ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ ನಾಮಫಲಕ ಅನಾವರಣ

| Published : May 17 2025, 02:11 AM IST

ಸಾರಾಂಶ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ ಅಭಿವೃದ್ಧಿಗೆ ಶಾಸಕ ಬಸವರಾಜ ರಾಯರಡ್ಡಿ ₹ 9 ಕೋಟಿ ಅನುದಾನ ತಂದಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಿ ಮಾದರಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ.

ಕೊಪ್ಪಳ(ಯಲಬುರ್ಗಾ):

ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ ಮಾದರಿ ಕ್ರೀಡಾಂಗಣವಾಗಿ ನಿರ್ಮಾಣವಾಗಲಿದ್ದು ಜನರಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂದು ಯುವಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠಲ್ ಜಾಬಗೌಡ್ರ ಹೇಳಿದರು.

ಯಲಬುರ್ಗಾ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಅವರು, ಕ್ರೀಡಾಂಗಣ ಅಭಿವೃದ್ಧಿಗೆ ಶಾಸಕರು ₹ 9 ಕೋಟಿ ಅನುದಾನ ತಂದಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಿ ಮಾದರಿ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು.

ಭೂ ನ್ಯಾಯ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ ಮಾತನಾಡಿ, ಕ್ಷೇತ್ರದ ಕ್ರೀಡಾಪಟುಗಳ ಹಿತದೃಷ್ಟಿಯಿಂದ ಬಸವರಾಜ ರಾಯರಡ್ಡಿ ಅವರಿಗೆ ಮಾದರಿ ಕ್ರೀಡಾಂಗಣ ನಿರ್ಮಿಸುವಂತೆ ಮನವಿ ಮಾಡಲಾಗಿತ್ತು. ಮನವಿ ಪರಿಗಣಿಸಿ ಅನುದಾನ ನೀಡಿದ್ದು ಸಂತಸ ತಂದಿದೆ ಎಂದರು.

ಪಪಂ ಮುಖ್ಯಾಧಿಕಾರಿ ನಾಗೇಶ ಆರ್., ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಪಪಂ ಸದಸ್ಯೆ ಡಾ. ನಂದಿತಾ ದಾನರೆಡ್ಡಿ ಮಾತನಾಡಿದರು.

ಕುಕನೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚೆಂಡೂರು, ಪಪಂ ಸದಸ್ಯರಾದ ಹನುಮಂತ ಭಜಂತ್ರಿ, ಬಸವಲಿಂಗಪ್ಪ ಕೊತ್ತಲ್, ಕಳಕಪ್ಪ ತಳವಾರ, ಗಣ್ಯರಾದ ಬಿ.ಎಂ. ಶಿರೂರು, ರೇವಣೆಪ್ಪ ಸಂಗಟಿ, ಹಂಪಯ್ಯಸ್ವಾಮಿ ಹಿರೇಮಠ, ಎಂ.ಎಫ್. ನದಾಫ್, ಸಾವಿತ್ರಿ ಗೊಲ್ಲರ, ಜಯಶ್ರೀ ಕಂದಕೂರು, ಶೋಭಾ ಕುರಿ, ರಹೆಮಾನ‌ ನಾಯಕ, ದೊಡ್ಡಯ್ಯ ಗುರುವಿನ, ನಿಂಗಪ್ಪ ಕಮತರ, ಸಿದ್ದು ಪೊಲೀಸ್‌ಪಾಟೀಲ, ಶರಣಗೌಡ ಪಾಟೀಲ, ಪುನೀತ್ ಕೊಪ್ಪಳ, ಸಿದ್ದರಾಮ‌ ಹಿರೇಕುರಬರ, ಶ್ರೀಧರ ಕಟ್ಟಿಮನಿ, ಶರಣಮ್ಮ ಪೂಜಾರ, ಹಾಗೂ ಎಂಜಿನಿಯರ್‌ ಉಮೇಶ ಬೇಲಿ, ವನರಾಜ ಇದ್ದರು.