ಸಂತೆ ಮಕ್ಕಳಿಗೆ ಬದುಕಿನ ಜ್ಞಾನ ಹೆಚ್ಚಿಸುತ್ತದೆ: ಎಂ.ನರೇಂದ್ರ

| Published : Jan 03 2025, 12:33 AM IST

ಸಾರಾಂಶ

ತರೀಕೆರೆ, ಸಂತೆಯಲ್ಲಿ ಭಾಗವಹಿಸಿದ ಮಕ್ಕಳು ಬದುಕಿನಲ್ಲೂ ಬಚಾವ್ ಆಗುತ್ತಾರೆ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ಹೇಳಿದ್ದಾರೆ.

ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಮಕ್ಕಳ ಸಂತೆ -ಆಹಾರ ಮೇಳ-ಪುಸ್ತಕ ಮಾರಾಟ ಮಳಿಗೆ ಉದ್ಗಾಟನಾ ಕಾರ್ಯಕ್ರಮ

ಕನ್ನಡಪ್ರಭ ವಾತೆ, ತರೀಕೆರೆ

ಸಂತೆಯಲ್ಲಿ ಭಾಗವಹಿಸಿದ ಮಕ್ಕಳು ಬದುಕಿನಲ್ಲೂ ಬಚಾವ್ ಆಗುತ್ತಾರೆ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ಹೇಳಿದ್ದಾರೆ.

ಗುರುವಾರ ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಯಿಂದ ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆ -ಆಹಾರ ಮೇಳ-ಪುಸ್ತಕ ಮಾರಾಟ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂತೆ ಮಾರುಕಟ್ಟೆ ಹಾಗೂ ವ್ಯಾಪಾರ ಸ್ಥಳಗಳಲ್ಲಿ ಮಕ್ಕಳು ಭಾಗವಹಿಸಿ ಬಜಾರಿನ ಅನುಭವ ಪಡೆದುಕೊಂಡರೆ ಬದುಕಿನಲ್ಲಿ ಬಚಾವ್ ಆಗಲು ಸಾಧ್ಯತೆ ಹೆಚ್ಚು ಇರುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಬದುಕಿನ ಜ್ಞಾನ ಹೆಚ್ಚಿಸುತ್ತದೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ವ್ಯವಹಾರದ ಜ್ಞಾನ ತಿಳಿಯಬೇಕು.

ಉತ್ತಮ ಆಹಾರ, ಒಳ್ಳೆಯ ಗಾಳಿ ಮತ್ತು ನೀರನ್ನು ಸೇವಿಸುವ, ಸ್ವಚ್ಛತೆ ಕಾಪಾಡುವ, ಕೈ ತೊಳೆಯುವ ಮಾಹಿತಿಯನ್ನು ಮಕ್ಕಳಿಗೆ ಕೊಡಬೇಕು, ಬಾಂಧವ್ಯದ ಸಂತೋಷವನ್ನು ಸಂತೆ ಹಂಚುತ್ತದೆ. ಸಂತೆಯಿಂದ ಲೆಕ್ಕದ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದರು.

ಹಿರಿಯ ಸಮಾಜ ಸೇವಕ ಟಿ.ಜಿ.ಮಂಜುನಾಥ್ ಮಾತನಾಡಿ ಮಕ್ಕಳ ಸಂತೆ ಆಹಾರ ಮೇಳ ಪುಸ್ತಕ ಮಾರಾಟ ಮಳಿಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಉಪಯುಕ್ತ. ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ಸೇವಾ ಮನೋಭಾವ ಕಲಿಸಬೇಕು ಆಗ್ನಿ ಅನಾಹುತ ನಿಯಂತ್ರಣದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದ್ದು ಪ್ರಶಂಸನೀಯ. ಮಕ್ಕಳಿಗೆ ವ್ಯವಹಾರ ಜ್ಞಾನ ಹೆಚ್ಚುತ್ತದೆ. ಕೋರೋನಾ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಜನರ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಶ್ರಮ ವಹಿಸಿದರು ಎಂದು ಹೇಳಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ಆರೋಗ್ಯ ಬಹಳ ಮುಖ್ಯ. ಮಕ್ಕಳ ಸಂತೆಯಲ್ಲಿ ಆರೋಗ್ಯಕ್ಕೆ ಪೂರಕ ಪದಾರ್ಥಗಳನ್ನು ಮಾರಾಟಕ್ಕೆ ಇಡಲಾಗಿದೆ. ಸಾಂಕ್ರಾಮಿಕ ರೋಗ ತಡೆಗಟ್ಟಬೇಕು. ದೈಹಿಕ ಚಟುವಟಿಕೆಯಿಂದ ಒತ್ತಡ ತಡೆಗಟ್ಟಬಹುದು ಎಂದು ಹೇಳಿದರು.

ಪುರಸಭೆ ಮುಖ್ಯಾದಿಕಾರಿ ಎಚ್.ಪ್ರಶಾಂತ್ ಮಾತನಾಡಿ ತರಗತಿ ಆಚೆಗೂ ಮಕ್ಕಳು ಕಲಿಯುವುದು ಇರುತ್ತದೆ. ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಬೇಕು. ಇಂತಹ ಕಾರ್ಯಕ್ರಮದಿಂದ ಮಕ್ಕಳಿಗೆ ವಿವಿಧ ಪದಾರ್ಥಗಳ ಪರಿಚಯ ಉಂಟಾಗುತ್ತದೆ ಎಂದು ಹೇಳಿದರು.

ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪಠ್ಯಪುಸ್ತಕದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಸಾಮಾನ್ಯಜ್ಞಾನ, ಭೌತಿಕ ವಿಕಾಸಕ್ಕೆ ಶಾಲೆಗಳಲ್ಲಿ ಮಕ್ಕಳ ಸಂತೆ ಸಹಕಾರಿ ಯಾಗಿರುತ್ತದೆ. ವಿದ್ಯಾರ್ಥಿಗಳು ಗಣಿತ ಕಲಿಕೆಯಲ್ಲಿ ಹಚ್ಚಿನ ಜ್ಞಾನ ಪಡೆಯಲು ವ್ಯವಹಾರಿಕ ಜ್ಞಾನ ಬಹಳ ಮುಖ್ಯ ವಾಗಿರುತ್ತದೆ. ಭಾವನಾತ್ಮಕ ಕಲಿಕೆಗೆ ಇಂತಹ ಕಾರ್ಯಕ್ರಮ ಪೂರಕ. ಇದರಿಂದ ಲಾಭ ನಷ್ಟದ ಅರಿವ ಮೂಡಿ ತಮ್ಮ ಜೀವನದ ಹಾದಿ ಭದ್ರಪಡಿಸಿಕೊಳ್ಳಲು ವ್ಯವಹಾರ ಜ್ಞಾನ ಅಗತ್ಯ ಎಂದು ತಿಳಿಸಿದರು.

ಅಗ್ನಿ ಶಾಮಕ ದಳದ ಅಧಿಕಾರಿ ತಿಪ್ಪೇಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎಸಿಎಫ್ ಉಮ್ಮರ್ ಭಾಷಾ, ಮಮತ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳ ವಿಜಯಕುಮಾರ್, ಜಿಪಂ ಮಾಜಿ ಸದಸ್ಯೆ ರಾಧಮ್ಮ ಮಾತನಾಡಿದರು.ಸಂಸ್ಥೆ ಅಡಳಿತಾಧಿಕಾರಿ ಟಿ.ಎಸ್.ಅನೂಪ್, ಆರ್.ಎಫ್.ಒ.ಆಶಿಫ್ ಮಹಮದ್, ಲೀಲಾ ಸೋಮಶೇಖರಯ್ಯ, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.2ಕೆಟಿಆರ್.ಕೆ5ಃ

ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ನಡೆದ ಮಕ್ಕಳ ಸಂತೆ -ಆಹಾರ ಮೇಳ-ಪುಸ್ತಕ ಮಾರಾಟ ಮಳಿಗೆ ಉದ್ಘಾಟನೆಯನ್ನು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ನರೇಂದ್ರ ನೆರವೇರಿಸಿದರು. ಹಿರಿಯ ಸಮಾಜ ಸೇವಕ ಟಿ.ಜಿ.ಮಂಜುನಾಥ್, ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ. ಚಂದ್ರಶೇಖರ್ ಮತ್ತಿತರರು ಇದ್ದರು.