಿದ್ದಬೇಕು. ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಇತ್ತೀಚಿನ ದಿನಗಳಲ್ಲಿ ನಿಜವಾದ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದೆ, ನಕಲಿ ಪತ್ರಕರ್ತರ ಸಂಖ್ಯೆ ಏರಿಕೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ನಕಲಿ ಪತ್ರಕರ್ತರ ಹಾವಳಿ ತಡೆಯಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮುಂದಾಗಬೇಕೆಂದು ಒತ್ತಾಯಿಸಿದರು.
ಸಾರ್ವಜನಿಕರು ಸಹ ಅಸಲಿ ಯಾರು, ನಕಲಿ ಯಾರು ಎಂಬುದನ್ನು ಗಮನಿಸಬೇಕು, ಆಗಲೇ ನಿಜವಾದ ಪತ್ರಿಕೋದ್ಯಮಕ್ಕೆ ಬೆಲೆ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕೋಲಾರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕಾರ್ಯನಿರತ ಪತ್ರಕರ್ತರು ಮನೆ ನಿರ್ಮಿಸಿಕೊಳ್ಳಲು ಉಚಿತವಾಗಿ ನಿವೇಶನಗಳನ್ನು ಕೊಡಿಸಿ ಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಒಗ್ಗಟ್ಟಿನಿಂದ ಪತ್ರಕರ್ತರು ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಮಾದರಿ ಪತ್ರಕರ್ತರಾಗಬೇಕೆಂದು ಕಿವಿಮಾತು ಹೇಳಿದರು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜ ಸೇವಕ ಸಂಗೊಳ್ಳಿ ವೆಂಕಟೇಶ್, ಪ್ರಗತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೋಗಲ್ ಕಾಸ್ತಿ ಮುನೇಶ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಾಜಿ ಯೋಧರ ಸಂಘದ ಅಧ್ಯಕ್ಷ ಜಿ.ಎನ್. ನಾಗಭೂಷಣ್ ರಾವ್, ದಸಂಸ ಜಿಲ್ಲಾ ಸಂಯೋಜಕ ಮೆಕ್ಯಾನಿಕ್ ಶ್ರೀನಿವಾಸ್ ರವರನ್ನು ಪತ್ರಕರ್ತರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವಿ.ಮುನಿರಾಜು, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿನಿಗೇನಹಳ್ಳಿ ಜಿ.ಆನಂದ ರೆಡ್ಡಿ, ಕೋಮುಲ್ ನಿರ್ದೇಶಕ ಬಿ.ವಿ.ಸಾಮೇಗೌಡ, ತಾಪಂ ಮಾಜಿ ಅಧ್ಯಕ್ಷ ಕುಸುವು ಎಂ.ವೆಂಕಟರಮಣ, ಮುಖಂಡರಾದ ಎಂ.ಎಸ್.ಶ್ರೀನಿವಾಸರೆಡ್ಡಿ, ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಸತ್ಯಣ್ಣ, ಗೊಲ್ಲಹಳ್ಳಿ ಜಗದೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಂಗಲಿ ಕೆ.ಸತೀಶ್ ಕುಮಾರ್, ಬಿಜೆಪಿ ಮುಖಂಡ ಟಿ.ಅಗರ ಸುರೇಶ್, ಕಾಂಗ್ರೆಸ್ ಮುಖಂಡರಾದ ತಾವರೆಕೆರೆ ನಾರಾಯಣ ರೆಡ್ಡಿ, ಗಡ್ಡಂ ಚಿನ್ನೇನಹಳ್ಳಿ ರಾಮಮೂರ್ತಿ ನಾಯ್ಡು, ಸೋಮೇಶ್ವರ ಪಾಳ್ಯ ಧನರಾಜ್, ಈ ನೆಲ ಈಜಲ ವೆಂಕಟಾಚಲಪತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ದೇವಾನಂದ್, ಜಿಲ್ಲಾ ಉಪಾಧ್ಯಕ್ಷ ಕೆ. ಪ್ರಕಾಶ್, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಬೇತಮಂಗಲ ಜೆ.ಜಿ. ಶ್ರೀನಿವಾಸ್ ಮೂರ್ತಿ, ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ವಿ. ರಾಮಕೃಷ್ಣಪ್ಪ, ವಿ. ಶಂಕರಪ್ಪ, ಕಾರ್ಯದರ್ಶಿಗಳಾದ ಕನ್ನಸಂದ್ರ ವಿ. ಸುಕುಮಾರ್, ಆರ್. ಶ್ರೀನಿವಾಸಪ್ಪ, ಖಜಾಂಚಿ ಕೆ. ತ್ಯಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್. ಸುಬ್ರಮಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಅಪ್ಪಾಜಿಗೌಡ, ಸಂಗೊಳ್ಳಿ ವೆಂಕಟೇಶ್, ಎಂಪಿ ನಾಗಭೂಷಣಾಚಾರ್ , ನರಸಿಂಹ ಶೆಟ್ಟಿ , ಪಿ.ಎಲ್. ಸುರೇಶ್ ಬಾಬು, ಪಿ.ಎಲ್. ಅಮೃತಯ್ಯ, ಬಂಗಾವಾದಿ ಶ್ರೀನಿವಾಸ್, ಎಂ. ರಾಮದಾಸ್, ಪತ್ರಿಕಾ ಛಾಯಾಗ್ರಾಹಕ ಮುರಳಿ ಇದ್ದರು.
.