ಚಿಕ್ಕಮಗಳೂರು: ಬದುಕಿದ್ದಾಗಲೇ ತನ್ನ ತಿಥಿಗೆ ತರೀಕೆರೆ ತಾಲೂಕಿನ ಶ್ರೀಗಂಧದ ಬೆಳೆಗಾರ ವಿಶುಕುಮಾರ್ ಅಧಿಕಾರಿಗಳಿಗೆ ಆಹ್ವಾನ ನೀಡುವ ಮೂಲಕ ವಿಭಿನ್ನ ರೀತಿ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು: ಬದುಕಿದ್ದಾಗಲೇ ತನ್ನ ತಿಥಿಗೆ ತರೀಕೆರೆ ತಾಲೂಕಿನ ಶ್ರೀಗಂಧದ ಬೆಳೆಗಾರ ವಿಶುಕುಮಾರ್ ಅಧಿಕಾರಿಗಳಿಗೆ ಆಹ್ವಾನ ನೀಡುವ ಮೂಲಕ ವಿಭಿನ್ನ ರೀತಿ ಆಕ್ರೋಶ ಹೊರಹಾಕಿದ್ದಾರೆ.ತಿಥಿ ಆಹ್ವಾನ ಪತ್ರಿಕೆಯಲ್ಲಿ ನಾಳೆ (ಫೆ.9ರಂದು) ಬೆಳಗ್ಗೆ 10ಕ್ಕೆ ಸಂತಾಪ ಸಭೆ, ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಕರೆದಿರುವ ಅವರು ದುಃಖ ತಪ್ತರು: ರಾಜ್ಯದ ಶ್ರೀಗಂಧ ಬೆಳೆಗಾರರು, ಕನ್ನಡನಾಡಿನ ಜನ ಮತ್ತು ರೈತರು ಎಂದು ಹಾಕಿಸಿದ್ದರೆಸಂತಾಪ ಸಭೆಯಲ್ಲಿ ಭಾಗವಹಿಸುವವರು ಎನ್.ಎಚ್.ಎ.ಐ.ನ ಅಧಿಕಾರಿಗಳು, ಅರಣ್ಯ ಇಲಾಖೆ ಭಷ್ಟ ಅಧಿಕಾರಿಗಳುಪೊಲೀಸ್ ಇಲಾಖೆ ಒಳ್ಳೆಯ ಅಧಿಕಾರಿಗಳು, ವಿಶೇಷ ಭೂಸ್ವಾದೀನ ಅಧಿಕಾರಿಗಳು ಎಂದು ಹಾಕಿಸಿದ್ದಾರೆ.ವಿಶುಕುಮಾರ್ ವಾರದ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಾನು ಬೆಳೆದ ಶ್ರೀಗಂಧ ಮರಗಳ ಹತ್ಯೆಯ ಮೊದಲು ತನಗೆ ದಯಾಮರಣ ನೀಡಬೇಕೆಂದು ಮನವಿ ಮಾಡಿ ಶ್ರೀಗಂಧ ಮರಗಳನ್ನು ಮಕ್ಕಳಂತೆ ಬೆಳೆಸಿದ್ದು ಅಧಿಕಾರಿಗಳ ಲಂಚಗುಳಿತನಕ್ಕೆ ಬೇಸತ್ತು, ನೊಂದು 2 ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದೆ ಆದರೆ ಈಗ ಧೈರ್ಯ ಸಾಲುತ್ತಿಲ್ಲ ದಯವಿಟ್ಟು ಅಧಿಕಾರಿಗಳಿಗೆ ಬರೆದ ಪತ್ರದಂತೆ ಶ್ರೀಗಂಧಕ್ಕೆ ವೈಜ್ಞಾನಿಕ ಬೆಲೆ ನೀಡಿ ಖರೀದಿಸಿ ಅಥವಾ ದಯಾಮರಣ ನೀಡಿ ಎಂದು ಮನವಿಯಲ್ಲಿ ತಿಳಿಸಿದ್ದರು.ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇವರ ಜಮೀನಿನ ಗಂಧದ ಮರಗಳು ಹೋಗುತ್ತಿವೆ ಅದಕ್ಕೆ ಸೂಕ್ತ ಪರಿಹಾರ ನೀಡದಿದ್ದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಈ ವಿಭಿನ್ನ ಹೊರಾಟಕ್ಕೆ ಮುಂದಾಗಿದ್ದಾರೆ. ಒಂದು ಗಂಧದ ಮರಕ್ಕೆ ಕೇವಲ ₹420 ನಿಗದಿ ಮಾಡಿರುವ ಅರಣ್ಯಾಧಿಕಾರಿಗಳು, 1 ಮಾವಿನ ಮರಕ್ಕೆ ₹63 ಸಾವಿರ, ತೆಂಗಿಗೆ ₹37 ಸಾವಿರ, ಬೇವಿಗೆ ₹2200, ನಿಂಬೆಗೆ ₹3400 ನೀಡಿ ಶ್ರೀಗಂಧಕ್ಕೆ ಕೇವಲ ₹420 ನಿಗದಿ ಮಾಡಿದ್ದು ಕೋರ್ಟ್ ವೈಜ್ಞಾನಿಕ ದರ ₹25 ಸಾವಿರ ನೀಡುವಂತೆ ಸೂಚಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದ ಆರೋಪಿಸಿದ್ದಾರೆ ಬೆಳೆಗಾರ ವಿಶುಕುಮಾರ್..
--8ಕೆಟಿಆರ್.ಕೆ.32 ಮತ್ತು 8ಕೆಟಿಆರ್.ಕೆ.33