ಸಾರಾಂಶ
- ಮಳೆಯಲ್ಲೂ ಶಾರದೆ ದರ್ಶನಕ್ಕೆ ಹರಿದು ಬಂದ ಭಕ್ತಸಾಗರಕನ್ನಡಪ್ರಭ ವಾರ್ತೆ, ಶೃಂಗೇರಿನವರಾತ್ರಿಯಲ್ಲಿ ವಿವಿಧ ಅಲಂಕಾರಗಳಿಂದ ಶೋಭಿಸುತ್ತಿರುವ ಶೃಂಗೇರಿ ಶಕ್ತಿ ಪೀಠದ ಅಧಿದೇವತೆ ಶಾರದಾಂಬೆ ಐದನೇ ದಿನ ವಾದ ಇಂದು ಗರುಡವಾಹನವೇರಿ ವೈಷ್ಣವಿಯಾಗಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದಳು.ಶ್ರೀ ಶಾರದೆಗೆ ವಿವಿಧ ಫಲಪುಷ್ಪ, ಸಕಲಾ ಭರಣಗಳಿಂದ ಅಲಂಕರಿಸಲಾಗಿತ್ತು. ವೈಷ್ಣವಿಯಾಗಿ ಕೈಯಲ್ಲಿ ಶಂಖ, ಚಕ್ರ, ಗದೆಗಳನ್ನು ಹಿಡಿದ ವಿಷ್ಣುವಿನ ವಾಹನವಾದ ಗರುಡವನ್ನೇರಿ ಭಕ್ತರನ್ನು ಅನುಗ್ರಹಿಸಿದ ಶಾರದೆ ಅಲಂಕಾರ ನಯನ ಮನೋಹರವಾಗಿತ್ತು.ಶ್ರೀ ಶಾರದಾಂಬೆ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ,ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಶಾರದೆಗೆ ನವರಾತ್ರಿ ವಿಶೇಷ ಪೂಜೆ ನೆರವೇರಿಸಿದರು. ಶ್ರೀಮಠದ ಆವರಣದಲ್ಲಿರುವ ಶ್ರೀ ಶಂಕರಾಚಾರ್ಯ,ಶ್ರೀ ತೋರಣ ಗಣಪತಿ, ಆಂಜನೇಯ,ಜನಾರ್ಧನಸ್ವಾಮಿ,ಶ್ರೀ ಸುಬ್ರಮಣ್ಯ,ಕೋದಂಡರಾಮ ಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಚಕ್ರಕ್ಕೆಸಂಪ್ರದಾಯದಂತೆ ನವಾವರಣ, ಸುವಾಸಿನಿ, ಕುಮಾರಿ ಪೂಜೆಗಳು ನೆರವೇರಿತು. ವೇದಗಳ ಪಾರಾಯಣ, ದುರ್ಗಾಸಪ್ತಶತಿ ಪಾರಾಯಣ,ಲಲಿತೋಪಾಖ್ಯಾನ,ಪ್ರಸ್ಥನ್ನತ್ರಯ ಭಾಷ್ಯ,ಶ್ರೀ ಭುವನೇಶ್ವರಿ ಜಪ,ಶ್ರೀ ಸೂಪ್ತ ಜಪ ಇತ್ಯಾದಿಗಳು ನೆರವೇರಿತು. ಜಗದ್ಗುರುಗಳು ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.ಜ ಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಸಿಂಹಾಸನರೂಡರಾಗಿ ನವರಾತ್ರಿಯ ಐದನೆ ದಿನದ ದರ್ಬಾರ್ ನಡೆಸಿದರು.ಕಳೆಗಟ್ಟಿದ ರಾಜಬೀದಿ ಉತ್ಸವ: ಒಂದೆಡೆ ಮಳೆ, ಇನ್ನೊಂದೆಡೆ ಎಲ್ಲೆಡೆ ಹಬ್ಬದ ಕಳೆ. ಕಳೆದ 2 ದಶಕಗಳಿಂದ ನಡೆದುಕೊಂಡು ಬರುತ್ತಿರುವ ರಾಜಬೀದಿ ಉತ್ಸವ ನವರಾತ್ರಿಗೆ ಇನ್ನಷ್ಠು ಮೆರಗು ನೀಡುತ್ತಿದೆ. ಶ್ರೀ ಮಠದ ಆನೆಗಳು, ವಾದ್ಯಮೇಳ, ವೇದಘೋಷಗಳು, ವಿವಿಧ ಸ್ತಬ್ದಚಿತ್ರಗಳು ಮೆರವಣಿಗೆಗೆ ರಂಗು ತಂದಿವೆ. ಶುಕ್ರವಾರ ಧರೆಕೊಪ್ಪ ಪಂಚಾಯಿತಿ ವ್ಯಾಪ್ತಿಯ ಭಕ್ತಾರೊಂದಿಗೆ ಸಂಘ ಸಂಸ್ಥೆಗಳು, ವಿವಿಧ ಭಜನಾ ತಂಡಗಳು ಪಾಲ್ಗೊಂಡಿದ್ದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಿರುವೆನಳ್ಳಿ ವಿದ್ವಾನ್ ಶ್ರೀ ಅಯಿಕುಡಿ ಕುಮಾರ್ ತಂಡದವರಿಂದ ಹಾಡುಗಾರಿಕೆ ನಡೆಯಿತು.-- ಬಾಕ್ಸ್--
ಬೆಳಿಗ್ಗೆಯಿಂದಲೂ ಸುರಿದ ಮಳೆ:ಶುಕ್ರವಾರ ಬೆಳಿಗ್ಗೆಯಿಂದಲೇ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಮಳೆಯಾಗಿ ತಂಪಿನ ವಾತಾವರಣ ಸೃಷ್ಠಿಸಿದ್ದಲ್ಲದೆ ಮಳೆಗಾಲವೇನೋ ಎಂದೇ ಭಾಸವಾಗುವಂತಾಯ್ತು. ಗುರುವಾರ ರಾತ್ರಿಯಿಡೀ ಸುರಿದಿದ್ದ ಮಳೆ ಬೆಳಗ್ಗೆಯೂ ನಿಲ್ಲದ ಕಾರಣ ಶ್ರೀಮಠದ ಎದುರು, ಭಾರತೀ ಬೀದಿ ರಸ್ತೆಯ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಹಾಕಿರುವ ಅಂಗಡಿ ಮುಂಗಟ್ಟುಗಳು ತೆರಯಲಾರದೇ ಹಗಲು ರಾತ್ರಿ ಟಾರ್ಪಲ್ ಹೊದಿಕೆಯಡಿ ಮುಚ್ಚಿಡುವಂತಹ ಪರಿಸ್ಥಿತಿ ಎದುರಾಯಿತು.-ಹೆಚ್ಚಿದ ಪ್ರವಾಸಿಗರು: ನೂಕು ನುಗ್ಗಲುನವರಾತ್ರಿ ಆರಂಭದಿಂದಲೂ ಶೃಂಗೇರಿಯತ್ತ ಬರುತ್ತಿರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಳೆಯನ್ನು ಲೆಕ್ಕಿಸದೆ ದೇವಿ ದರ್ಶನಕ್ಕೆ ಜನ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಶ್ರೀ ಮಠದ ಆವರಣ ಶ್ರೀ ಶಾರದಾಂಬಾ ದೇವಾಲಯ, ಅಕ್ಷರಭ್ಯಾಸ ಮಂಟಪ, ಬೋಜನ ಶಾಲೆ, ಭಾರತೀ ಬೀದಿ, ಗಾಂಧಿ ಮೈದಾನ, ಶ್ರೀ ಮಠದ ಆವರಣದ ಎಲ್ಲಾ ದೇವಾಲಯ, ವಸತಿ ಗೃಹ, ಗಾಂಧಿ ಮೈದಾನ ಎಲ್ಲೆಡೆ ಜನರ ನೂಕು ನುಗ್ಗಲು ಕಂಡುಬರುತ್ತಿದೆ.-ಇಂದು ಇಂದ್ರಾಣಿ ಅಲಂಕಾರಶನಿವಾರ ಶಾರದಾಂಬೆಗೆ ಇಂದ್ರಾಣಿ ಅಲಂಕಾರ ನಡೆಯಲಿದೆ. ಶತಚಂಡಿಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ ಆರಂಭಗೊಳ್ಳಲಿದೆ. ರಾಜಬೀದಿ ಉತ್ಸವದಲ್ಲಿ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರೊಂದ್ಗೆ ವಿವಿಧ ಸಂಘ ಸಂಸ್ಥೆಗಳು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಪಾಲಕ್ಕಾಡ್ ವಿದ್ವಾನ್ ಶ್ರೀ ಮೆಲರ್ ಕೋಡ್ ರವಿ ಮತ್ತು ತಂಡದಿಂದ ಹಾಡುಗಾರಿಕೆ ನಡೆಯಲಿದೆ.26 ಶ್ರೀ ಚಿತ್ರ 1-ಶೃಂಗೇರಿ ಶಾರದೆಗೆ ಶುಕ್ರವಾರ ವೈಷ್ಣವಿಯಲಂಕಾರ ಮಾಡಲಾಗಿತ್ತು.26 ಶ್ರೀ ಚಿತ್ರ 2-ಶೃಂಗೇರಿ ಭಾರತೀ ಬೀದಿಯಲ್ಲಿ ಮಳೆಯ ನಡುವೆಯೂ ಭಕ್ತರ ನೂಕು ನುಗ್ಗಲು ಕಂಡುಬಂದಿತು.
;Resize=(128,128))
;Resize=(128,128))
;Resize=(128,128))
;Resize=(128,128))