ಜೈನ ಧರ್ಮದಲ್ಲಿ ಮನೆಯಿಂದಲೇ ಸಂಸ್ಕಾರದ ಶಿಕ್ಷಣ: ವೀರಶ್ರೀ ಸಮಾಜೆ

| Published : Feb 12 2024, 01:30 AM IST

ಸಾರಾಂಶ

ರಬಕವಿ-ಬನಹಟ್ಟಿ: ತಾಲೂಕಿನ ಹನಗಂಡಿ ಗ್ರಾಮದ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಜೈನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕಿ, ರಾಜ್ಯ ಸಂಪನ್ಮೂಲ ವ್ಯಕ್ತಿ ವೀರಶ್ರೀ ಸಮಾಜೆ ಮಾತನಾಡಿ, ಪ್ರಾಚೀನ ಧರ್ಮವಾಗಿರುವ ಜೈನ ಧರ್ಮದ ಆಚರಣೆಗಳು ದೇಹ ಮತ್ತು ಮನಸ್ಸುಗಳನ್ನು ಕ್ರಿಯಾಶೀಲಗೊಳಿತ್ತವೆ. ಸನಾತನ ಸಂಸ್ಕೃತಿ, ಸಂಸ್ಕಾರ ಮತ್ತು ಹೊಂದಾಣಿಕೆ ಶೈಶವಾವಸ್ಥೆಯಲ್ಲೇ ರೂಢಿಯಾಗುವುದರಿಂದ ಜೈನ ಧರ್ಮದಲ್ಲಿ ಮಾತೃರೂಪಿ ಶಿಕ್ಷಣವು ಮನೆಯಿಂದಲೇ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರಾಚೀನ ಧರ್ಮವಾಗಿರುವ ಜೈನ ಧರ್ಮದ ಆಚರಣೆಗಳು ದೇಹ ಮತ್ತು ಮನಸ್ಸುಗಳನ್ನು ಕ್ರಿಯಾಶೀಲಗೊಳಿತ್ತವೆ. ಸನಾತನ ಸಂಸ್ಕೃತಿ, ಸಂಸ್ಕಾರ ಮತ್ತು ಹೊಂದಾಣಿಕೆ ಶೈಶವಾವಸ್ಥೆಯಲ್ಲೇ ರೂಢಿಯಾಗುವುದರಿಂದ ಜೈನ ಧರ್ಮದಲ್ಲಿ ಮಾತೃರೂಪಿ ಶಿಕ್ಷಣವು ಮನೆಯಿಂದಲೇ ಸಿಗುತ್ತದೆ ಎಂದು ಶಿಕ್ಷಕಿ, ರಾಜ್ಯ ಸಂಪನ್ಮೂಲ ವ್ಯಕ್ತಿ ವೀರಶ್ರೀ ಸಮಾಜೆ ಅಭಿಪ್ರಾಯಪಟ್ಟರು.

ತಾಲೂಕಿನ ಹನಗಂಡಿ ಗ್ರಾಮದ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಜೈನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಸಮುದಾಯದ ಮಕ್ಕಳು ಇಂದು ವಿಶ್ವಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದಾಖಲೆ ಬರೆಯುತ್ತಿದ್ದಾರೆ. ಜಾಗತಿಕ ಮಟ್ಟದ ಶಿಕ್ಷಣ ನೀಡುವಲ್ಲಿ ಜೈನ ವಿದ್ಯಾಲಯಗಳು ದೇಶದಲ್ಲಿ ಮಂಚೂಣಿಯಲ್ಲಿವೆ. ಸಮುದಾಯದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಮುಖ್ಯ ವಾಹಿನಿಯಲ್ಲಿರಬೇಕು. ಇಂದಿನ ಮಕ್ಕಳು ಕೇವಲ ಮೊಬೈಲ್ ಮೊದಲಾದ ಸಾಧನಗಳಲ್ಲೇ ಮುಳಗಬಾರದು. ಬದಲಾಗಿ ವಿದ್ಯಾರ್ಜನೆಯೊಂದಿಗೆ ಸಂಸ್ಕಾರ ಕಲಿಯಬೇಕು ಎಂದರು.

ಜೈನ ಸಮಾಜದ ಹಿರಿಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಡಿ.ಆರ್. ಕವಟಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಜೈನ ಸಮಾಜದ ನೌಕರರ ಅಭಿವೃದ್ಧಿಪರ ಕಾರ್ಯಗಳ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಕಾರ್ಯ ಮಾಡುತ್ತಾ ಬಂದಿದೆ. ಅದಕ್ಕೆ ಸಮಾಜದ ಹಿರಿಯರು, ಮುಖಂಡರು ಸಾಕಷ್ಟು ಸಹಾಯ ಸಹಕಾರದೊಂದಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು,

ವೇದಿಕೆಯಲ್ಲಿ ಗಣ್ಯಉದ್ಯಮಿ ಸತೀಶ ಹಜಾರೆ, ಸುಭಾಸ ಮುರಗುಂಡಿ, ನಿಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಸುರೇಶ ಅಕ್ಕಿವಾಟ, ಶ್ರೀಕಾಂತ ಘೂಳ್ಳನ್ನವರ, ಪ್ರಕಾಶ ದೇಸಾಯಿ, ಕಿರಣಕುಮಾರ ದೇಸಾಯಿ, ಪರಪ್ಪ ಹಿಪ್ಪರಗಿ, ಶುಭಂ ದೇಸಾಯಿ, ಸಚೀನ ಮುರಗುಂಡಿ, ಬೆಳಗಾವಿಯ ಜಿತೋ ಸಂಸ್ಥೆಯ ಕುಂತುನಾಥ ಕಲ್ಮಣಿ, ಭೂಷಣ ಮೋಹಿರೆ ಸೇರಿದಂತೆ ಜೈನ ಸಮಾಜದ ಹಿರಿಯರು ಇದ್ದರು. ಸಾಧಕ ವಿದ್ಯಾರ್ಥಿಗಳು ಹಾಗೂ ಸಮಾಜದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.