ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ೭೩ನೇ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಅವರು, ಕೊಡಗಿನ ಪ್ರಥಮ ಸಹಕಾರ ಸಂಘ ಸ್ಥಾಪಿಸಿದ ಹಿರಿಯ ಸಹಕಾರಿ ಕುರಾದಗೌಡ್ನಮನೆ ದೊಡ್ಡಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಸೋಮವಾರಪೇಟೆ: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ೭೩ನೇ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಅವರು, ಕೊಡಗಿನ ಪ್ರಥಮ ಸಹಕಾರ ಸಂಘ ಸ್ಥಾಪಿಸಿದ ಹಿರಿಯ ಸಹಕಾರಿ ಕುರಾದಗೌಡ್ನಮನೆ ದೊಡ್ಡಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ ಹಾಗೂ ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಕಾರ ಸಂಘಗಳ ಬಲವರ್ಧನೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಹಿರಿಯರ ಮಾರ್ಗದರ್ಶನದೊಂದಿಗೆ ಸಹಕಾರ ಕ್ಷೇತ್ರದಲ್ಲಿ ಯುವ ಸಮುದಾಯ ಹೆಚ್ಚು ತೊಡಗಿಸಿಕೊಳ್ಳಬೇಕು. ಪೂರ್ವಿಕರು ಸ್ಥಾಪಿಸಿದ ಸಹಕಾರ ಸಂಘ ಉಳಿಸಿ ಬೆಳೆಸಬೇಕು. ಸಹಕಾರ ಇಲಾಖೆ ಹಾಗೂ ಶಾಸಕರ ನಿಧಿಯಡಿ ಶಾಂತಳ್ಳಿ ಸಹಕಾರ ಸಂಘದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಬಿನ್ ದೇವಯ್ಯ, ಇಂದು ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ಸಹಕಾರ ಸಂಘಗಳು ಬೆಳವಣಿಗೆಯಾಗಿವೆ. ಕೃಷಿಯೊಂದಿಗೆ ಕೃಷಿಯೇತರ ಸಾಲವನ್ನೂ ಸಹಕಾರ ಸಂಘಗಳ ಮೂಲಕ ನೀಡಲಾಗುತ್ತಿದೆ. ವಿವಿಧ ಸಾಲಗಳ ಮೂಲಕ ಸಹಕಾರಿಗಳ ಆರ್ಥಿಕ ಬೆಳವಣಿಗೆಗೆ ಕಾರಣೀಭೂತವಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಂತಳ್ಳಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ಶಿವಕುಮಾರ್ ಮಾತನಾಡಿ, ಸಂಘದಿಂದ ಸದಸ್ಯರ ಶ್ರೇಯೋಭಿವೃದ್ದಿಗೆ ಹಲವಾರು ಯೊಜನೆಗಳು, ಸಾಲಗಳನ್ನು ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯ ಒದಗಿಸಲಾಗುತ್ತಿದೆ. ಇವುಗಳನ್ನು ಬಳಸಿಕೊಂಡು ರೈತರು ಅಭಿವೃದ್ಧಿ ಕಾಣಬೇಕು ಎಂದರು.ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ-ಬ್ರಾಂಡ್ ನಿರ್ಮಾಣ ಎಂಬ ಘೋಷಣೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ದಿನದ ಮಹತ್ವದ ಬಗ್ಗೆ ಸಹಕಾರ ಯೂನಿಯನ್ ನಿರ್ದೇಶಕಿ ಎಂ.ಎಂ. ಶ್ಯಾಮಲ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಎನ್.ಎ. ಜೋಯಪ್ಪ, ಬಿ.ಎಸ್. ಪೂವಯ್ಯ, ಕೆ.ಕೆ. ಗೋಪಾಲ, ಕೆ.ಕೆ. ಮುತ್ತಣ್ಣ, ಕೆ.ಟಿ. ರಾಜಶೇಖರ್, ಕುಂದಳ್ಳಿ ದಿನೇಶ್, ಬಿ.ಎ. ಧರ್ಮಪ್ಪ, ಬಿ.ಈ. ಜಯೇಂದ್ರ, ಬಿ.ಪಿ. ಜೋಯಪ್ಪ, ಕುರಾದಗೌಡ್ನಮನೆ ಕುಟುಂಬಸ್ಥರಾದ ಕೊಮಾರಪ್ಪ ಕೆ.ಪಿ. ಅವರನ್ನು ಸನ್ಮಾನಿಸಲಾಯಿತು.ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಯೂನಿಯನ್ ನಿರ್ದೇಶಕರಾದ ವಿ.ಸಿ. ಅಮೃತ್, ಕೆ.ಟಿ. ಪರಮೇಶ್, ಎಸ್.ಆರ್. ಸುನಿಲ್ ರಾವ್, ಎಂ.ಟಿ. ಸುಬ್ಬಯ್ಯ, ಶಾಂತಳ್ಳಿ ವಿಎಸ್ಎಸ್ಎನ್ ಉಪಾಧ್ಯಕ್ಷೆ ಬಿ.ಎಲ್. ಅನಿತ, ನಿರ್ದೇಶಕರಾದ ಬಿ.ಎ. ಧರ್ಮಪ್ಪ, ಬಿ.ಈ. ಜಯೇಂದ್ರ, ಜಿ.ಹೆಚ್. ರಾಜೇಶ್, ಯು.ಎಂ. ಬಸವರಾಜು, ಪಿ.ಎಸ್. ಅರುಣ್, ಕೆ.ಪಿ. ಕುಮಾರ್, ಡಿ.ಎಸ್. ಲಿಂಗರಾಜು, ಎಚ್.ಕೆ. ತ್ರಿಶೂಲ್, ಬಿ.ಟಿ. ಪರಮೇಶ್, ಎಸ್.ಎಂ. ನಿಶಾಂತ್, ಕೆ.ಕೆ. ಚಂದ್ರಾವತಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸಂದ್ಯಾ ಇದ್ದರು.ಬೆಟ್ಟದಳ್ಳಿ ಶ್ರೀಕುಮಾರಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.