ಉಡುಪಿ: ದುರಾಸೆಯಿಂದ ದುಃಖವೇ ಹೆಚ್ಚು, ಭಗವಂತನ ಸರ್ವವ್ಯಾಪಕತೆಯನ್ನು ಅರಿತು ಬದುಕಿದಾಗ ಮನಸ್ಸು ನಿರ್ಮಲವಾಗುತ್ತದೆ ಎಂದು ಎನ್‌ಐಟಿಕೆ ಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ. ನಿಖಿತ ಹೇಳಿದರು.
ಉಡುಪಿ: ದುರಾಸೆಯಿಂದ ದುಃಖವೇ ಹೆಚ್ಚು, ಭಗವಂತನ ಸರ್ವವ್ಯಾಪಕತೆಯನ್ನು ಅರಿತು ಬದುಕಿದಾಗ ಮನಸ್ಸು ನಿರ್ಮಲವಾಗುತ್ತದೆ ಎಂದು ಎನ್‌ಐಟಿಕೆ ಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ. ನಿಖಿತ ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಂತ ರವಿದಾಸ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಸಂತ ರವಿದಾಸರ ಕುರಿತು ಭಾರತೀಯ ಸಂತ ಪರಂಪರೆ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂತ ರವಿದಾಸರ ಚಿಂತನೆಗಳು ಕೇವಲ ಆಧ್ಯಾತ್ಮಿಕ ಸಂದೇಶಗಳಿಗೆ ಸೀಮಿತವಾಗಿರದೆ, ಮಾನವೀಯತೆ, ಸಮಾನತೆ, ಪ್ರಾಮಾಣಿಕತೆ ಮತ್ತು ಸತ್ಕರ್ಮದ ಮಹತ್ವವನ್ನು ಸಾರುತ್ತವೆ ಎಂದರು. ಕಾರ್ಯಕ್ರಮದಲ್ಲಿ ಮಣಿಪಾಲ ಎಂಐಟಿಯ ನಿವೃತ್ತ ಪ್ರಾಧ್ಯಾಪಕ ಡಾ. ನಾರಾಯಣ ಶೆಣೈ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಆನಂದ ರಾಯಮನೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್.ಎಂ.ಎಸ್.ಎಸ್. ಮಂಗಳೂರು ವಿಭಾಗದ ಉಪಾಧ್ಯಕ್ಷೆ ಡಾ. ನಾಗರತ್ನ ವಹಿಸಿದ್ದರು. ವಿದ್ಯಾರ್ಥಿನಿ ಸನ್ನಿಧಿ ಸ್ವಾಗತಿಸಿದರು. ದೀಕ್ಷಾ ಭಟ್ ವಂದಿಸಿದರು. ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಹಿಂದಿ ಪ್ರಾಧ್ಯಾಪಕಿ ಡಾ. ಭೈರವಿ ಪಂಡ್ಯಾ ಕಾರ್ಯಕ್ರಮ ನಿರೂಪಿಸಿದರು.