ಕನ್ನಡಪ್ರಭ ವಾರ್ತೆ ಮೈಸೂರುವಿದೇಶ ಪ್ರವಾಸಕ್ಕೆ ತೆರಳಲು ಪತಿ ಅನುಮತಿ ನಿರಾಕರಿಸಿದ ಹಿನ್ನೆಲೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.ಸರಸ್ವತಿಪುರಂ ನಿವಾಸಿ ರಂಗನಾಥ್ ಎಂಬವರ ಪತ್ನಿ ಸಂಧ್ಯಾ (45) ಆತ್ಮಹತ್ಯೆ ಮಾಡಿಕೊಂಡವರು. ಚಾಮರಾಜನಗರ ಮೂಲದ ರಂಗನಾಥ್ ಮತ್ತು ಬೆಂಗಳೂರಿನ ಸಂಧ್ಯಾ ಅವರನ್ನು 25 ವರ್ಷಗಳ ಹಿಂದೆ ವಿವಾಹವಾಗಿದ್ದು, ಮೈಸೂರಿನಲ್ಲಿ ವಾಸವಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಪುತ್ರಿ ವಿದೇಶದಲ್ಲಿ ಓದುತ್ತಿದ್ದು ಹಾಗೂ ಪುತ್ರ ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ.ವಿದೇಶ ಪ್ರವಾಸ ತೆರಳಲು ಸಂಧ್ಯಾ ಯೋಜನೆ ರೂಪಿಸಿದ್ದರು. ಪತಿ ರಂಗನಾಥ್, ಮಗನ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಸ್ನೇಹಿತರೊಂದಿಗೆ ಪ್ರವಾಸ ಬೇಡ ಎಂದು ಹೇಳಿದ್ದರು. ಇದರಿಂದ ಇಬ್ಬರ ನಡುವೆ ಗಲಾಟೆಯಾಗಿದ್ದು, ರಂಗನಾಥ್ ಮನೆಯಿಂದ ಹೊರಗೆ ಹೋದರು. ಇದರಿಂದ ಕುಪಿತಗೊಂಡ ಸಂಧ್ಯಾ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂಧ್ಯಾ ಸಾವಿನ ಬಗ್ಗೆ ಅನುಮಾನವಿದೆ ಎಂದು ಮೃತರ ಸಹೋದರ ದೂರು ನೀಡಿದ್ದು, ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.---- ತಾಯಿ ಸಾವಿಗೆ ತಂದೆ, ತಮ್ಮ ಕಾರಣ- ಪುತ್ರಿ ಆರೋಪನನ್ನ ತಾಯಿಯ ಸಾವಿಗೆ ನನ್ನ ತಂದೆ ಹಾಗೂ ಸಹೋದರ ಕಾರಣ ಎಂದು ಮೃತ ಸಂಧ್ಯಾ ಪುತ್ರಿ ಸೃಷ್ಟಿ ಆರೋಪಿಸಿದರು.ನನ್ನ ತಾಯಿಯ ಅಂತ್ಯಸಂಸ್ಕಾರವನ್ನು ತಂದೆ ಹಾಗೂ ಸಹೋದರ ಮಾಡಬಾರದು. ನನ್ನ ಮಾವ ಅಂತ್ಯ ಸಂಸ್ಕಾರವನ್ನು ಮಾಡಬೇಕು. ನಮ್ಮ ತಂದೆ ಪ್ರತಿ ನಿತ್ಯ ತಾಯಿಯನ್ನು ಅನುಮಾನದಿಂದ ನೋಡುತ್ತಿದ್ದರು. ನನ್ನ ಸಹೋದರ ತಂದೆಯ ಜೊತೆ ಸೇರಿಕೊಂಡು ಕೆಟ್ಟ ಬುದ್ದಿ ಕಲಿತಿದ್ದಾನೆ. ಪ್ರತಿ ನಿತ್ಯ ದುಡ್ಡು ದುಡ್ಡು ಎನ್ನುತ್ತಿದ್ದರು. ನನ್ನ ತಾಯಿಯ ಸಾವಿಗೆ ಕಾರಣದರಾವರಿಗೆ ಶಿಕ್ಷೆಯಾಗಲೇಬೇಕು ಎಂದು ಸೃಷ್ಟಿ ಆಗ್ರಹಿಸಿದರು.---- ಆರೋಪವನ್ನು ತಳ್ಳಿ ಹಾಕಿದ ತಂದೆ- ಮಗನನ್ನ ಮಗಳು ಕುಟುಂಬದವರ ಮಾತು ಕೇಳಿಕೊಂಡು ಗಲಾಟೆ ಮಾಡುತ್ತಿದ್ದಳು. ಅವಳು ವಿದೇಶದಲ್ಲಿ ಓದಲಿಕ್ಕೆ ಹೋಗಿದ್ದಾಳೆ. ಅವಳಿಗೆ ಇಲ್ಲಿ ನಡೆದಿರುವ ಘಟನೆಯ ಬಗ್ಗೆ ಏನೂ ಗೊತ್ತಿಲ್ಲ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತೇನೆ. ಸ್ವಂತ ಮಗಳೇ ಈ ರೀತಿ ಆರೋಪ ಮಾಡಿದರೆ ಏನು ಮಾಡೋದು. ಎಲ್ಲವೂ ತನಿಖೆ ಆಗಲಿ, ಸತ್ಯ ಹೊರಬರಲಿ ಎಂದು ತಂದೆ ರಂಗನಾಥ್ ತಿಳಿಸಿದರು.ಹಿಂದು ಸಂಪ್ರದಾಯದ ಪ್ರಕಾರ ನನ್ನ ಮಗನೇ ನನ್ನ ಪತ್ನಿಯ ಅಂತ್ಯಕ್ರಿಯೆ ಮಾಡಬೇಕು. ಪ್ರವಾಸಕ್ಕೆ ಹೋಗುವ ವಿಚಾರದಲ್ಲಿ ಗಲಾಟೆಯಾಗಿದ್ದು ನಿಜ. ಡೆನ್ಮಾರ್ಕ್ ದೇಶ ಸೇರಿದಂತೆ ಹಲವು ಪ್ರವಾಸಗಳಿಗೆ ನಾನೇ ಹೆಂಡತಿಯನ್ನು ಕಳುಹಿಸಿದ್ದೇನೆ. ಪ್ರವಾಸದ ವಿಚಾರಕ್ಕೆ ಗಲಾಟೆಯಾಯಿತು, ಗಲಾಟೆ ನಂತರ ಮನೆಯಿಂದ ಹೊರಗಡೆ ಹೋಗಿ ಬರುವಷ್ಟರಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ. ನಾನು ಹೊಡೆದು ನನ್ನ ಪತ್ನಿಯನ್ನು ಸಾಯಿಸಿಲ್ಲ. ಪೋಸ್ಟ್ ಮಾರ್ಟಮ್ ರಿಪೋರ್ಟ್, ಎಫ್ಎಸ್ಎಲ್ ರಿಪೋರ್ಟ್ ಬರಲಿ ಎಲ್ಲಾ ಸತ್ಯ ಗೊತ್ತಾಗಲಿದೆ ಎಂದು ಅವರು ಹೇಳಿದರು. ಸುಮ್ಮನೆ ಆರೋಪನನ್ನ ತಾಯಿಯನ್ನು ತಂದೆ ಕೊಲೆ ಮಾಡಿಲ್ಲ. ನನ್ನ ಸಹೋದರಿ ಸುಮ್ಮನೆ ಆರೋಪ ಮಾಡ್ತಿದ್ದಾಳೆ. ನಮ್ಮ ಕುಟುಂಬದಲ್ಲಿ ಯಾವ ಜಗಳವೂ ಇರಲಿಲ್ಲ. ನನ್ನ ತಾಯಿ ಸಂಧ್ಯಾ ಜೊತೆಯಲ್ಲಿ ನಾನು ಹಲವಾರು ದೇಶಗಳಿಗೆ ಪ್ರವಾಸಕ್ಕೆ ಹೋಗಿದ್ದೇನೆ.ಸಹೋದರಿ ಓದಲಿಕ್ಕೆ ವಿದೇಶಕ್ಕೆ ಹೋಗಿದ್ಲು. ನನ್ನ ತಾಯಿ ಪ್ರವಾಸಕ್ಕೆ ಹೋಗುತ್ತೇನೆ ಎಂದು ಅಪ್ಪನ ಬಳಿ ಕೇಳಿದ್ರು. ಪರೀಕ್ಷೆ ಇದೆ ಈಗ ಬೇಡ ಅಂತ ಹೇಳಿದ್ದರು. ಇಷ್ಟಕ್ಕೆ ನನ್ನ ತಾಯಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ನಾನೇ ಹೋಗಿ ನೋಡಿದ್ದು. ನಂತರ ಅಪ್ಪ ಬಂದು ನೋಡಿದ್ದು. ಇವಾಗ ಅಪ್ಪನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಸಂಧ್ಯಾ ಪುತ್ರ ಕೌಶಿಕ್ ತಿಳಿಸಿದರು.