ಸಾರಾಂಶ
ಕಾರವಾರ: ಪುನರ್ಜನ್ಮ ಮತ್ತು ಕರ್ಮದ ಫಲದ ಮೇಲೆ ನಂಬಿಕೆ ಇದ್ದರೆ ಸಂಸ್ಕಾರಯುತ ಜೀವನ ಸಹಜವಾಗಿ ಬರುತ್ತದೆ. ಸನಾತನ ಸಂಸ್ಕೃತಿಯಲ್ಲಿ ಇದು ರಕ್ತಗತವಾಗಿ ಬೆಳೆದು ಬಂದಿದೆ. ಮುಂದಿನ ಜನಾಂಗಕ್ಕೂ ಸಂಸ್ಕಾರದ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಸಂಸ್ಕಾರೋತ್ಸವ ಮಾದರಿ ಕಾರ್ಯ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಬೆಂಗಳೂರಿನ ಮಲ್ಲೇಶ್ವರಂನ ಹವ್ಯಕ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಕಾರೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸ್ಮರಣ ಸಂಚಿಕೆ ‘ಸಹಸ್ರಚಂದ್ರ’ ಬಿಡುಗಡೆ ಮಾಡಿ ಅವರು ಮಾತನಾಡಿದರು.
ರಾಷ್ಟ್ರದ ಉದ್ದಗಲಕ್ಕೆ ಸನಾತನ ಧರ್ಮ ಸಂಸ್ಕೃತಿಯನ್ನು ಘಾಸಿಗೊಳಿಸುವ ಶಕ್ತಿಗಳು ಹೆಚ್ಚುತ್ತಿವೆ. ಇದು ಹಿಂದಿನಿಂದಲೂ ಇದೆ. ಭಾರತಕ್ಕೆ ಇದು ಹೊಸತಲ್ಲವಾದರೂ ಇದನ್ನು ತಡೆಯದಿದ್ದರೆ ಮುಂದಿನ ಪೀಳಿಗೆಯ ಮೇಲೆ ಇದು ಪರಿಣಾಮ ಬಿರುತ್ತದೆ ಎಂದು ಎಚ್ಚರಿಸಿದರು.ಶತಾವಧಾನಿ ಡಾ.ಆರ್. ಗಣೇಶ್, ಸಂಸ್ಕಾರಗಳ ಮಹತ್ವ ಹಾಗೂ ಪ್ರಸ್ತುತತೆ ಕುರಿತಾಗಿ ಮಾತನಾಡಿ, ಸನಾತನ ಧರ್ಮದ ಕುರಿತಾದ ಶ್ರದ್ಧೆ ಹಾಗೂ ರಾಷ್ಟ್ರಭಕ್ತಿಯ ವಿಚಾರದಲ್ಲಿ ಹವ್ಯಕ ಸಮುದಾಯ ಬೇರೆಲ್ಲರಿಗಿಂತ ದೊಡ್ದಮಟ್ಟದಲ್ಲಿ ತೊಡಗಿಸಿಕೊಂಡಿದೆ. ಇದು ಅತಿಶಯೋಕ್ತಿಯಾಗಿರದೇ ವಾಸ್ತವವಾಗಿದೆ ಎಂದರು.
ಚಿಂತಕ ಚಕ್ರವರ್ತಿ ಸೂಲಿಬೆಲೆ ''''''''ಜಪ ತಪಗಳೊಂದಿಗೆ ಆಧುನಿಕ ಜೀವನ'''''''' ಕುರಿತಾಗಿ ಮಾತನಾಡಿ, ಇಂದು ನಮ್ಮ ಶ್ರದ್ಧಾಸ್ಥಾನಗಳ ಮೇಲೆ ಆಕ್ರಮಣಗಳು ನಡೆಯುತ್ತಿದ್ದು, ನಮ್ಮ ನಂಬಿಕನ್ನು ಅಳಿಸಿವ ಕೆಲಸಗಳು ನಡೆಯುತ್ತಿವೆ. ನಮ್ಮ ತಲೆಮಾರು, ನಮ್ಮ ತಂದೆಯ ತಲೆಮಾರಿನ ನಂಬಿಕೆಯನ್ನು ಅಳಿಸುವುದು ಸುಲಭವಲ್ಲ. ಆದರೆ ಮಕ್ಕಳ ಮನಸ್ಸಿನಲ್ಲಿ ನಮ್ಮ ಧರ್ಮದ ಶ್ರದ್ಧೆಯನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ಸಮಾಜ ಜಾಗೃತವಾಗಬೇಕು ಎಂದರು.ನಿರ್ಭಯಾನಾಂದ ಸ್ವಾಮೀಜಿ ಸಂಸ್ಕಾರಯುತ ಯುವ ನಡೆ ನುಡಿ ಕುರಿತಾಗಿ ಉಪನ್ಯಾಸ ನೀಡಿದರೆ, ಭಾಷಾ ಸಂಸ್ಕಾರದ ಬಗ್ಗೆ ದೇವೇಂದ್ರ ಬೆಳೆಯೂರು, ಉಪನಯನದ ಮಹತಿಯ ಬಗ್ಗೆ ವಿದ್ವಾನ್ ರಾಮಕೃಷ್ಣ ಭಟ್ಟ ಕೂಟೇಲು, ಶಂಕರ ತತ್ವಾಧಾರಿತ ಸಂಸ್ಕಾರದ ಬಗ್ಗೆ ವಿದ್ವಾನ್ ಜಗದೀಶ ಶರ್ಮಾ ಸಂಪ, ಮಾನವೀಯ ಸಂಬಂಧಗಳಲ್ಲಿ ಸಂಸ್ಕಾರದ ಕುರಿತಾಗಿ ಡಾ. ಭರತ್ ಚಂದ್ರ, ಸಂಧ್ಯಾವಂದನೆಯಿಂದ ಬದುಕಿನಲ್ಲಿ ಪವಾಡಗಳ ಕುರಿತಾಗಿ ವಿದ್ವಾನ್ ಕೆ.ಎಲ್ ಶ್ರೀನಿವಾಸನ್, ವಿವಾಹದ ಕುರಿತಾಗಿ ಮೋಹನ ಹೆಗಡೆ, ಸ್ತ್ರೀ ಸಂಸ್ಕ್ರಾರದ ಬಗ್ಗೆ ರೂಪಾ ಗುರುರಾಜ್ ಹಾಗೂ ಸಂಸ್ಕಾರಗಳ ವೈಜ್ನಾನಿಕ ತಳಹದಿ ಕುರಿತಾಗಿ ಪ್ರೊ. ಶಲ್ವಪಿಳ್ಳೈ ಅಯ್ಯಂಗಾರ್ ಕುರಿತಾಗಿ ಉಪನ್ಯಾಸ ನೀಡಿದರು. ಕೂರ್ಗಿ ಶಂಕರನಾರಾಯಣ ಉಪಾಧ್ಯಾಯರು ಬ್ರಹ್ಮತೇಜೋ ಬಲಂ ಬಲಂ ಎಂಬ ವಾಚಿಕಾಭಿನಯ ಜನಮನ ಸೆಳೆಯಿತು.
ಮಹಾಸಭೆ ಅಧ್ಯಕ್ಷ ಡಾ.ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಉಪಾಧ್ಯಕ್ಷರಾದ ಶ್ರೀಧರ್ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್, ಆದಿತ್ಯ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ , ಕಾರ್ಯಕ್ರಮದ ಸಂಚಾಲಕ ಡಾ. ನರಸಿಂಹ ಕುಮಾರ್ ಇದ್ದರು.