ಮಕರ ಸಂಕ್ರಾಂತಿ ಹಬ್ಬದಂದು ವಿಶೇಷವಾಗಿ ಎಳ್ಳು, ಬೆಲ್ಲ, ಕೊಬ್ಬರಿ ಎಲ್ಲವನ್ನು ಬೆರಸಿ ಸಿಹಿ ಹಂಚಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವ ಹೊಸ ವರ್ಷದ ಮೊದಲನೇ ಹಬ್ಬ ಇದಾಗಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಹಿರಿಯ ಯೋಗ ಗುರು ಡಾ.ರಾಘವೇಂದ್ರ ಗುರೂಜಿ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಕರ ಸಂಕ್ರಾಂತಿ ಹಬ್ಬದಂದು ವಿಶೇಷವಾಗಿ ಎಳ್ಳು, ಬೆಲ್ಲ, ಕೊಬ್ಬರಿ ಎಲ್ಲವನ್ನು ಬೆರಸಿ ಸಿಹಿ ಹಂಚಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವ ಹೊಸ ವರ್ಷದ ಮೊದಲನೇ ಹಬ್ಬ ಇದಾಗಿದೆ ಎಂದು ಆದರ್ಶ ಯೋಗ ಪ್ರತಿಷ್ಠಾನದ ಹಿರಿಯ ಯೋಗ ಗುರು ಡಾ.ರಾಘವೇಂದ್ರ ಗುರೂಜಿ ಹೇಳಿದರು.ನಗರದ ದೇವರಾಜ ಅರಸ್ ಬಡಾವಣೆ ಸಿ ಬ್ಲಾಕ್‌ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನದಿಂದ ಬುಧವಾರ ಬೆಳಿಗ್ಗೆ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಸಂಕ್ರಾಂತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಂಕ್ರಾಂತಿ ಸುಗ್ಗಿಯ ಹಾಡುಗಳು ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿ ದೇವಿಯು ಸಂಕರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ದಿನವಾದ್ದರಿಂದ ಸಂಕ್ರಾಂತಿ ಎಂಬ ಹೆಸರು ಪ್ರತೀತಿಯಲ್ಲಿದೆ. ಸಂಕ್ರಾಂತಿಯು ಹೊಸ ಪರ್ವವನ್ನು ಸೂಚಿಸುವ ದಿನವಾಗಿದ್ದು, ಸೂರ್ಯನು ತನ್ನ ದಿಕ್ಕನ್ನು ಬದಲಾಯಿಸುವ ದಿನವೇ ಮಕರ ಸಂಕ್ರಾಂತಿ, ಈ ದಿನವು ಸೂರ್ಯನ ಶಕ್ತಿಯು ಸಾವಿರ ಪಟ್ಟು ಹೆಚ್ಚಾಗಿದ್ದು, ಶ್ರದ್ಧಾಭಕ್ತಿಯಿಂದ ಯಾರು ಪ್ರಾರ್ಥನೆ ಸಲ್ಲಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುವುದು. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ಪೂಜಿಸಿ ಗೋಮಾತೆಯನ್ನು ಧನ್ಯತಾ ಭಾವನೆಯಿಂದ ಪೂಜಿಸಿ ಧನ್ಯರಾಗುವ ದಿನವಿಂದು ಎಂದರು.ಗಾಯಕ ಬಿ.ಎನ್.ನಾಗೇಶ್ ಸಂಕ್ರಾಂತಿ ಸುಗ್ಗಿ ಹಾಡುಗಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗುರೂಜಿ ಎಲ್ಲರಿಗೂ ಎಳ್ಳು ಬೆಲ್ಲ ಹಂಚಿದರು.
ಯೋಗ ಶಿಕ್ಷಕ ಲಲಿತಕುಮಾರ ಜೈನ್, ಗೌರಮ್ಮ, ರೇಖಾ ಕಲ್ಲೇಶ್, ನಿವೃತ್ತ ತಹಸೀಲ್ದಾರ್ ಕೆ.ಎಂ.ವಿಶ್ವನಾಥಯ್ಯ, ಪತ್ರಕರ್ತ ಎಚ್.ಎನ್.ಪ್ರಕಾಶ, ಸುನೀಲ್, ಅಜಯ್ ಸೋಲಂಕಿ, ಪೂಜಾ ಸೋಲಂಕಿ, ಅಕ್ಷತಾ ಸೋಲಂಕಿ, ಸಮಾಜ ಕಲ್ಯಾಣ ಇಲಾಖೆಯ ಎಚ್.ಸಂತೋಷ, ಎಚ್.ರುಶೀರಾ, ಭರತ್ ವದೋನಿ, ಯೋಗ ಶಿಕ್ಷಕ ಮಹಂತೇಶ್, ಜ್ಯೋತಿಲಕ್ಷ್ಮಿ ವಾಸುದೇವ್, ಸಂಧ್ಯಾ ಇತರರು ಇದ್ದರು.