ಹನುಮಸಾಗರದಿಂದ ಶ್ರೀಶೈಲಕ್ಕೆ ಸಂಕಲ್ಪ ಸಿದ್ಧಿ ಪಾದಯಾತ್ರೆ

| Published : Mar 23 2024, 01:03 AM IST

ಹನುಮಸಾಗರದಿಂದ ಶ್ರೀಶೈಲಕ್ಕೆ ಸಂಕಲ್ಪ ಸಿದ್ಧಿ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಹನುಮಸಾಗರದಿಂದ ಶ್ರೀಶೈಲ ಮಲ್ಲಿಕಾರ್ಜುನ ಸುಕ್ಷೇತ್ರಕ್ಕೆ ಯುಗಾದಿ ಜಾತ್ರೆಯ ನಿಮಿತ್ತ ಕಂಬಿಯ ಮೂಲಕ ೩೦ನೇ ವರ್ಷದ ಸಂಕಲ್ಪ ಸಿದ್ಧಿ ಪಾದಯಾತ್ರೆ ಅಂಗವಾಗಿ ಮಲ್ಲಯ್ಯನ ಕಂಬಿಯನ್ನು ಭಕ್ತರು ಬೀಳ್ಕೊಟ್ಟರು.

ಹನುಮಸಾಗರ: ಹನುಮಸಾಗರದಿಂದ ಶ್ರೀಶೈಲ ಮಲ್ಲಿಕಾರ್ಜುನ ಸುಕ್ಷೇತ್ರಕ್ಕೆ ಯುಗಾದಿ ಜಾತ್ರೆಯ ನಿಮಿತ್ತ ಕಂಬಿಯ ಮೂಲಕ ೩೦ನೇ ವರ್ಷದ ಸಂಕಲ್ಪ ಸಿದ್ಧಿ ಪಾದಯಾತ್ರೆ ಅಂಗವಾಗಿ ಮಲ್ಲಯ್ಯನ ಕಂಬಿಯನ್ನು ಭಕ್ತರು ಬೀಳ್ಕೊಟ್ಟರು.

ಈ ಕಂಬಿಯು ಲಿಂಗಸಗೂರ ತಾಲೂಕಿನ ಮೂಲಕ ಶ್ರೀಶೈಲಂಗೆ ಸಂಕಲ್ಪ ಸಿದ್ಧಿ ಪಾದಯಾತ್ರೆಗೆ ತೆರಳುತ್ತದೆ. ಭಕ್ತರು ಮೆರವಣಿಗೆಯ ಮೂಲಕ ಶ್ರೀಶೈಲಂನ್ನು ಯುಗಾದಿ ಪಾಡ್ಯದಂದು ತಲುಪುತ್ತಾರೆ. ಕಂಬಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಭಿಷೇಕ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮಲ್ಲಯ್ಯನ ಕಂಬಿಯನ್ನು ಭಕ್ತರು ಶ್ರದ್ಧೆಯಿಂದ ಬರಮಾಡಿಕೊಂಡು ಪೂಜಿಸಿ ಬೀಳ್ಕೊಟ್ಟರು.

ಪಾದಯಾತ್ರೆ ಕೈಗೊಂಡ ಇಲಕಲ್ ತಾಲೂಕಿನ ಗೊರೇಬಾಳ ಭಕ್ತರು, ಹನುಮಸಾಗರ, ಜಹಗೀರಗುಡದೂರ, ಬೆನಕನಾಳ, ಮನ್ನೇರಾಳ, ಬೀಳಗಿ, ಅಂಟರಠಾಣಾ, ಕಾಟಾಪುರ, ಕಬ್ಬರಗಿ, ಚಳಗೇರಿ, ಮಲಕಾಪುರ, ಮೀಯಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಇದ್ದರು.

ತೇರದಾಳದ ಶ್ರೀಶಿವಕುಮಾರ ದೇವರು, ಶರಣಯ್ಯ ಚಂದಯ್ಯ ಕೆಂಭಾವಿಮಠ, ಗುರುಸಿದ್ದಯ್ಯ ನಡುವಿನಮಠ, ಬಸಣ್ಣ ಅಂದಾನೆಪ್ಪ ಅಗಸಿಮುಂದಿನ, ವಾಸುದೇವ ನಾಗೂರ, ರಾಚಪ್ಪ ಚಿನಿವಾಲರ, ವಿಶ್ವನಾಥ ಕನ್ನೂರ, ಶಿವಪುತ್ರಪ್ಪ ಕಂಪ್ಲಿ, ವಿಠ್ಠಲಸಾ ಸಿಂಗ್ರಿ, ಸುನಿಲ ಬಿಂಗಿಕೊಪ್ಪ, ಶ್ರೀಶೈಲ್ ಮೋಟಗಿ, ಮುತ್ತಣ್ಣ ಚಿನಿವಾಲರ, ಮಲ್ಲಯ್ಯ ಕೋಮಾರಿ, ಬಸವರಾಜ ಚಿನಿವಾಲರ, ಮಹಾಂತಯ್ಯ ಕೋಮಾರಿ, ಪ್ರಭು ಡೀಪೋ, ಸುಭಾಷ ನಾಗೂರ, ವೀರಣ್ಣ ಹುನಗುಂಡಿ, ಶರಣಯ್ಯ ಕೋಮಾರಿ, ವೀರಪ್ಪ ಕರಂಡಿ, ಶರಣಯ್ಯ ಕೆಂಬಾವಿಮಠ, ಮಲ್ಲಪ್ಪ ಕೋಳೂರ, ಪಿಡಿಒ ದೇವೇಂದ್ರಪ್ಪ ಕಮತರ ಇತರರಿದ್ದರು.