ಸಂತೆಮೊಗೇನಹಳ್ಳಿ ಬೀಡುಬಿಟ್ಟ ಎರಡು ಕಾಡಾನೆಗಳು

| Published : Feb 05 2025, 12:34 AM IST

ಸಂತೆಮೊಗೇನಹಳ್ಳಿ ಬೀಡುಬಿಟ್ಟ ಎರಡು ಕಾಡಾನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಶನಿವಾರ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಇದೇ ಆನೆಗಳು ದಾಳಿ ಮಾಡಿದ್ದವು. ಆನಂತರ ಅವು ಅದೇ ಕಾಡಿನಲ್ಲಿ ಸಾಗಿ ಮದ್ದೂರು ಸಮೀಪ ಕಾಣಿಸಿಕೊಂಡಿದ್ದವು. ಮದ್ದೂರಿನಲ್ಲಿ ಕಾಣಿಸಿಕೊಂಡ ಆನೆಗಳನ್ನು ಸೋಮವಾರ ರಾತ್ರಿ ಅಲ್ಲಿನ ಅರಣ್ಯಾಧಿಕಾರಿಗಳು ಚನ್ನಪಟ್ಟಣ ಅರಣ್ಯ ಪ್ರದೇಶಕ್ಕೆ ಹಿಮ್ಮೆಟಿಸಿದ್ದಾರೆ. ಅಲ್ಲಿಂದ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿಗಳು ಕಬ್ಬಾಳು ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಡ್ರೈವ್ ಮಾಡುವ ವೇಳೆ ಸಂತೆಮೊಗೇನಹಳ್ಳಿ ಕೆರೆಯಲ್ಲಿ ಆನೆಗಳು ಬೀಡುಬಿಟ್ಟಿವೆ.

ಚನ್ನಪಟ್ಟಣ: ತಾಲೂಕಿನ ಸಂತೆಮೊಗೇನಹಳ್ಳಿ ಕೆರೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು, ಆನೆಗಳನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

ಕಳೆದ ಶನಿವಾರ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಇದೇ ಆನೆಗಳು ದಾಳಿ ಮಾಡಿದ್ದವು. ಆನಂತರ ಅವು ಅದೇ ಕಾಡಿನಲ್ಲಿ ಸಾಗಿ ಮದ್ದೂರು ಸಮೀಪ ಕಾಣಿಸಿಕೊಂಡಿದ್ದವು. ಮದ್ದೂರಿನಲ್ಲಿ ಕಾಣಿಸಿಕೊಂಡ ಆನೆಗಳನ್ನು ಸೋಮವಾರ ರಾತ್ರಿ ಅಲ್ಲಿನ ಅರಣ್ಯಾಧಿಕಾರಿಗಳು ಚನ್ನಪಟ್ಟಣ ಅರಣ್ಯ ಪ್ರದೇಶಕ್ಕೆ ಹಿಮ್ಮೆಟಿಸಿದ್ದಾರೆ. ಅಲ್ಲಿಂದ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿಗಳು ಕಬ್ಬಾಳು ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಡ್ರೈವ್ ಮಾಡುವ ವೇಳೆ ಸಂತೆಮೊಗೇನಹಳ್ಳಿ ಕೆರೆಯಲ್ಲಿ ಆನೆಗಳು ಬೀಡುಬಿಟ್ಟಿವೆ. ಕೆರೆಯಲ್ಲಿರುವ ಕಾಡಾನೆಗಳನ್ನು ನೋಡಲು ಜನರು ಮುಗಿಬಿದ್ದಿದ್ದರು. ಕೆರೆ ಹೆದ್ದಾರಿ ಬದಿಯಲ್ಲಿರುವ ಕಾರಣ ರಸ್ತೆಯಲ್ಲಿ ಹೋಗುವವರು, ಬರುವವರೆಲ್ಲಾ ನಿಂತು ನೋಡುತ್ತಿದ್ದು, ಕೆಲವರು ಆನೆಗಳ ಚಿತ್ರ, ವಿಡಿಯೋ ತೆಗೆಯುವುದು ಸಾಮಾನ್ಯವಾಗಿತ್ತು.

ಹಗಲು ಆನೆಗಳನ್ನು ಹಿಮ್ಮೆಟಿಸಿದಲ್ಲಿ ಆನೆಗಳು ಗ್ರಾಮಗಳಿಗೆ ನುಗ್ಗುವ ಅಪಾಯವಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸಂಜೆವರೆಗೂ ಕಾಡಾನೆಗಳು ಕೆರೆ ಬಿಟ್ಟು ಹೋಗದಂತೆ ಎಚ್ಚರವಹಿಸಿದ್ದು, ಸಂಜೆ ಬಳಿಕ ಕಬ್ಬಾಳು ಅರಣ್ಯ ಪ್ರದೇಶಕ್ಕೆ ಕಾಡಾನೆಗಳನ್ನು ಡ್ರೈವ್ ಮಾಡಲು ಸಿದ್ಧತೆ ನಡೆಸಿದ್ದಾರೆ.