ರೈತರಿಗೆ ಸುಗ್ಗಿಯ ಕಾಲ ಸಂಕ್ರಾಂತಿ: ಫಕೀರೇಶ್ವರ ಶ್ರೀಗಳು

| Published : Jan 16 2025, 12:46 AM IST

ಸಾರಾಂಶ

Sankranti is the harvest season for farmers: Fakireshwar Sri

- ಶಹಾಪುರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮಾಚರಣೆ

ಕನ್ನಡಪ್ರಭ ವಾರ್ತೆ ಶಹಾಪುರ

ಸಂಕ್ರಾಂತಿ ಕೃಷಿ ಸಮೃದ್ಧಿಯ ಸಂಕೇತವಾಗಿದೆ. ಈ ಸಮಯ ರೈತರ ಮನೆಗಳಲ್ಲಿ ದವಸ- ಧಾನ್ಯಗಳು ತುಂಬಿಕೊಳ್ಳುವ ಕಾಲ. ಈ ಸಮಯದಲ್ಲಿ ಎಲ್ಲೆಡೆ ಹೊಸ ಚಿಗುರುಕಂಡು ನಯನ ಮನೋಹರವಾಗಿರುವುದು. ಇದು ರೈತರಿಗೆ ಸುಗ್ಗಿ ಸಂಭ್ರಮದ ಕಾಲ ಎಂದು ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಶ್ರೀಗಳು ಹೇಳಿದರು.

ಮಕರ ಸಂಕ್ರಾಂತಿಯ ಸಂಭ್ರಮಾಚರಣೆ ನಿಮಿತ್ತ ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಕಡೆಗೂ ರಾಶಿಯ ಪೂಜೆಯು ಅತ್ಯಂತ ಸಡಗರದಿಂದ ನಡೆಯುತ್ತದೆ. ರೈತರ ಸುಗ್ಗಿ ಕಾಲವಾದ ಈ ದಿನ ಗ್ರಾಮೀಣ ಸೊಗಡಿನ ಹಳ್ಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿತವಾದ ಮಕರ ಸಂಕ್ರಮಣವನ್ನು ಶಾಲಾ ಮಕ್ಕಳಿಗೆ ಪರಿಚಯಿಸಿ, ಅತಿಥಿ ಮಹನೀಯರಿಗೆ ಎಳ್ಳು ಬೆಲ್ಲವ ನೀಡಿ ಒಳ್ಳೆಯ ಮನಸ್ಸಿನಿಂದ ಕೂಡಿರೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಇಂತಹ ಕಾರ್ಯಕ್ರಮವು ಮಾಡುವುದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯವಾಗುತ್ತದೆ. ಶಾರದಾ ಶಾಲೆಯಲ್ಲಿ ಸಂಕ್ರಮಣ ಹಬ್ಬ ಆಚರಿಸಿದ ಮೊದಲನೇ ಶಾಲೆಯಾಗಿದೆ ಎಂದು ವರ್ಣಿಸಿದರು.

ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಆರ್. ಚನ್ನಬಸ್ಸು ಮಾತನಾಡಿದರು. ಪತ್ರಕರ್ತ ಅಮರೇಶ್ ಹಿರೇಮಠ, ಶಿಕ್ಷಕಿಯರಾದ ಲಲಿತಾ, ಶೈಲಜಾ ಸೇರಿದಂತೆ ಇತರರಿದ್ದರು. ಹರ್ಷ ಪ್ರಾರ್ಥಿಸಿದರು. ಶಿಕ್ಷಕಿ ಲಕ್ಷ್ಮಿ ನಿರೂಪಿಸಿದರು. ಶಾಲೆಯ ಮುಖ್ಯ ಗುರು ಸಿದ್ದು ಪಾಟೀಲ್ ವಂದಿಸಿದರು.

ಮನಸೂರೆಗೊಂಡ ಕಾರ್ಯಕ್ರಮ: ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಲಕ್ಷ್ಮಿ ಸತ್ಯಂರೆಡ್ಡಿ ಅವರು ಮೊದಲಿಗೆ ಸಂಕ್ರಮಣದ ಸಿರಿಧಾನ್ಯಗಳಿಗೆ ಪೂಜೆ, ನೈವೇದ್ಯ ಸಮರ್ಪಿಸಿ, ಕಾರ್ಯಕ್ರಮದಲ್ಲಿ ಐದು ವರ್ಷದ ಮಕ್ಕಳಿಗೆ ಶ್ರೀಗಳಿಂದ ತಲೆಯ ಮೇಲೆ ಸಂಕ್ರಾಂತಿ ಫಲ ಎರೆಯುವ ಭೋಗಿಯ ಕಾರ್ಯಕ್ರಮ ಜರುಗಿತು. ಒಂಬತ್ತು ಧಾನ್ಯಗಳಿಂದ ಕೂಡಿದ ನವಧಾನ್ಯ ನೋಡುಗರ ಮನಸ್ಸು ಉಲ್ಲಾಸಗೊಳಿಸಿತು. ರೈತ ಚಕ್ಕಡಿಯಲ್ಲಿ ಮಕ್ಕಳು ಕುಳಿದು ಸಂಭ್ರಮಿಸಿದರು.

ಮಕ್ಕಳಿಂದ ಮಾಡಿದ ಬಾವಿ, ಗುಡಿಸಲು ಮತ್ತು ಹಳ್ಳಿಯಲ್ಲಿ ಉಪಯೋಗಿಸುವ ರೈತ ಮಹಿಳೆಯರ ಮನೆ ಕೆಲಸದ ಸಲಕರಣೆ ಬೀಸುವ ಕಲ್ಲು, ಕುಟ್ಟುವ ಕಲ್ಲು, ವನಕೆ, ಮಡಿಕೆಗಳು ಹಿಡಿದು ಮಕ್ಕಳು ಸಂಭ್ರಮಿಸಿದರು. ಮಕ್ಕಳು ಜಾನಪದ ಹಾಡಿಗೆ ನೃತ್ಯ ಮಾಡಿ ನೆರೆದ ಜನರಿಂದ ಮೆಚ್ಚುಗೆ ಗಳಿಸಿದರು.

----

13ವೈಡಿಆರ್2

ಶಹಾಪುರ ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಮಕರ ಸಂಕ್ರಾಂತಿಯ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಶ್ರೀಗಳು ಉದ್ಘಾಟಿಸಿ ಮಾತನಾಡಿದರು.

---

13ವೈಡಿಆರ್3

ಶಹಾಪುರ ನಗರದ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಮಕರ ಸಂಕ್ರಾಂತಿಯ ಸಂಭ್ರಮಾಚರಣೆ ಕಾರ್ಯಕ್ರಮ ಜರುಗಿತು.