ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲೂಕಿನ ಬಾಗೂರು ಹೋಬಳಿಯ ಎಂ ಶಿವರದ ಜ್ಞಾನಜ್ಯೋತಿ ಎಜುಕೇಶನ್ ಟ್ರಸ್ಟ್ ಮತ್ತು ವಿದ್ಯಾ ಸ್ಪೂರ್ತಿ ಇಂಟರ್‌ನ್ಯಾಷನಲ್ ಶಾಲೆಯ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೋಷಕರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಧನುರ್ಮಾಸದ ಕೊನೆಯ ದಿನ ಮಕರ ಸಂಕ್ರಾಂತಿ ಹಬ್ಬವು ಪ್ರಾರಂಭಿಸುತ್ತದೆ. ಇದರ ವಿಶೇಷವಾಗಿ ಎಳ್ಳು ಬೆಲ್ಲ ಮತ್ತು ಕೊಬ್ಬರಿ ಇವುಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶವನ್ನು ನೀಡುತ್ತದೆ ಎಂಬ ಚಿಂತನೆಯನ್ನು ಇಟ್ಟುಕೊಂಡು ನಮ್ಮ ಹಿಂದಿನ ಹಿರಿಯರು ಈ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲೂಕಿನ ಬಾಗೂರು ಹೋಬಳಿಯ ಎಂ ಶಿವರದ ಜ್ಞಾನಜ್ಯೋತಿ ಎಜುಕೇಶನ್ ಟ್ರಸ್ಟ್ ಮತ್ತು ವಿದ್ಯಾ ಸ್ಪೂರ್ತಿ ಇಂಟರ್‌ನ್ಯಾಷನಲ್ ಶಾಲೆಯ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೋಷಕರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮುಖ್ಯ ಉಪಾಧ್ಯಾಯ ಡಿ ಎಂ ಯಶವಂತ್ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯು ಪ್ರಾರಂಭವಾದ ದಿನದಿಂದಲೂ ನಾವು ಪ್ರತಿ ವರ್ಷವೂ ಕೂಡ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಅದರಂತೆ ಈ ಬಾರಿಯೂ ಕೂಡ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಇದರ ವಿಶೇಷ ಧನುರ್ಮಾಸದ ಕೊನೆಯ ದಿನ ಮಕರ ಸಂಕ್ರಾಂತಿ ಹಬ್ಬವು ಪ್ರಾರಂಭಿಸುತ್ತದೆ. ಇದರ ವಿಶೇಷವಾಗಿ ಎಳ್ಳು ಬೆಲ್ಲ ಮತ್ತು ಕೊಬ್ಬರಿ ಇವುಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶವನ್ನು ನೀಡುತ್ತದೆ ಎಂಬ ಚಿಂತನೆಯನ್ನು ಇಟ್ಟುಕೊಂಡು ನಮ್ಮ ಹಿಂದಿನ ಹಿರಿಯರು ಈ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಿಗಾಗಿ ವಿಶೇಷವಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು ಅದರಲ್ಲಿ ಮೊದಲನೇ ಸ್ಥಾನವನ್ನು ಅನುಷ, ಎರಡನೇ ಸ್ಥಾನವನ್ನು ಶಾಂಭವಿ ಮತ್ತು ಪುನೀತ್ ಮೂರನೇ ಬಹುಮಾನವನ್ನು ನಂದಿನಿ ಪಡೆದುಕೊಂಡರು.
